ನೆಲಮಂಗಲ: ಮೂರು ಎರ್ಟಿಗಾ ಕಾರುಗಳಲ್ಲಿ ಅನುಮಾನಾಸ್ಪದ ವಸ್ತು ಸಾಗಾಟ, ತಪಾಸಣೆ ಮಾಡಿದ ಪೊಲೀಸರಿಗೆ ಕಾದಿತ್ತು ಆಘಾತ

ನೆಲಮಂಗಲ: ಮೂರು ಎರ್ಟಿಗಾ ಕಾರುಗಳಲ್ಲಿ ಅನುಮಾನಾಸ್ಪದ ವಸ್ತು ಸಾಗಾಟ, ತಪಾಸಣೆ ಮಾಡಿದ ಪೊಲೀಸರಿಗೆ ಕಾದಿತ್ತು ಆಘಾತ


ನೆಲಮಂಗಲ, ನವೆಂಬರ್ 13: ದೆಹಲಿಯ ಕೆಂಪುಕೋಟೆ ಸಮೀಪದ ಕಾರು ಸ್ಫೋಟದ ಬೆನ್ನಲ್ಲೇ ಕರ್ನಾಟಕ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಮೂರು ಎರ್ಟಿಗಾ ಕಾರುಗಳಲ್ಲಿ ಅನುಮಾನಾಸ್ಪದ ವಸ್ತು ಸಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ. ಇದೇ ವೇಳೆ, 28 ಬ್ಯಾಗ್‌ಗಳಲ್ಲಿ ಅನುಮಾನಾಸ್ಪದ ವಸ್ತುಗಳ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಕಪ್ಪು ಬ್ಯಾಗ್‌ಗಳಲ್ಲಿ ಪ್ಯಾಕಿಂಗ್ ಮಾಡಿ ಸಾಗಿಸುತ್ತಿದ್ದ ವಸ್ತುಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದು, ನಿಷೇಧಿತ ಇ-ಸಿಗರೇಟ್‌ ಇದೆ. ದೊಡ್ಡ ಸ್ಮಗ್ಲಿಂಗ್ ಜಾಲವೇ ಇದೆ. ಬೆಂಗಳೂರಿನಿಂದ ಮಂಗಳೂರಿಗೆ ನಿಷೇಧಿತ ಈ-ಸಿಗ ಸಾಗಾಟ ಮಾಡಬೇಕಾಗಿದೆ. ಸದ್ಯ ನೆಲಮಂಗಲ ಟೋಲ್ ಬಳಿ ನಿಷೇಧಿತ ಇ-ಸಿಗರೇಟ್ ಬ್ಯಾಗ್‌ಗಳು ಮತ್ತು ಕಾರುಗಳನ್ನು ತಪಾಸಣೆ ಸೀಜ್ ಮಾಡಲಾಗಿದೆ. 12 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಡಿಯೋ ಹಾಗೂ ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *