ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!

ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!

ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!
‘ಕರ್ಣ’ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ, ಕಾರ್ತಿಕ್ ಮಹೇಶ್ ಜೊತೆಗಿನ ಸಂಬಂಧದ ವದಂತಿಗಳಿಗೆ ಬೇಸತ್ತಿದ್ದಾರೆ. ಇತ್ತೀಚೆಗೆ ‘ಆಲ್ಫಾ’ ಸಿನಿಮಾ ವೀಕ್ಷಿಸಿ ಹೊರಬಂದಾಗ ಪಾಪರಾಜಿಗಳು ಸುತ್ತುವರೆದಿದ್ದು, ಈ ವೇಳೆ ನಟಿ ತಮ್ಮ ಎಂದಿನ ಹಾಸ್ಯ ಪ್ರವೃತ್ತಿಯಿಂದಲೇ ಅವರಿಗೆ ತಿರುಗೇಟು ನೀಡಿದ್ದಾರೆ.
ಸದ್ಯ ನಮ್ರತಾ ಗೌಡ ಅವರ ಕರ್ಣ ಸೀರಿಯಲ್​ನಲ್ಲಿ ನಿತ್ಯಾ ಪಾತ್ರದ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.

ಆದರೆ, ಅವರು ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡ್ತಿರೋದು ಕಾರ್ತಿಕ್​ ಮಹೇಶ್​ ಜೊತೆಗಿನ ಸಂಬಂಧದ ಕುರಿತು (Karthik Mahesh and Namratha Gowda). ಇವರಿಬ್ಬರೂ ಲವ್​ನಲ್ಲಿ ಇದ್ದಾರೆ, ಮದ್ವೆ ಆಗ್ತಿದ್ದಾರೆ ಎನ್ನುವ ಸುದ್ದಿಗಳು ಇದಾಗಲೇ ಸಾಕಷ್ಟು ಬಾರಿ ಸದ್ದು ಮಾಡಿರುವುದು ಇದೆ.

ಈಚೆಗೆ ನಟಿ ಇದರಿಂದ ನೊಂದುಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. “ನನ್ನ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ನಾನು ಮದುವೆಯಾಗುತ್ತಿದ್ದರೆ ಅದನ್ನು ಗುಪ್ತವಾಗಿಡಲು ನನಗೆ ತುಂಬಾ ಕಷ್ಟವಾಗುತ್ತಿತ್ತು. ಮದುವೆ ಸೀರೆಗಾಗಿ ಹೊಸ ಬಣ್ಣವೊಂದು ಬರುತ್ತಿದೆ ಅಂತೆ, ಅದು ಮಾರುಕಟ್ಟೆಗೆ ಬರುವವರೆಗೆ ಇನ್ನೂ ಕೆಲವು ವರ್ಷ ಕಾಯುತ್ತೇನೆ,” ಎಂದು ಹಾಸ್ಯಮಿಶ್ರಿತವಾಗಿ ಅವರು ಉತ್ತರ ನೀಡುವ ಮೂಲಕ ಸುದ್ದಿಯನ್ನು ತಳ್ಳಿ ಹಾಕಿದ್ದರು.

ಆದರೂ, ಪಾಪರಾಜಿಗಳು ಅವರನ್ನು ಬಿಡುತ್ತಿಲ್ಲ. ಇದೀಗ ನಟಿ ನಮ್ರತಾ ಗೌಡ ‘ಆಲ್ಫಾ’ ಚಿತ್ರವನ್ನು ನೋಡಿ ಹೊರಬಂದಿದ್ದಾರೆ. ಈ ಸಿನಿಮಾದ ಬಗ್ಗೆ ಇದಾಗಲೇ ಕೆಲವು ತಾರೆಯರು ಪ್ರಚಾರ ಮಾಡುತ್ತಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನದ ಸಿನಿಮಾವನ್ನು ನೋಡಿ ನಮ್ರತಾ ಗೌಡ ಹೊರ ಬಂದು ನಿಂತಿದ್ದರು.

ಆ ಸಮಯದಲ್ಲಿ, ಅವರನ್ನು ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ನಮ್ರತಾ ಗೌಡ ಅವರನ್ನು ನೋಡಿದರೆ ಅವರು ಯಾರಿಗೋ ವೇಟ್​ ಮಾಡುತ್ತಿದ್ದಂತೆ ಕಾಣಿಸುವುದು ಸಹಜ. ಅದಕ್ಕೆ ಪಾಪರಾಜಿಗಳು ಪ್ರಶ್ನೆ ಕೇಳುವ ಮೊದಲೇ ನಮ್ರತಾ ಗೌಡ ಅವರು ನೀವು ವಾಪಸ್​ ಹೋಗಿ ಏನು ಹೆಡ್ಡಿಂಗ್​ ಕೊಡುತ್ತೀರಿ ಎನ್ನುವುದು ನನಗೆ ಗೊತ್ತು ಎಂದು ಪಾಪರಾಜಿಗಳಿಗೆ ಶಾಕ್​ ಕೊಟ್ಟಿದ್ದಾರೆ.

ನಮ್ರತಾ ಗೌಡ ಕಾರ್ತಿಕ್​ ಮಹೇಶ್​ಗೆ ಕಾಯುತ್ತಿದ್ದರು ಎಂದು ಹೆಡ್ಡಿಂಗ್​ ಕೊಡ್ತೀರಲ್ವಾ ಎಂದಾಗ ಅಲ್ಲಿ ಸೇರಿದ್ದವರು ಜೋರಾಗಿ ನಕ್ಕಿದ್ದಾರೆ. ಕೊನೆಗೆ ಒಬ್ಬರು ಏನು ಹೊಸ ವಿಷಯ ಎಂದು ಕೇಳಿದಾಗ ನಮ್ರತಾ ಗೌಡ, ಹೊಸ ವಿಷಯವೇನಿಲ್ಲ. ಹೇಳಿದ್ದನ್ನೇ ನೀವು ಹೇಳ್ತಿರಲ್ಲ, ಇನ್ನೇನು ಹೊಸ ವಿಷಯ ಎನ್ನುವ ಮೂಲಕ ತಮಾಷೆಯಾಗಿಯೇ ತಮ್ಮ ಸಂಬಂಧದ ಬಗ್ಗೆ ಮಾತನಾಡುವವರಿಗೆ ತಿರುಗೇಟು ನೀಡಿದ್ದಾರೆ.

Source link

Leave a Reply

Your email address will not be published. Required fields are marked *