
ಈರುಳ್ಳಿ ಮತ್ತು ಬೆಳ್ಳುಳ್ಳಿಗೆ ಹಲ್ಲಿಗಳು ಮನೆಯಿಂದ ಓಡುತ್ತವೆ
ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಡುವುದರಿಂದ ಹಲ್ಲಿಗಳು ಮತ್ತು ಇತರ ಕೀಟಗಳನ್ನು ದೂರವಿಡಬಹುದು. ಈರುಳ್ಳಿ, ಬೆಳ್ಳುಳ್ಳಿ ವಾಸನೆ ಹಲ್ಲಿಗಳಿಗೆ ಇಷ್ಟವಾಗದು. ಹೀಗಾಗಿ ಈರುಳ್ಳಿ ಬೆಳ್ಳುಳ್ಳಿ ರಸವನ್ನು ಆಯಾ ಜಾಗದಲ್ಲಿ ಸಿಂಪಡಿಸಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಪುಡಿಮಾಡಿ, ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಹಲ್ಲಿಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಘಾಟು ವಾಸನೆಯನ್ನು ಇಷ್ಟಪಡುವುದಿಲ್ಲ .
ಹಲ್ಲಿಗಳನ್ನು ವಿನೆಗರ್ ನಿಂದ ಓಡಿಸಿ
ಹಲ್ಲಿಗಳು ಹೆಚ್ಚಾಗಿ ಬರುವ ಕಡೆ ವಿನೆಗರ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಿ. ವಿನೆಗರ್ ನ ಘಾಟು ವಾಸನೆಯಿಂದಾಗಿ, ಹಲ್ಲಿ ಆ ಸ್ಥಳದ ಹತ್ತಿರವೂ ಬರುವುದಿಲ್ಲ.
ಮೊಟ್ಟೆಯ ಚಿಪ್ಪುಗಳು ಕೆಲಸ ಮಾಡುತ್ತವೆ
ಮೊಟ್ಟೆಯ ಚಿಪ್ಪನ್ನು ಬಳಸಿ ಹಲ್ಲಿಗಳನ್ನು ಮನೆಯಿಂದ ಓಡಿಸಬಹುದು. ಹಲ್ಲಿಗಳು ಮೊಟ್ಟೆಯ ಚಿಪ್ಪಿನ ವಾಸನೆಯನ್ನು ಇಷ್ಟಪಡುವುದಿಲ್ಲ . ಆದ್ದರಿಂದ, ಮೊಟ್ಟೆಯ ಚಿಪ್ಪುಗಳನ್ನು ಇಟ್ಟರೆ, ಹಲ್ಲಿಗಳು ಮನೆಯೊಳಗೆ ಬರುವುದಿಲ್ಲ.