
ಬೆಂಗಳೂರು, ಮಾರ್ಚ್ 26: ಹೊಸದನ್ನು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಫ್ರಾಂಚೈಸಿಯು ತನ್ನ ಅಧಿಕೃತ ಪೇಮೆಂಟ್ಸ್ ಪಾರ್ನರ್ ಆಗಿ ನವಿ ಯುಪಿಐ (Navi UPI ಅಪ್ಲಿಕೇಶನ್) ಅನ್ನು ಉಳಿಸಿಕೊಂಡಿದೆ. 2026ರ ಐಪಿಎಲ್ ಸೀಸನ್‌ನಲ್ಲಿ ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ (ನವಿ ಯುಪಿಐನಿಂದ ನಡೆಸಲ್ಪಡುವ ಪಂದ್ಯದ ವೇಗದ ಕ್ಷಣ) ಪ್ರಶಸ್ತಿಯನ್ನು ಪರಿಚಯಿಸಲಾಗಿದೆ.
ಪಂದ್ಯಕ್ಕೆ ತಿರುವು ಕೊಟ್ಟಂತಹ ಅತ್ಯಂತ ನಿರ್ಣಾಯಕವಾದ, ಬಹಳ ಪರಿಣಾಮಕಾರಿ ಕ್ಷಣಕ್ಕೆ ಕಾರಣವಾದ ಆಟಗಾರನನ್ನು ಗುರುತಿಸಿ ಈ ಪ್ರಶಸ್ತಿಯನ್ನು ನಿಗದಿಪಡಿಸಲಾಗಿದೆ. ಪಡೆದ ಆಟಗಾರನ ಅಕೌಂಟ್‌ಗೆ ನವಿ ಯುಪಿಐ ಮೂಲಕ ತತ್ಕ್ಷಣವೇ 50,000 ರೂ ಹಣವನ್ನು ಹಾಕದಿದ್ದರೆ.
‘ಈ ಸೀಸನ್‌ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಜೊತೆ ನಮ್ಮ ಪಾರ್ಟ್ನರ್ ಶಿಪ್ ಮುಂದುವರಿಸಲು ಸಂತೋಷವಾಗಿದೆ. ಕ್ರಿಕೆಟ್ ಎಂಬುದು ಕ್ಷಣಗಳ ಒಂದು ಆಟ. ಪಂದ್ಯದ ಫಲಿತಾಂಶವನ್ನೇ ಬದಲಿಸುವ ಅತ್ಯಂತ ವೇಗದ ಮತ್ತು ಅತ್ಯಂತ ನಿರ್ಣಾಯಕ ಕ್ಷಣ ಆಗಿರುತ್ತದೆ. ನವಿ ಯುಪಿಐ ಎಷ್ಟು ತ್ವರಿತವಾಗಿ ಕೆಲಸ ಮಾಡುತ್ತದೆ ಎಂದರೆ, ಅದನ್ನು ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಹೋಲಿಸಬಹುದು’ ಎಂದು ನವಿ ಲಿಮಿಟೆಡ್ ಎಂಡಿ ಮತ್ತು ಸಿಐಒ ಆದ ರಾಜೀವ್ ನರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಡೀಸೆಲ್ ಬೆಲೆಗಳು: ಭಾರತದಲ್ಲಿ ನಯಾರಾ ಪೆಟ್ರೋಲ್ ದರ; ಲೀಟರ್‌ಗೆ 5 ರೂ ಬೆಲೆ ಏರಿಕೆ
ಆರ್ಸಿಬಿ ಸಿಐಒ ರಾಜೇಶ್ ವಿ ಮೆನನ್ ಕೂಡ ಹೇಳಿಕೆ ನೀಡಿದ್ದು, ‘ಆರ್ಸಿಬಿಯ ವೇಗ ಮತ್ತು ಪರಿಣಾಮದ ಗುಣವು ಫಾಸ್ಟೆಸ್ಟ್ ಮ್ಯಾಚ್‌ಗೆ ಸರಿ ಹೊಂದುತ್ತದೆ’ ಎಂದು ಹೇಳಿದರು.
ಇನ್ನು, ನವಿ ಯುಪಿಐನ ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಆರ್ಸಿಬಿ ಆಡುವ ಎಲ್ಲಾ ಪಂದ್ಯಗಳಲ್ಲಿ ಇರುತ್ತದೆ. ಇದರಲ್ಲಿ ನವಿ ಯುಪಿಐ ಬಳಕೆದಾರರ ಪಾಲ್ಗೊಳ್ಳುವಿಕೆಗೆ ಅವಕಾಶವಿದೆಯಾ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ನವಿ ಯುಪಿಐ ಬಳಕೆದಾರರಿಗೆ ಐಪಿಎಲ್ ಪಂದ್ಯಗಳಲ್ಲಿ ಇತರ ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.
ನವಿ ಆ್ಯಪ್‌ನಲ್ಲಿ ಪವರ್‌ಪ್ಲೇ ಸ್ಪರ್ಧೆ ಇದ್ದು, ಅದರಲ್ಲಿ ಭಾಗವಹಿಸುವವರು ಯುಪಿಐ ಟ್ರಾನ್‌ಸಾಕ್ಷನ್ ಮಾಡಿದರೆ ಆರ್‌ಸಿಬಿ ಆಟಗಾರರ ಡಿಜಿಟಲ್ ಕಾರ್ಡ್‌ಗಳನ್ನು ಸಂಗ್ರಹಿಸಬಹುದು. ಆರ್ಸಿಬಿ ಜೆರ್ಸಿಗಳು ಮತ್ತು ಆಟಗಾರರಿಂದ ಸಹಿಹಾಕಲಾಗದ ಕ್ರಿಕೆಟ್ ಬ್ಯಾಟುಗಳನ್ನು ಗೆಲ್ಲಲು ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಆರೋಗ್ಯ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ ಮ್ಯಾಚುಗಳಲ್ಲಿ ಟಿಕೆಟ್ ಮಾರಾಟವು ಸಾರ್ವಜನಿಕರಿಗೆ ಲಭ್ಯವಾಗುತ್ತದೆ 24 ಗಂಟೆಗಳ ಮೊದಲು ನವಿ ಯುಪಿಐ ಬಳಕೆದಾರರಿಗೆ ಖರೀದಿಗೆ ಲಭ್ಯವಿರುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ