ಬೆಂಗಳೂರು, ಅಕ್ಟೋಬರ್ 21: ಫುಡ್ ಡೆಲಿವರಿ ಮಾಡುವವರನ್ನು ಟಾರ್ಗೆಟ್ ಮಾಡಿ ರಾಬರಿ (ದರೋಡೆ) ಮಾಡುತ್ತಿರುವ ನೇಪಾಳಿ ಗ್ಯಾಂಗ್‌ನ ಬೆಳ್ಳಂದೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪಾರಸ್ ಸಿಂಗ್, ಮುಕೇಶ್ ಸಾಯಿ, ಬಿಪಿನ್ ಕರ್ಕಿ, ಸಮೀರ್ ಲೋಹಾರ್ ಬಂಧಿತರು. ಆರೋಪಿಗಳು ನೇಪಾಳದಿಂದ ಬಂದು ಸೆಕ್ಯೂರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಬಿಡುವಿನ ವೇಳೆ ದರೋಡೆ ನಡೆಸುತ್ತದೆ.
ಫುಡ್ ಡೆಲಿವರಿಗೆ ತೆರಳುವವರನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನು ಪೀಕುತ್ತಿದ್ದ ಗ್ಯಾಂಗ್, ಕಳೆದ ತಿಂಗಳು ಸೆ.13ರ ರಾತ್ರಿ ಕಸವನಹಳ್ಳಿ ರಸ್ತೆಯಲ್ಲಿಯೂ ಕೈಚಳಕ ತೋರಿಸಿತ್ತು. ಫುಡ್ ಡೆಲಿವರಿ ಬಾಯ್ ಸುರೇಶ್ ಎಂಬಾತನಿಗೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿತ್ತು. ಮೂರು ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ಕೃತ್ಯ ಎಸಗಿದ್ದರು. ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸುರೇಶ್ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9 ಮೊಬೈಲ್ ಮತ್ತು ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳ್ಳಂದೂರು, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೆಪಾಳ್ಯ, ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ಕೃತ್ಯವೆಸಗಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆನೇಕಲ್ನ ಕಲ್ಲುಬಾಳು ಗ್ರಾಮದಲ್ಲಿ ಲಿವಿಂಗ್ ಟುಗೆದರ್ನಲ್ಲಿದ್ದ ಜೋಡಿ ಆತ್ಮಹತ್ಯೆ
ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ
ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಖದೀಮರು ಕಳ್ಳತನ ನಡೆಸಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಆದರ್ಶ ಗ್ರಾಮದಲ್ಲಿ ನಡೆದಿದೆ. ದೀಪಾವಳಿ ಹಿನ್ನಲೆ ಮನೆಗಳಿಗೆ ಬೀಗ ಹಾಕಿ ಕೆಲವರಿಗೆ ತೆರಳಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಕೈಚಳಕ ತೋರಲು ಮುಂದಾಗಿದೆ. ಮಂಕಿ ಕ್ಯಾಪ್ ಧರಿಸಿ ಓಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಹಿಡಿದ, ಬೀದಿನಾಯಿಗಳ ಹಾವಳಿ ಹಿನ್ನಲೆ ಕಳ್ಳರು ಒಂದು ಕ್ಷಣ ನಿಂತಿದ್ದಾರೆ. ಬಳಿಕ ಪಕ್ಕದ ನಂಜಪ್ಪ ಬಡಾವಣೆಯಲ್ಲಿ ಕಳ್ಳತನ ನಡೆಸಿದ್ದು, ಬೀಗ ಮುರಿದು ಕೈಗೆ ಸಿಕ್ಕ ಐಫೋನ್ ಕದ್ದೊಯ್ದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 4:39 pm, ಮಂಗಳವಾರ, 21 ಅಕ್ಟೋಬರ್ 25