ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿನ ಆಚರಿಸುವುದರ ಹಿಂದಿದೆ ಈ ಕಾರಣ

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿನ ಆಚರಿಸುವುದರ ಹಿಂದಿದೆ ಈ ಕಾರಣ


ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮದಿನಚಿತ್ರ ಕ್ರೆಡಿಟ್ ಮೂಲ: Pinterest

ಭಾರತವು ಬ್ರಿಟಿಷರ ದಾಸ್ಯದಿಂದ ಮುಕ್ತರಾಗುವಲ್ಲಿ ಬಂಗಾಳದ ಶೌರ್ಯದ ಮಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಅಪಾರವಾಗಿದೆ. ಜನವರಿ 23 ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನ (ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ) ಅವರ ಹೋರಾಟದ ಹಾದಿಯನ್ನು ನೆನಪಿಸಿಕೊಳ್ಳುತ್ತಾ ಈ ಬಾರಿ ಅವರ 129 ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅದಲ್ಲದೇ ಈ ದಿನದಂದೇ ಪರಾಕ್ರಮ ದಿನವನ್ನು(Parakram Diwas) ಆಚರಿಸದಿದ್ದರೆ. ಈ ದಿನವನ್ನು ಯಾಕಾಗಿ ಆಚರಿಸದಿದ್ದರೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಯುವಕರಲ್ಲಿ ಕಿಚ್ಚು ಹಚ್ಚಿದ್ದ ಸುಭಾಷ್ ಚಂದ್ರ ಬೋಸ್

‘ನನಗೆ ನಿಮ್ಮ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂಬ ಘೋಷವಾಕ್ಯದಿಂದ ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದವರು ನೇತಾಜಿ ಸುಭಾಷ್ ಚಂದ್ರ ಬಾಸ್. ಭಾರತೀಯರ ಮೇಲೆ ದಬ್ಬಾಳಿಕೆ ಮಾಡುವ ಬ್ರಿಟಿಷರನ್ನು ಕಳುಹಿಸಲು ಮಿಲಿಟರಿ ಕಾರ್ಯಾಚರಣೆಯೇ ಪರಿಣಾಮಕಾರಿ ಅಸ್ತ್ರ ಎಂದು ನಂಬಿದ್ದರು. ಹೀಗಾಗಿ ಈ ಅಸ್ತ್ರದಿಂದ ಮಾತ್ರ ಎಲ್ಲವೂ ಸಾಧ್ಯ ಎಂದುಕೊಂಡಿದ್ದರು. ಈ ಕಾರಣಕ್ಕಾಗಿ ತಮ್ಮ ಹೋರಾಟದ ಹಾದಿಯಲ್ಲಿ ಬದಲಾವಣೆ ತಂದು ಬ್ರಿಟಿಷರ ವಿರುದ್ಧ ಹೋರಾಡಿದರು. ಸುಭಾಸ್ ಚಂದ್ರ ಬೋಸ್ ಹೋರಾಟದ ಹಾದಿಯ ಕಡೆಗೆ ಕಣ್ಣಾಯಿಸಿದಾಗಲೆಲ್ಲಾ ಮೈಯೆಲ್ಲಾ ರೋಮಾಂಚನವಾಗುತ್ತದೆ.

ಇದನ್ನೂ ಓದಿ: ಪೆಂಗ್ವಿನ್ ಜಾಗೃತಿ ದಿನ 2026: ಬದಲಾಗುತ್ತಿರುವ ಹವಾಮಾನದಿಂದಾಗಿ ಪೆಂಗ್ವಿನ್‌ಗಳ ಅಸ್ತಿತ್ವಕ್ಕೆ ಅಪಾಯವಿದೆ

ಪರಾಕ್ರಮ ದಿನವನ್ನು ಆಚರಿಸುವುದು ಏಕೆ?

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ನೀಡಿದ ಕೊಡುಗೆಗಳನ್ನು ಗೌರವಿಸಲು 2021 ರಲ್ಲಿ ಅವರ ಹುಟ್ಟುಹಬ್ಬದ ದಿನವೇ ಪರಾಕ್ರಮ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಈ ದಿನದ ಆಚರಣೆಯ ಮೂಲ ಉದ್ದೇಶವು ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಯವರಿಗೆ ತಿಳಿಸಲಾಗಿದೆ. ಹೀಗಾಗಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನದಂದೇ ಪರಾಕ್ರಮ ದಿನವನ್ನು ಆಚರಿಸುತ್ತಾ ಬರುತ್ತಿದ್ದಾರೆ.

ಇನ್ನಷ್ಟು ಜೀವನ ಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 9:48 am, ಶುಕ್ರ, 23 ಜನವರಿ 26



Source link

Leave a Reply

Your email address will not be published. Required fields are marked *