ಈ ಅಣಬೆ ತಿಂದ್ರೆ ಕಿಕ್ಕೋ ಕಿಕ್ಕು; ಬೆಂಗಳೂರಿಗೆ ಬರುತ್ತಿದ್ದಂತೆ ₹50 ಕೋಟಿ ಮಾಲ್‌ ಸಮೇತ ಲಾಕ್! | Ncb Bengaluru Rs 50 Crore Drugs Seized Kempegowda International Airport Sat

ಬಂಧಿತ ಆರೋಪಿಗಳಿಂದ ಒಟ್ಟು 45 ಕೆ.ಜಿ. ಹೈಡ್ರೋಗಾಂಜಾ ಮತ್ತು 6 ಕೆ.ಜಿ. ಸೈಲೋಸಿಬಿನ್ (Psilocybin) ಅಣಬೆ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ಆರಂಭದಲ್ಲಿ ಥೈಲ್ಯಾಂಡ್‌ನಿಂದ ಡ್ರಗ್ಸ್ ಸಾಗಾಟವಾಗುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು, ಕಾರ್ಯಾಚರಣೆ ವೇಳೆ ಕೊಲಂಬೋದಿಂದ ಆಗಮಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೊದಲು ವಶಕ್ಕೆ ಪಡೆದರು.

ಈ ಇಬ್ಬರಿಂದ 31 ಕೆ.ಜಿ. ಹೈಡ್ರೋಗಾಂಜಾ ಮತ್ತು 4 ಕೆ.ಜಿ. ಸೈಲೋಸಿಬಿನ್ ಅಣಬೆಯನ್ನು ಸೀಜ್ ಮಾಡಲಾಯಿತು. ಇವರ ವಿಚಾರಣೆ ನಡೆಸಿದಾಗ, ಮುಂದಿನ ವಿಮಾನದಲ್ಲಿ ಶ್ರೀಲಂಕಾದಿಂದ ಡ್ರಗ್ಸ್‌ನ ಮುಖ್ಯ ಹ್ಯಾಂಡ್ಲರ್ ಬರುವ ಬಗ್ಗೆ ಸುಳಿವು ಸಿಕ್ಕಿತು. ಇದರನ್ವಯ ಕಾರ್ಯತಂತ್ರ ರೂಪಿಸಿದ ಎನ್‌ಸಿಬಿ ತಂಡ, ಕಾದು ಕುಳಿತು ಇನ್ನೋರ್ವ ಶ್ರೀಲಂಕಾ ಪ್ರಜೆಯಾದ ಮುಖ್ಯ ಹ್ಯಾಂಡ್ಲರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಈ ಹ್ಯಾಂಡ್ಲರ್‌ನಿಂದ 14 ಕೆ.ಜಿ. ಹೈಡ್ರೋಗಾಂಜಾ ಮತ್ತು 2 ಕೆ.ಜಿ. ಸೈಲೋಸಿಬಿನ್ ಅಣಬೆಯನ್ನು ವಶಪಡಿಸಿಕೊಳ್ಳಲಾಗಿದೆ.

Source link

Leave a Reply

Your email address will not be published. Required fields are marked *