
ನೆಲಮಂಗಲ, ಮಾ.25: ರಾಷ್ಟ್ರೀಯ ಹೆದ್ದಾರಿ 48 ರ ತುಮಕೂರು ರಸ್ತೆ ನೆಲಮಂಗಲ ಟೌನ್ ಇಬ್ಬರು ಯುವಕರು ಅತ್ಯಂತ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಸ್ಟಂಟ್ ಮಾಡುವ ಮೂಲಕ ಟ್ರಾಫಿಕ್ ನಿಯಮಗಳು ಗಾಳಿಗೆ ತೂರಿದ್ದಾರೆ. ಜನನಿಬಿಡ ರಸ್ತೆಯಲ್ಲೇ ಈ ಕಿರಾತಕ ಕೃತ್ಯ ನಡೆದಿದ್ದು, ಇತರ ವಾಹನ ಸವಾರರು ಮತ್ತು ಪಾದಚಾರಿಗಳು ಭಯಭೀತರಾಗಿದ್ದಾರೆ. ಇಬ್ಬರು ಯುವಕರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಜನನಿಬಿಡ ರಸ್ತೆಯಲ್ಲೇ ಮುಂದಿನ ಚಕ್ರವನ್ನು ಗಾಳಿಯಲ್ಲಿ ಎತ್ತಿ (ವೀಲಿ) ಚಲಿಸುವ ಮೂಲಕ ಜೀವದ ಹಂಗು ತೊರೆದು ಸ್ಟಂಟ್ ಮಾಡಿದ್ದಾರೆ. ರಸ್ತೆಯು ಸ್ಟಂಟ್ ಮಾಡುವ ವೇದಿಕೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಈ ಯುವಕರ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಸಣ್ಣ ತಪ್ಪು ಸಂಭವಿಸಿದರೂ ಇದು ಮಾರಣಾಂತಿಕ ಅಪಘಾತಕ್ಕೆ ಸಂಭವಿಸುತ್ತದೆ. ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ಚಾಲನಾ ಪರವಾನಗಿಯನ್ನು (DL) ರದ್ದುಗೊಳಿಸಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ವಿಡಿಯೋ @Karnataka Portfolio ಎಕ್ಸ್ ಖಾತೆ ಹಂಚಿಕೊಂಡಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ