ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್ ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜೊತೆ ರಿಯಲ್ ಪತಿ ಬಗ್ಗೆ ಮಾತನಾಡಿದ್ದಾರೆ.

ನಾನು ಹಾಗೂ ನನ್ನ ಗಂಡ ಮೊದಲಿನಿಂದಲೂ ಸ್ನೇಹಿತರು. ಕೆಲಸದ ವಿಚಾರಕ್ಕೆ ಅವರು, ನಾನು ಮೀಟ್ ಮಾಡಿದೆವು. ಆಗ ಅವರು ನನ್ನ ಮದುವೆ ಆಗ್ತೀಯಾ ಎಂದು ಪ್ರಶ್ನೆ ಮಾಡಿದರು. ನನ್ನ ಜೀವನದ ಏರಿಳಿತವನ್ನು ಅವರು ನೋಡಿದ್ದಾರೆ, ಹೀಗಾಗಿ ನಾನು ಓಕೆ ಎಂದೆ. ನಮ್ಮದು ಲವ್ ಮ್ಯಾರೇಜ್. ಆದರೆ ಲವ್ ಪ್ರಪೋಸ್ ಇರಲಿಲ್ಲ.

ನನ್ನ ಗಂಡನ ಹೆಸರು ಹೇಮಂತ್ ಶ್ರೀನಿವಾಸ್. ಈಗ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ನಟಿಸುವುದು ನನಗಿಂತ ಅವರಿಗೆ ಜಾಸ್ತಿ ಖುಷಿ.

ಅವರಂತೂ ತುಂಬ ಖುಷಿಯಿಂದ ಇದ್ದಾರೆ. ನನ್ನ ಜೊತೆ ಯಾರಾದರೂ ಮಾತನಾಡಿ, ಫೋಟೋ ತಗೊಂಡರೆ ಅವರು ದೂರದಲ್ಲೇ ನಿಂತು ನೋಡಿ ಖುಷಿಪಡ್ತಾರೆ.

ಮದುವೆಯಾದ್ಮೇಲೆ ನಟನೆ ಬೇಡ ಎಂದು ನಾನು ದೂರ ಇದ್ದೆ. ಆದರೆ ನನ್ನ ಗಂಡನೇ ಫೋಸ್ಟ್ ಮಾಡಿದ್ರು, ನಿನಗೆ ನಟನೆ ಖುಷಿ ಇದೆ ಎಂದರೆ ಮಾಡು ಎಂದರು. ಹೀಗಾಗಿ ಮತ್ತೆ ನಟನೆಗೆ ಬಂದೆ.

ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೀನಿ. ಅವಕಾಶಗಳು ಇಲ್ಲದಿದ್ದಾಗ ನನ್ನ ಮನೆಯಲ್ಲಿ ಎಲ್ಲರೂ ಸಪೋರ್ಟ್ ಮಾಡಿದ್ದಾರೆ, ಪದೇ ಪದೇ ಮೋಟಿವೇಟ್ ಮಾಡುತ್ತಿದ್ದರು. ಕಷ್ಟಪಟ್ಟಿದ್ದಕ್ಕೆ ಫಲಿತಾಂಶ ಸಿಗುತ್ತದೆ ಎಂದು ಹೇಳುತ್ತಲೇ ಇದ್ದರು. ಎಲ್ಲೇ ಕರೆದರೂ ಆಡಿಷನ್‌ನಲ್ಲಿ ಭಾಗವಹಿಸುತ್ತಿದ್ದೆ, ಒಳ್ಳೆಯ ಡೈರೆಕ್ಟರ್ ಅಡಿಯಲ್ಲಿ ಕೆಲಸ ಮಾಡಿದ್ದೀನಿ, ಎಷ್ಟೋ ಪ್ರಾಜೆಕ್ಟ್‌ಗಳು ಕೈತಪ್ಪಿ ಹೋದಾಗ ನನಗೆ ಯಾಕೆ ಹೀಗಾಯ್ತು ಎಂದು ಬೇಸರ ಮಾಡಿಕೊಂಡಿದ್ದೂ ಇದೆ. ಆಗೆಲ್ಲ ಮನೆಯವರು ಮೋಟಿವೇಟ್ ಮಾಡುತ್ತಿದ್ದರು.

Source link
ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview