Namratha Gowda: ಜೀ ಕನ್ನಡದ ಜನಪ್ರಿಯ ‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದ ಮೂಲಕ ಜನಮನ ಗೆದ್ದಿರುವ ನಟಿ ನಮ್ರತಾ ಗೌಡ ಇದೀಗ ತಮ್ಮ ಪಾತ್ರಕ್ಕೆ ಒಂದು ವರ್ಷವಾಗಿದ್ದು, ಪಾತ್ರಕ್ಕೆ ಸಿಕ್ಕ ಮೆಚ್ಚುಗೆ ಮತ್ತು ನಿರಾಸೆಯ ಬಗ್ಗೆ ತಮ್ಮ ಹೊಸ ಪೋಸ್ಟ್ ನಲ್ಲಿ ಶೇರ್ ಮಾಡಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಕರ್ಣ’. ಈ ಧಾರಾವಾಹಿಯಲ್ಲಿ ಇಬ್ಬರು ನಾಯಕಿಯರಿದ್ದು, ಅವರಲ್ಲಿ ಒಬ್ಬರು ನಮ್ರತಾ ಗೌಡ. ನಟಿ ನಮ್ರತಾ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಪಾತ್ರಕ್ಕೆ ನಟಿ ಎಂಟ್ರಿಕೊಟ್ಟು ಒಂದು ವರ್ಷಗಳಾಗಿವೆ.

ಕನ್ನಡ ಕಿರುತೆರೆಯಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡು, ಬಳಿಕ ನಾಯಕಿಯಾಗಿ ಜನಪ್ರಿಯತೆ ಪಡೆದವರು ನಮ್ರತಾ ಗೌಡ. ಇವರು ಈ ಹಿಂದೆ ‘ಪುಟ್ಟ ಗೌರಿಯ ಮದುವೆ’ ಧಾರಾವಾಹಿಯಲ್ಲಿ ಎರಡನೇ ನಾಯಕಿಯಾಗಿ, ಅದಾಗಿ ಹಲವು ವರ್ಷಗಳ ಬಳಿಕ ‘ನಾಗಿಣಿ 2’ ಧಾರಾವಾಹಿಯಲ್ಲಿ ನಾಗಿಣಿಯಾಗಿ ನಟಿಸಿದ್ದರು. ಅದಾದ ನಂತರ ಅವರು ಕಂ ಬ್ಯಾಕ್ ಮಾಡಿದ್ದು ‘ಕರ್ಣ’ ಧಾರಾವಾಹಿ ಮೂಲಕ.

ಕರ್ಣ ಧಾರಾವಾಹಿಯಲ್ಲಿ ಸ್ವಾಭಿಮಾನದ ಹುಡುಗಿಯಾಗಿ ನಿತ್ಯಾ ನಟಿಸುತ್ತಿದ್ದಾರೆ. ತಪ್ಪು ಅಂತ ಕಂಡರೆ ಪ್ರಶ್ನೆ ಮಾಡುವ ಹುಡುಗಿ, ಅಜ್ಜಿಯನ್ನು ಮತ್ತು ಮುದ್ದಿನ ತಂಗಿ ನಿಧಿಯನ್ನು ಕಣ್ ರೆಪ್ಪೆಯಂತೆ ಕಾಪಾಡುವ ಹುಡುಗಿ. ತಾನು ಪ್ರೀತಿಸಿದವನ ಕೈ ಹಿಡಿಯುವ ಕನಸು ಕಾಣುತ್ತಿದ್ದ ಹುಡುಗಿ ನಿತ್ಯಾ. ಆದರೆ ಕೊನೆಗೆ ರಮೇಶನ ಸಂಚಿನಿಂದ ತಾಳಿ ಕಟ್ಟದೇ ಕರ್ಣ ಹೆಂಡತಿಯಾಗಿ, ರಮೇಶ್ ಮನೆಯ ಸೊಸೆಯಾಗಿದ್ದಾಳೆ.

ಇದೀಗ ಧಾರಾವಾಹಿಯಲ್ಲಿ ನಿತ್ಯಾ ಪಾತ್ರಕ್ಕೆ ನಮ್ರತಾ ಗೌಡ ಎಂಟ್ರಿ ಕೊಟ್ಟು ಒಂದು ವರ್ಷಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ನಮ್ರತಾ ಗೌಡ, ತಮ್ಮ ಪಾತ್ರದ ಕುರಿತಾಗಿ, ಅದಕ್ಕೆ ಸಿಕ್ಕಿರುವ ಮೆಚ್ಚುಗೆ, ಜನರಿಗಾದ ನಿರಾಶೆ ಹಾಗೂ ಪಾತ್ರದ ಆಯ್ಕೆಯ ಬಗ್ಗೆ ಸ್ವೀಟ್ ಆಂಡ್ ಶಾರ್ಟ್ ಆಗಿ ತಮ್ಮ ಫೋಟೊ ಜೊತೆಗೆ ನಟಿ ಹಂಚಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ನಾನು ‘ಕರ್ಣ’ನ ಮೂಲಕ ಈ ಸ್ಟ್ರಾಂಗ್ "ನಿತ್ಯ" ಪಾತ್ರಕ್ಕೆ ಕಾಲಿಟ್ಟೆ. ಬಹಳಷ್ಟು ಶಕ್ತಿ, ಉತ್ಸಾಹ, ಕನಸುಗಳು ಮತ್ತು ಉತ್ಸಾಹದಿಂದ ಈ ಪಾತ್ರವನ್ನು ಆಯ್ಕೆ ಮಾಡಿದ್ದೇನೆ. ಈ ಪಾತ್ರದ ಮೂಲಕ ನಿಮ್ಮಲ್ಲಿ ಅನೇಕರನ್ನು ನಿರಾಶೆಗೊಳಿಸಿದೆ ಮತ್ತು ಬಹುಶಃ ಕೆಲವರನ್ನು ಪ್ರಭಾವಿಸಿದೆ. ಆದರೆ ಅವಳನ್ನು ಆಯ್ಕೆ ಮಾಡಿದ್ದಕ್ಕೆ ನಾನು ಎಂದಿಗೂ ವಿಷಾದಿಸುವುದಿಲ್ಲ ಎಂದು ನಮ್ರತಾ ಗೌಡ ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಿತ್ಯಾ-ನಿಧಿ ಫ್ಯಾನ್ ವಾರ್ ನಡೆಯುತ್ತಲೇ ಇರುತ್ತದೆ. ಕರ್ಣನಿಗೆ ನಿಧಿ ಸಿಗಬೇಕು ಎಂದು ಹಲವರು ಹೇಳಿದರೆ, ಕರ್ಣ-ನಿತ್ಯ ಪರ್ಫೆಕ್ಟ್ ಜೋಡಿ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ನಿತ್ಯಾ ಪಾತ್ರಕ್ಕೆ ಮೆಚ್ಚುಗೆಯೂ, ದೂರು ಸಲ್ಲುತ್ತಲೇ ಇರುತ್ತದೆ. ಇದಕ್ಕಾಗಿಯೇ ನಮ್ರತಾ ಗೌಡ ತಮ್ಮ ಪೋಸ್ಟ್ ಮೂಲಕ ಯಾರು ಏನೇ ಹೇಳಿದರು ನಿತ್ಯಾ ಪಾತ್ರ ಆಯ್ಕೆ ಮಾಡಿದುದಕ್ಕೆ ಖುಷಿ ಇದೆ ಎಂದಿದ್ದಾರೆ.

Source link
‘ಕರ್ಣ’ ಧಾರಾವಾಹಿಗೆ ಎಂಟ್ರಿ ಕೊಟ್ಟು 1 ವರ್ಷ… ನಿತ್ಯಾ ಪಾತ್ರ ಇಷ್ಟಪಡವರಿಗೆ ನಮ್ರತಾ ಗೌಡ ಏನಂದ್ರು?