
ಬೆಂಗಳೂರು, ಏಪ್ರಿಲ್ 12: ಸಿಲಿಕಾನ್ ಸಿಟಿಯಲ್ಲಿ ಕಸ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಇದೀಗ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿಯಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಕಳೆದ ಒಂದು ತಿಂಗಳಿನಿಂದ ರಸ್ತೆಯಲ್ಲಿಯೇ ಬೃಹತ್ ಕಸದ ರಾಶಿ ಬಿದ್ದು ನಾರಬಣ್ಣದ ಸ್ಚಚ್ಛಚ್ಯ ಕಾರ್ಯ ನಿರ್ವಹಣೆಯಲ್ಲಿದೆ GBA ಸಂಪೂರ್ಣ ವಿಫಲವಾಗಿದೆ. ಈ ಮಧ್ಯೆ ಬೆಂಗಳೂರಿನ ವ್ಯಕ್ತಿಯೊಬ್ಬರು ‘ನಮ್ಮ ಕಸ’ (ನಮ್ಮಕಸ) ಎಂಬ ವೇದಿಕೆಯನ್ನೇ ಸೃಷ್ಟಿಸಿದ್ದಾರೆ. ಆ ಮೂಲಕ ಕಸ ನಿರ್ವಹಣೆಗೂ ಟೆಕ್ನಾಲಜಿ ಬಂದಿದೆ.
ಕಸದ ರಾಶಿ ಕಂಡು ಮೂಗು ಮುಚ್ಚಿಕೊಂಡು ಹೋಗುವ ಬದಲು, ಆ ಕಸವನ್ನು ಹಾಕಿದವರನ್ನು ಮತ್ತು ಅದನ್ನು ಎತ್ತದವರನ್ನು ಹೊಣೆಗಾರರನ್ನಾಗಿ ಮಾಡಲು ‘ನಮ್ಮ ಕಸ’ ಎಂಬ ಹೊಸ ಸೃಷ್ಟಿಯಾಗಿದೆ. ಫಿನ್‌ಟೆಕ್ ಸಂಸ್ಥೆಯ ಪ್ರಾಡಕ್ಟ್ ಡಿಸೈನರ್ಶ್ ವಿ.ಎಂ. ಅವರು ಕೇವಲ ಮೂರು ಸಾವಿರ ರೂ ವೆಚ್ಚದಲ್ಲಿ ಈ ಅದ್ಭುತ ಪ್ಲಾಟ್ಫಾರ್ಮ್ ಸಿದ್ಧಪಡಿಸಿದ್ದಾರೆ.
ಭಾರತೀಯ ಟೆಕ್ & ಇನ್ಫ್ರಾ ಟ್ವೀಟ್
ಬೆಂಗಳೂರಿನ ವ್ಯಕ್ತಿಯೊಬ್ಬರು ನಮ್ಮಕಸ ಎಂಬ ವೇದಿಕೆಯನ್ನು ನಿರ್ಮಿಸಿದ್ದಾರೆ, ಇದು ರಸ್ತೆ ಬದಿಯ ಕಸದಂತಹ ನಾಗರಿಕ ಸಮಸ್ಯೆಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ವರದಿ ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ, ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಹೊಣೆಗಾರಿಕೆಯ ಲೀಡರ್ಬೋರ್ಡ್ಗೆ ತರುತ್ತದೆ. pic.twitter.com/xjlVkWnPPh
— ಇಂಡಿಯನ್ ಟೆಕ್ & ಇನ್ಫ್ರಾ (@IndianTechGuide) ಏಪ್ರಿಲ್ 12, 2026
ಏನಿದು ನಮ್ಮ ಕಸ?
ನಮ್ಮ ಕಸವು ಸಾರ್ವಜನಿಕರ ಮೊದಲ ಸರಳ ವೆಬ್‌ಸೈಟ್ ಆಗಿದ್ದು, ರಸ್ತೆಬದಿಯ ಸೇರಿದಂತೆ ನಾಗರಿಕ ಸಮಸ್ಯೆಗಳು ಜನಸಾಮಾನ್ಯರು ಆನ್‌ಲೈನ್ ಮೂಲಕ ದೂರು ದಾಖಲಿಸಬಹುದಾದ ವೇದಿಕೆಯಾಗಿದೆ.
‘ನಮ್ಮ ಕಸ’ ವೇದಿಕೆಯ ಕಾರ್ಯ ಹೇಗೆ?
ಇದು ಕೇವಲ ದೂರು ನೀಡುವ ಅಪ್ಲಿಕೇಶನ್ ಅಲ್ಲ, ಬದಲಾಗಿ ಇದೊಂದು ಅಕೌಂಟೆಬಿಲಿಟಿ ಲೀಡರ್‌ಬೋರ್ಡ್. ರಸ್ತೆಬದಿಯಲ್ಲಿ ಕಸ ಕಂಡರೆ ಅದರ ಫೋಟೋ ತೆಗೆದು ಲೊಕೇಶನ್ ಸಮೇತ ಅಪ್ಲೋಡ್ ಮಾಡಬಹುದು. ಇಲ್ಲಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡ ಆಯ್ಕೆ ಇಲ್ಲ.
ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್‌ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಈ ಪ್ಲಾಟ್‌ಫಾರ್ಮ್‌ನಲ್ಲಿ ನಗರದ 24 ವಾರ್ಡ್‌ಗಳು, 28 ಶಾಸಕರು ಮತ್ತು 4 ಸಂಸದರ ಪಟ್ಟಿ ಇದೆ. ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಕಸದ ದೂರುಗಳಿವೆಯೋ ಆ ನಾಯಕರು ಲೀಡರ್ ಬೋರ್ಡ್ ಕೆಳಗೆ ಹೋಗುತ್ತಾರೆ. ಇನ್ನು ದೂರು ದಾಖಲಾದ ಕೂಡಲೇ ಸಂಬಂಧಪಟ್ಟ ಶಾಸಕರ ಎಕ್ಸ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ಎಚ್ಚರಿಕೆ ವ್ಯವಸ್ಥೆ ಕೂಡ ಇದೆ.
230ಕ್ಕೂ ಹೆಚ್ಚು ದೂರುಗಳು
ನಮ್ಮ ಕಸ ವೇದಿಕೆ ಸಿದ್ಧಪಡಿಸಲು ಜಾಸ್ತಿ ಹಣ ಖರ್ಚು ಮಾಡಲಾಗುತ್ತಿಲ್ಲ. ಮುಕ್ತವಾಗಿರುವ ತಂತ್ರಜ್ಞಾನಗಳನ್ನು ಕೆಲವೇ ದಿನಗಳಲ್ಲಿ ಜ್ಯೋತಿಶ್ ರೂಪಿಸಿದ್ದಾರೆ. ಏಪ್ರಿಲ್ 4 ರಂದು ಪ್ರಾರಂಭವಾಗುವ ಈ ಪ್ಲಾಟ್‌ಫಾರ್ಮ್‌ನಲ್ಲಿ 230ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮಹದೇವಪುರ ಭಾಗದಲ್ಲಿ ಕಸದ ರಾಶಿ ಅತಿ ಹೆಚ್ಚಾಗಿರುವುದು ಸದ್ಯಕ್ಕೆ ಕಂಡುಬಂದಿದೆ.
ಇದನ್ನೂ ಓದಿ: ವಿಡಿಯೋ: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ
ಈ ಸರ್ಕಾರದ ಜೊತೆಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರು ಜ್ಯೋತಿಶ್, ಬೆಂಗಳೂರಿನಿಂದ ಪ್ರಾರಂಭವಾಗಿರುವ ಈ ಕಸದ ಕ್ರಾಂತಿಯನ್ನು ದೇಶಾದ್ಯಂತ ವಿಸ್ತರಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ನಾಗರಿಕರು ಮತ್ತು ಸರ್ಕಾರ ಕೈಜೋಡಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರಿನ ವ್ಯಕ್ತಿಯೊಬ್ಬರು ನಮ್ಮಕಸ ಎಂಬ ವೇದಿಕೆಯನ್ನು ನಿರ್ಮಿಸಿದ್ದಾರೆ, ಇದು ರಸ್ತೆ ಬದಿಯ ಕಸದಂತಹ ನಾಗರಿಕ ಸಮಸ್ಯೆಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ವರದಿ ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ, ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಹೊಣೆಗಾರಿಕೆಯ ಲೀಡರ್ಬೋರ್ಡ್ಗೆ ತರುತ್ತದೆ.