Headlines

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ನಮ್ಮ ಮೆಟ್ರೋ ಯೆಲ್ಲೋ ಲೈನ್​​ನಲ್ಲಿ ನಾಳೆಯಿಂದ 8ನೇ ರೈಲು ಸಂಚಾರ

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ನಮ್ಮ ಮೆಟ್ರೋ ಯೆಲ್ಲೋ ಲೈನ್​​ನಲ್ಲಿ ನಾಳೆಯಿಂದ 8ನೇ ರೈಲು ಸಂಚಾರ


ಯೆಲ್ಲೋ ಲೈನ್ ಮೆಟ್ರೋಚಿತ್ರದ ಕ್ರೆಡಿಟ್ ಮೂಲ: ಗೂಗಲ್

ಬೆಂಗಳೂರು, ಫೆಬ್ರವರಿ 26: ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚರಿಸಲಿರುವ ಬಿಐಎಂಎಲ್ ಸಂಸ್ಥೆ ತಯಾರಿಸಿದ ಮೂರನೇ ಡ್ರೈವರ್ಲೆಸ್ ರೈಲಿನ ಸೆಟ್ ಯಶಸ್ವಿಯಾಗಿ ಕೊತ್ತನೂರು ಡಿಪೋವನ್ನು ತಲುಪಿರುವ ಸುದ್ದಿಯ ನಡುವೆ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದೆ. ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನಾಳೆಯಿಂದ 8ನೇ ರೈಲು ಸಂಚಾರ ಮಾಡಲಿದೆ ಎಂದು ಪ್ರಕಟಣೆ.

ಪ್ರಕಟಣೆಯಲ್ಲಿ ಏನಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು 2026ರ ಫೆಬ್ರವರಿ 27 ರಿಂದ ಹಳದಿ ಮಾರ್ಗದಲ್ಲಿ 8ನೇ ರೈಲನ್ನು ಪ್ರಯಾಣಿಕರ ಸೇವೆಯನ್ನು ಒದಗಿಸುತ್ತಿದೆ. ಹೆಚ್ಚುವರಿ ರೈಲು ಸೇರ್ಪಡೆಯೊಂದಿಗೆ, ಸೋಮವಾರದಿಂದ ಶನಿವಾರದವರೆಗೆ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯ ವೇಳೆಯಲ್ಲಿ 10 ನಿಮಿಷಗಳು ಬದಲಾಗಿ 9 ನಿಮಿಷಗಳ ಅಂತರದಲ್ಲಿ ಹಾಗೂ ನ್ಯಾನ್-ಪೀಕ್ ಅವಧಿಯಲ್ಲಿ 18 ನಿಮಿಷಗಳ ಬದಲಾಗಿ 14 ನಿಮಿಷಗಳಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. ಭಾನುವಾರದ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ದಿನಗಳಲ್ಲಿ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ ಸಿಎಲ್.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋ; ಕೋತ್ತನೂರು ಡಿಪೋಗೆ ಮೂರನೇ ರೈಲು ಸೆಟ್ ಆಗಮನ

2025 ಆಗಸ್ಟ್ 10 ರಂದು ಎಲ್ಲೋ ಲೈನ್ ಉದ್ಘಾಟನೆ ಕಾರ್ಯಕ್ರಮ, ಆಗಸ್ಟ್ 11 ರಿಂದ ವಾಣಿಜ್ಯ ಸಂಚಾರವನ್ನು ಆರಂಭಿಸಿತ್ತು ಈ ಮಾರ್ಗದಲ್ಲಿ ನಮ್ಮ ಮೆಟ್ರೋ. 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 7 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ, 8ನೇ ರೈಲಿನ ಸೇರ್ಪಡೆಯಿಂದ ರೈಲುಗಳ ಸಂಚಾರದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯೂ ಇಳಿಕೆಯಾಗುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *