Headlines

ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್​​ಟಿಒ ಅಧಿಕಾರಿಗಳು

ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್​​ಟಿಒ ಅಧಿಕಾರಿಗಳು


ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್ಟಿಒ ಅಧಿಕಾರಿಗಳು

ನೆಲಮಂಗಲ, ಏಪ್ರಿಲ್ 13: ನೈಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೆಲಮಂಗಲ ಆರ್ ಟಿಒ ಕಚೇರಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 30,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಂಬಂಧ ಗ್ರಾಮ ಬೆಂಗಳೂರು ಜಿಲ್ಲೆ ನೆಲಮಂಗಲ ಆರ್ಟಿಒ ಕಚೇರಿಯ ಪ್ರೊಬೆಷನರಿ ಇನ್ಸ್ ಪೆಕ್ಟರ್ಗಳಾದ ದಿನೇಶ್ ಕುಮಾರ್, ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಧಿಕಾರಿಗಳು ಗೂಗಲ್ ಪೇ ಮೂಲಕ 2,000, 1,000 ರೂಪಾಯಿ ಹಣವನ್ನು ಲಂಚ ಪಡೆದಿದ್ದರು. ಇಂದು ಖಾಸಗಿ ವ್ಯಕ್ತಿ ರಮೇಶ್ 300 ರೂ. ಲಂಚ ಪಡೆವಾಗ ಲೋಕಾಯುಕ್ತ ಪೊಲೀಸರು ಇವರನ್ನು ಖೆಡ್ಡಾಕೆ ಕೆಡವಿದ್ದಾರೆ. ಹೆಚ್ಚುವರಿ ಲೋಡ್ ಟ್ರಕ್ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಹಾರಾಷ್ಟ್ರ ಮೂಲದ ಪ್ರಶಾಂತ್ ದತ್ತಾತ್ರೇಯ ಎಂಬುವವರು ಲೋಕಾಯುಕ್ತಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಎಸ್ ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

(ಮಾಹಿತಿ ಅಪ್‌ಡೇಟ್ ಆಗುತ್ತಿದೆ)



Source link

Leave a Reply

Your email address will not be published. Required fields are marked *