ನೆಲಮಂಗಲ, ನವೆಂಬರ್ 13: ಸಿನೆಮಾ ನಟನ ಹೆಸರು ಸೈಟ್ (ಭೂ ಹಗರಣ) ಕೊಡಿಸುವುದಾಗಿ ಮಹಿಳೆಗೆ ಸಾಕಷ್ಟು ರೂ ವಂಚಿಸಿರುವಂತಹ ಘಟನೆ ನೆಲಮಂಗಲ (ನೆಲಮಂಗಲ) ತಾಲೂಕಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ. ನಟ ದುನಿಯಾ ವಿಜಯ್ ಹೆಸರು ಸುಕನ್ಯಾ ಮತ್ತು ನರಸಿಂಹ ಎಂಬುವವರು ವಂಚಿಸಿರುವ ಮಹಿಳೆ ಗಂಗಮ್ಮ ಅವರು ಆರೋಪಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಮಾಯಕರಿಗೆ ಉಂಡೆ ನಾಮ
ನರಸಿಂಹ ಲಕ್ಷ್ಮೀ ಪ್ರಸಾದ್ ಫೈನಾನ್ಸ್ ನಡೆಸುತ್ತಿದ್ದರು. ತಮ್ಮ ವ್ಯವಹಾರಕ್ಕೆ ಸಿನೆಮಾ ನಟನ ಹೆಸರು ಬಳಸಿಕೊಂಡರು. ರಿಯಲ್ ಎಸ್ಟೇಟ್ ಉದ್ಯಮಿಯಾಗಲು ಹೊರಟವರು ಅಮಾಯಕರಿಗೆ ಉಂಡೆ ನಾಮ ಹಾಕಿದ್ದಾರೆ. ಇವರ ಮಾತನ್ನು ನಂಬಿ ಸಾಕಷ್ಟು ಜನರು ಹಣ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂ ವಂಚನೆ ಮಾಡಿದವರ ವಿರುದ್ಧ ಸದ್ಯ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಕೇಸ್: ಆರೋಪಿ ಬಂಧನ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಖಾಕಿ
ನಟ ದುನಿಯಾ ವಿಜಿ ಜೊತೆ ಫೋಟೋತೆಗೆಸಿಕೊಂಡವರ ಹೆಸರು ನರಸಿಂಹ. ಇವರು ಸೋಲದೇವನಹಳ್ಳಿ ಪೊಲೀಸ್ ಠಾಣಾವ್ಯಾಪ್ತಿಯ ಚಿಕ್ಕಸಂದ್ರದ ನಿವಾಸಿ, ತನ್ನ ಪತ್ನಿ ಸುಕನ್ಯಾ ಜೊತೆ ಲಕ್ಷ್ಮೀ ಫೈನಾನ್ ನಡೆಸುತ್ತಿದ್ದರು. ಗಂಗಮ್ಮ ಎಂಬುವವರು ಹಣ ಉಳಿತಾಯ ಮಾಡುವ ಸಲುವಾಗಿ ಮಹಿಳೆಯರನ್ನು ಒಟ್ಟುಗೂಡಿಸಿ ತಿಂಗಳಿಗೆ 300 ರೂ ಹಣ ಕಟ್ಟುವ ವ್ಯವಹಾರ ಮಾಡಿಕೊಂಡಿದ್ದರು. ಈ ಮಹಿಳಾ ಗ್ಯಾಂಗ್‌ಗೆ ಸೈಟ್‌ನಲ್ಲಿ ಹಣ ಇನ್ವೆಸ್ಟ ಮಾಡುವಂತೆ ಸುಕನ್ಯಾ ಪುಸಲಾಯಿಸಿದ್ದರು.
ದುನಿಯಾ ವಿಜಯರೊಂದಿಗೆ ನರಸಿಂಹ
ಇತ್ತ ನರಸಿಂಹ ನನಗೆ ದುನಿಯಾವಿಜಿ ತುಂಬಾ ಆಪ್ತರು ಅಂತೆಲ್ಲಾ ಕಥೆ ಕಟ್ಟಿ ಫೋಟೋ ತೋರಿಸಿದ್ದರು. ಇದನ್ನೇ ನಂಬಿದ ದೊಡ್ಡ ವ್ಯಕ್ತಿ ಇರಬೇಕು ಅಂತ ದೊಡ್ಡಬಳ್ಳಾಪುರದಲ್ಲಿ ಲೇಔಟ್ ಮಾಡಿದರೆ ಅಂತ ಹೇಳಿ ಹಣ ಪಡೆದಿದ್ದರು. ಸದ್ಯ 5 ರಿಂದ 6 ಜನರಿಗೆ ಮೋಸ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ನಕಲಿ ಬಿಲ್ ಸೃಷ್ಟಿಸಿದ ಸಿಎಂ ಪರಿಹಾರ ನಿಧಿ ಪಡೆಯುತ್ತಿದ್ದ ಆರೋಪಿ ಅಂದರ್
ಒಟ್ಟಿ ಸಿನಿಮಾ ನಟನ ಹೆಸರು ಹೇಳಿಕೊಂಡು ಕೋಟ್ಯಂತರ ರೂ ಮೋಸ ಮಾಡಿರುವ ದಂಪತಿ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:35 pm, ಗುರುವಾರ, 13 ನವೆಂಬರ್ 25