ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ಪ್ರದರ್ಶನ ಬೆನ್ನಲ್ಲೇ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ತಮ್ಮ ಕೋಚ್ ಬದಲಿಸಲು ನಿರ್ಧರಿಸಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ಜಾವೆಲಿನ್ ಎಸೆತದಲ್ಲಿ ವಿಶ್ವದಾಖಲೆ ಹೊಂದಿರುವ ಚೆಕ್ ಗಣರಾಜ್ಯದ ಜಾನ್ ಜೆಲೆಜ್ನಿ ಜೊತೆಗಿನ ಕೋಚಿಂಗ್ ಅನ್ನು ನೀರಜ್ ಕೊನೆಗೊಳಿಸಿದ್ದಾರೆ.

ಕಳೆದ ವರ್ಷ ದೋಹಾ ಡೈಮಂಡ್ ಲೀಗ್‌ನಲ್ಲಿ 90 ಮೀ. ದಾಖಲೆ ಬರೆದಿದ್ದ ನೀರಜ್ ಆ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 9ನೇ ಸ್ಥಾನ ಪಡೆದಿದ್ದರು. ಇದರ ಬೆನ್ನಲ್ಲೇ ಕೋಚ್ ಬದಲಿರುವ ನಿರ್ಧಾರ ಕೈಗೊಂಡಿದ್ದಾರೆ.

‘ಜೆಲೆಜ್ನಿಯಿಂದ ನಾನು ಬಹಳಷ್ಟು ಕಲಿತಿದ್ದೇನೆ. ನನ್ನ ಆದರ್ಶ ವ್ಯಕ್ತಿಯಾಗಿದ್ದವರಿಂದ ಪಡೆದ ತರಬೇತಿ ಬಗ್ಗೆ ನನಗೆ ಹೆಮ್ಮೆಯಿದೆ. ಅವರು ನಾನು ಭೇಟಿಯಾದ ಅತ್ಯುತ್ತಮ ಮನುಷ್ಯರಲ್ಲಿ ಒಬ್ಬರು’ ಎಂದಿದ್ದಾರೆ.

ಆದರೆ ನೀರಜ್ ಚೋಪ್ರಾ ಹಾಗೂ ಜಾನ್ ಜೆಲೆಜ್ನಿ ಬೇರ್ಪಡಲು ನೈಜ ಕಾರಣವೇನು ಎಂಬುದನ್ನು ನೀರಜ್ ಸ್ಪಷ್ಟಪಡಿಸಿಲ್ಲ.

2024ರ ಅಂತ್ಯದಲ್ಲಿ ಜೆಲೆಜ್ನಿ ನೀರಜ್ ಅವರ ಕೋಚ್ ಆಗಿ ನೇಮಕಗೊಂಡಿದ್ದರು. ಜೆಲೆಜ್ನಿ ಮೂರು ಬಾರಿಯ ಒಲಿಂಪಿಯನ್ ಆಗಿದ್ದು, ಜಾವೆಲಿನ್‌ನಲ್ಲಿ ವಿಶ್ವದಾಖಲೆ(98.48 ಮೀ.) ಹೊಂದಿದ್ದಾರೆ.

Source link
ದಿಢೀರ್ ಎನ್ನುವಂತೆ ಜಾನ್ ಜೆಲೆಜ್ನಿ ಜತೆ ಕೋಚಿಂಗ್ ಒಪ್ಪಂದ ಕೊನೆಗೊಳಿಸಿದ ನೀರಜ್ ಚೋಪ್ರಾ!