ನೆಲಮಂಗಲ, ಫೆಬ್ರವರಿ 09: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿದೆ. ಈ ನಡುವೆ ಹುಸ್ಕೂರು ಗ್ರಾಮದ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಸ್ಪ್ರೇ ಹೊಡೆದು ದುಷ್ಕರ್ಮಿಗಳ ಓಡಾಟ ನಡೆದಿದೆ. ಇತ್ತ ಕುಸಿದು ಬಿದ್ದ ಮಹಿಳೆಯಾಗಿದ್ದು, ಮೃತ ಜ್ಯೋತಿ(45) ಕತ್ತಲ್ಲಿದ್ದ ಮಾಂಗಲ್ಯ ಸರ ಮತ್ತು ದುಷ್ಕರ್ಮಿಗಳು ದೋಚಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ.
ಇನ್ನು ಮನೆಯವರು ಬೆಳಿಗ್ಗೆ 6.30ರ ವೇಳೆಗೆ ಮನೆಯಿಂದ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಕಾಡೆ ಬಿದ್ದಿದ್ದ ಜ್ಯೋತಿ ಕೈ ಮೇಲೆ ಗುರುತು ಕಂಡುಬಂದಿದ್ದು, ಅವರ ಮೈಮೇಲಿದ್ದ ಒಡವೆಗಳು ಇರಲಿಲ್ಲ. ಮುಂಜಾನೆ 5.30ರ ಸುಮಾರಿಗೆ ಕಸಗುಡಿಸಲೆಂದು ಅವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ಅಪರಿಚಿತರು ಕಳ್ಳತನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಸಿದು ಬಿದ್ದ ಜ್ಯೋತಿಯವರನ್ನು ಕಂಡ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ, ಆಗಲೇ ಅವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಜ್ಯೋತಿ ಅವರ ಬಾಯಲ್ಲಿ ನೊರೆ ಕೂಡ ಕಂಡುಬಂದಿದ್ದು, ಸ್ಪ್ರೇ ಹೊಡೆದಿರುವ ಹಿನ್ನೆಲೆ ಉಸಿರುಗಟ್ಟಿ ಅವರು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿದ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್ ಮ್ಯಾನ್ ಅರೆಸ್ಟ್
ಘಟನೆಯ ಬಗ್ಗೆ ಕಾಣಿಸಿಕೊಂಡಿರುವ ಮೃತ ಜ್ಯೋತಿ ಸಹೋದರಿ ನೀತು, ಮನೆಯ ಬಾಗಿಲ ಬಳಿಯೇ ಅಟ್ಯಾಕ್ ಮಾಡಿ ಕತ್ತಿದ್ದ ಚಿನ್ನ ಮತ್ತು ಓಲೆ ಎರಡನ್ನೂ ಕಿತ್ತುಕೊಂಡಿದ್ದಾರೆ. ಬಳಿಕ ಮುಖಕ್ಕೆ ಸ್ಪ್ರೇ ಮಾಡಿ ಜೋರಾಗಿ ನೂಕಿದ್ದಾರೆ. ಈ ವೇಳೆ ಮನೆಯ ಮುಂದಿನ ಸಂಪ್ ಮುಚ್ಚಳಕ್ಕೆ ಜ್ಯೋತಿ ಅವರ ಮುಖ ತಾಗಿ ಗಾಯ ನಮಗೆ ಯಾರ ಮೇಲೂ ಅನುಮಾನ ಇಲ್ಲ. ಇತ್ತೀಚೆಗಷ್ಟೇ ಸರಗಳ್ಳತನ ಪ್ರಕರಣಗಳು ಜಾಸ್ತಿ ಆಗಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿರೋದಾಗಿ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 4:25 pm, ಸೋಮ, 9 ಫೆಬ್ರವರಿ 26