Actress Amrutha Roopesh: ನನ್ನಮ್ಮ ಸೂಪರ್ಸ್ಟಾರ್ ಶೋನಲ್ಲಿ ಅಮೃತಾ ರೂಪೇಶ್, ಮಗಳು ಸಮನ್ವಿ ಜೊತೆ ಭಾಗವಹಿಸಿದ್ದರು. ಸಮನ್ವಿ ಮುದ್ದಾದ, ಪ್ರತಿಭಾನ್ವಿತ ಮಗಳು. ದುರದೃಷ್ಟವಶಾತ್ ಸಮನ್ವಿ ಅಪಘಾತದಲ್ಲಿ ನಿಧನರಾದರು. ಮಗಳ ಸಾವಿನ ಬಗ್ಗೆ ಸುಮನ್ ಟಿವಿ ಯುಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ.

ನಾವು ಸಮನ್ವಿ ಜಾತಕ ತೋರಿಸಿದಾಗ ಡಾಕ್ಟರ್ ಆಗ್ತಾಳೆ, ಕಲಾವಿದೆ ಆಗ್ತಾಳೆ ಎಂದು ಹೇಳಿದ್ದರು. ಸಮನ್ವಿ ಹೋದಮೇಲೆ ಅವಳ ಜಾತಕದಲ್ಲಿ ಹಾಗೆ ಇತ್ತು, ಆಯುಷ್ಯ ಕಮ್ಮಿ ಇತ್ತು ಎಂದು ಹೇಳಿದ್ದಾರೆ. ಒಂದು ವೇಳೆ ದೇವರ ಯೋಜನೆಯೇ ಹಾಗಿದ್ದರೆ ನಾವು ಏನು ಮಾಡೋಕೆ ಆಗತ್ತೆ? ಎಂದು ಅಮೃತಾ ಪ್ರಶ್ನೆ ಮಾಡಿದ್ದಾರೆ.

ಸಮನ್ವಿ ಹೋದಮೇಲೆ ನಾನು ಒಂದಿಷ್ಟು ವಿಷಯಗಳನ್ನು ನೋಡಿದ್ದೇನೆ. ನಡೆದುಕೊಂಡು ಹೋದವರು ಸಾಯ್ತಾರೆ, ಒಂದು ಮನೆ ಸುಟ್ಟು ಹೋಯ್ತು, ಏನೇನೋ ಆಗಿ ಸಾಯುತ್ತಿದ್ದಾರೆ. ನಾಳೆ ಬೆಳಿಗ್ಗೆ ನಾವು ಬದುಕಿ ಎಚ್ಚರ ಆದರೆ ಅದೇ ದೊಡ್ಡದು. ಆರೋಗ್ಯದ ಬಗ್ಗೆ ತುಂಬ ಯೋಚನೆ ಮಾಡ್ತೀವಿ ಎಂದು ಅಮೃತಾ ಹೇಳಿದ್ದಾರೆ.

ಜೀವನ ಮಾಡಬೇಕು, ನಾಲ್ಕು ಜನರ ಮಧ್ಯೆ ನಾವು ಇರಬೇಕು, ಆಸ್ತಿ ಮಾಡಬೇಕು, ವೃದ್ಧಾಪ್ಯದಲ್ಲಿ ಹಾಗೆ ಇರಬೇಕು ಅಂತ ಹೇಳ್ತಿವಿ. ಆದರೆ ಯಾವುದನ್ನು ಮಾಡ್ತೀರಾ ಎಂದು ನಟಿ ಅಮೃತಾ ಅವರು ಹೇಳಿದ್ದಾರೆ.

ಕೆಲವರು ಮಕ್ಕಳು ಬೇಡ ಎಂದು ಹೇಳುತ್ತಾರೆ. ಇದು ಕೂಡ ಬೆಟರ್ ಎನಿಸುತ್ತದೆ. ಮಗುವಿಗೆ ಏನಾದರೂ ಆದರೆ ತಡೆದುಕೊಳ್ಳೋಕೆ ಆಗೋದಿಲ್ಲ. ನಮಗೆ ಮಕ್ಕಳು ಇಲ್ಲ ಅಂದಿದ್ರೆ ನಾವು ನಮಗೆ ಏನಾದರೂ ತಲೆ ಕೆಡಿಸಿಕೊಳ್ಳೋದಿಲ್ಲ. ನಾವು ಈ ಹಿಂದೆ ಏನು ಮಾಡಿರ್ತೀವೋ ಅದನ್ನು ನಮಗೆ ಮಕ್ಕಳ ರೂಪದಲ್ಲಿ ಕೂಡ ಕಳಿಸಿರ್ತಾನೆ ಎಂದು ಅಮೃತಾ ರೂಪೇಶ್ ಹೇಳಿದ್ದಾರೆ.

ನಾವು ಮತ್ತೆ ಮಗುವನ್ನು ಪ್ಲ್ಯಾನ್ ಮಾಡಿಲ್ಲ. ಹಾಗೆ ನಮಗೆ ವಯಸ್ಸು ಆಗ್ತಿದೆ, ಈಗ ಈ ಮಗು ಚೆನ್ನಾಗಿದ್ದರೆ ಸಾಕು ಎಂದು ಅಮೃತಾ ಹೇಳಿದ್ದಾರೆ. ಆದರೆ ಮನೆ ತುಂಬ ಮಕ್ಕಳಿರಬೇಕು ಎಂದು ಕೂಡ ಅವರು ಹೇಳಿದ್ದಾರೆ.

Source link
ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು