How to grow eyelashes: ಪ್ರತಿಯೊಬ್ಬ ಮಹಿಳೆಗೂ ಉದ್ದನೆಯ, ದಟ್ಟವಾದ ರೆಪ್ಪೆಗೂದಲುಗಳಿರಬೇಕೆಂಬ ಆಸೆ ಇರುತ್ತದೆ. ಅದಕ್ಕೆ ಕೆಲವರು ಮಾರುಕಟ್ಟೆಯಲ್ಲಿ ಸಿಗೊ ದುಬಾರಿ ರಾಸಾಯನಿಕಗಳ ಮೊರೆ ಹೋಗುತ್ತಾರೆ. ಆದ್ರೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥ ಬಳಸಿ ಕೇವಲ 4 ವಾರದಲ್ಲಿ ಸುಂದರವಾದ ರೆಪ್ಪೆ ಪಡಿಬೋದು.

ಕೆಲವರಿಗೆ ರೆಪ್ಪೆಗೂದಲುಗಳು (Eyelashes) ತುಂಬಾ ತೆಳುವಾಗಿರುತ್ತವೆ. ಆಗ ಮುಖದ ಅಂದ ಸ್ವಲ್ಪ ಕಡಿಮೆಯಾದಂತೆ ಅನಿಸಬಹುದು. ಆದ್ದರಿಂದ ನೀವೂ ಉದ್ದವಾದ ಮತ್ತು ದಟ್ಟವಾದ ರೆಪ್ಪೆಗೂದಲುಗಳನ್ನ ಬಯಸಿದರೆ ಕೆಲವು ಮನೆಮದ್ದುಗಳು ಅದ್ಭುತವಾಗಿ ಕೆಲಸ ಮಾಡುತ್ತವೆ.

ಉದ್ದನೆಯ ಮತ್ತು ದಟ್ಟವಾದ ರೆಪ್ಪೆಗೂದಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಇದಕ್ಕಾಗಿ ಅನೇಕರು ದುಬಾರಿ ಸೀರಮ್‌ಗಳು, ಐಲ್ಯಾಶ್ ಎಕ್ಸ್‌ಟೆನ್ಶನ್ ಅಥವಾ ಇತರ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದ ನ್ಯಾಚುರಲ್ ಆಗಿ ಕಳೆ ಬರುವುದಿಲ್ಲ. ಬದಲಾಗಿ, ಸುಲಭವಾದ ಮನೆಮದ್ದುಗಳನ್ನು ಬಳಸುವ ಮೂಲಕ ಯಾವುದೇ ಅಡ್ಡಪರಿಣಾಮವಿಲ್ಲದೆ 4 ರಿಂದ 8 ವಾರದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

1. ಹರಳೆಣ್ಣೆ (Castor Oil)ರೆಪ್ಪೆಗೂದಲುಗಳ ಬೆಳವಣಿಗೆಗೆ ಹರಳೆಣ್ಣೆ ಅತ್ಯುತ್ತಮ ಮತ್ತು ಜನಪ್ರಿಯ ಮದ್ದು. ಇದರಲ್ಲಿರುವ ‘ರೈಸಿನೋಲಿಕ್ ಆಸಿಡ್’ ಕೂದಲಿನ ಬೇರುಗಳಿಗೆ ಪೋಷಣೆ ನೀಡಿ ಅವುಗಳನ್ನು ಗಟ್ಟಿಗೊಳಿಸುತ್ತದೆ.ಬಳಸುವ ವಿಧಾನ: ರಾತ್ರಿ ಮಲಗುವ ಮುನ್ನ ಸ್ವಚ್ಛವಾದ ಮಸ್ಕಾರಾ ಬ್ರಷ್ ಅಥವಾ ಇಯರ್ ಬಡ್ ಸಹಾಯದಿಂದ ಸ್ವಲ್ಪ ಎಣ್ಣೆಯನ್ನು ರೆಪ್ಪೆಗಳಿಗೆ ಹಚ್ಚಿ. ಬೆಳಗ್ಗೆ ಎದ್ದ ನಂತರ ತೊಳೆಯಿರಿ. 2-4 ವಾರಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ.

ಕೊಬ್ಬರಿ ಎಣ್ಣೆಯು ಕೇವಲ ತಲೆಯ ಕೂದಲಿಗೆ ಮಾತ್ರವಲ್ಲ, ರೆಪ್ಪೆಗೂದಲುಗಳಿಗೂ ತುಂಬಾ ಒಳ್ಳೆಯದು. ಇದರಲ್ಲಿರುವ ‘ಲಾರಿಕ್ ಆಸಿಡ್’ ಕೂದಲು ತುಂಡಾಗುವುದನ್ನು ತಡೆಯುತ್ತದೆ.ಬಳಸುವ ವಿಧಾನ: ರಾತ್ರಿ ಮಲಗುವ ಮುನ್ನ ಹಗುರವಾದ ಕೈಗಳಿಂದ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ನೀವು ಇದನ್ನು ಹರಳೆಣ್ಣೆಯ ಜೊತೆ ಮಿಕ್ಸ್ ಮಾಡಿ ಕೂಡ ಬಳಸಬಹುದು.

ಅಲೋವೆರಾ ಜೆಲ್‌ನಲ್ಲಿ ವಿಟಮಿನ್ A, C ಮತ್ತು E ಸಮೃದ್ಧವಾಗಿದ್ದು, ಇದು ರೆಪ್ಪೆಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.ಬಳಸುವ ವಿಧಾನ: ತಾಜಾ ಅಲೋವೆರಾ ಜೆಲ್ ಅನ್ನು ರೆಪ್ಪೆಗಳಿಗೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಿರಿ ಅಥವಾ ರಾತ್ರಿ ಪೂರ್ತಿ ಹಾಗೆಯೇ ಬಿಡಬಹುದು.

ವಿಟಮಿನ್ ಇ ನಲ್ಲಿ ಆಂಟಿ-ಆಕ್ಸಿಡೆಂಟ್‌ಗಳಿದ್ದು, ಇವು ರೆಪ್ಪೆಗಳು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತವೆ.ಬಳಸುವ ವಿಧಾನ: ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಕತ್ತರಿಸಿ ಎಣ್ಣೆಯನ್ನು ಹೊರತೆಗೆಯಿರಿ. ಇದನ್ನು ತೆಂಗಿನ ಎಣ್ಣೆ ಅಥವಾ ಹರಳೆಣ್ಣೆಯೊಂದಿಗೆ ಬೆರೆಸಿ ರಾತ್ರಿ ಹಚ್ಚಿ ಮಲಗಿ.

ಬಾದಾಮಿ ಎಣ್ಣೆಯು ವಿಟಮಿನ್ ಇ ಇಂದ ಸಮೃದ್ಧವಾಗಿದ್ದು, ಉದ್ದನೆಯ ರೆಪ್ಪೆಗಳನ್ನು ಪಡೆಯಲು ಸಹಕಾರಿ.ಬಳಸುವ ವಿಧಾನ: ರಾತ್ರಿ ಸ್ವಲ್ಪ ಎಣ್ಣೆಯನ್ನು ಹಚ್ಚಿ ಹಗುರವಾಗಿ ಮಸಾಜ್ ಮಾಡಿ, ಬೆಳಗ್ಗೆ ತೊಳೆಯಿರಿ.ಸೂಚನೆ: ಎಣ್ಣೆ ಅಥವಾ ಜೆಲ್ ಹಚ್ಚುವಾಗ ಅದು ಕಣ್ಣಿನ ಒಳಗೆ ಹೋಗದಂತೆ ಜಾಗರೂಕತೆ ವಹಿಸಿ. ನಿಮಗೆ ಯಾವುದಾದರೂ ಅಲರ್ಜಿ ಇದ್ದರೆ ಮೊದಲು ಪ್ಯಾಚ್ ಟೆಸ್ಟ್ ಮಾಡಿ ನೋಡಿ.

Source link
ಪ್ರತಿದಿನ ಇದೊಂದನ್ನ ಹಚ್ಚಿ ನೋಡಿ, ಕೇವಲ 4 ವಾರದಲ್ಲಿ ರೆಪ್ಪೆಗೂದಲುಗಳು ವೇಗವಾಗಿ ಬೆಳೆದಿರುತ್ತೆ