
ಬೆಂಗಳೂರು, (ಮಾರ್ಚ್ 18): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ಮಳೆಯ ಅಬ್ಬರ ಶುರುವಾಗಿದೆ. ನಿನ್ನೆ (ಮಾರ್ಚ್ 17) ಬೆಂಗಳೂರಿನ ಈ ವರ್ಷದ ಮಾಳೆ, ಇಂದು (ಮಾರ್ಚ್ 18) ಸಹ ಮುಂದುವರೆದಿದೆ. ಸಂಜೆಯಾಗುತ್ತಲೇ ಮಳೆ ಶುರುವಾಗಿದ್ದು, ಭಾರೀ ಬಿರುಗಾಳಿ ಮಳೆಗೆ ನೆಲಮಂಗಲದಲ್ಲಿ ನೇಮ್ ಬೋರ್ಡ್ ಪಿಲ್ಲರ್ ಧರೆಗುರುಳಿದೆ. ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ನಗರಸಭೆಯಿಂದ ನಿರ್ಮಾಣಗೊಂಡ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.