ನೆಟ್ಫ್ಲಿಕ್ಸ್ ತನ್ನದೇ ಆದ ಅನೇಕ ಒರಿಜಿನಲ್ ಸೀರಿಸ್ಗಳನ್ನು ನಿರ್ಮಿಸಿದೆ. ಜೊತೆಗೆ, ದೇಶ-ವಿದೇಶಗಳಿಂದ ಹಲವು ಸಿನಿಮಾ ಮತ್ತು ಸೀರಿಸ್ಗಳನ್ನು ಖರೀದಿಸಿ ಪ್ರಸಾರ ಮಾಡುತ್ತಿದೆ. ಈಗ ನೆಟ್ಫ್ಲಿಕ್ಸ್ ಒಂದು ದೊಡ್ಡ ನಿರ್ಧಾರಕ್ಕೆ ಬಂದಿದೆ. ಹಾಲಿವುಡ್ನ ಫೇಮಸ್ ಸ್ಟುಡಿಯೋ ವಾರ್ನರ್ ಬ್ರೋಸ್ ಫಿಲ್ಮ್ ಮತ್ತು ಟಿವಿ ಸ್ಟುಡಿಯೋನ ಬರೋಬ್ಬರಿ 74 ಲಕ್ಷ ಕೋಟಿ ರೂಪಾಯಿ ಕೊಟ್ಟು ನೆಟ್ ಫ್ಲಿಕ್ಸ್ ಖರೀದಿ ಮಾಡಿದೆ. ಈ ಮೂಲಕ ನೆಟ್ಫ್ಲಿಕ್ಸ್ ಲೈಬ್ರರಿ ಹಿರಿದಾಗಿದೆ.
ಹ್ಯಾರಿ ಪಾಟರ್, ಸೂಪರ್ ಮ್ಯಾನ್, ಬ್ಯಾಟ್ಮ್ಯಾನ್, ಗೇಮ್ ಆಫ್ ಥ್ರೋನ್ಸ್, ಫ್ರೆಂಡ್ಸ್ ರೀತಿಯ ಪ್ರಾಜೆಕ್ಟ್ಗಳನ್ನು ‘ವಾರ್ನರ್ ಬ್ರೋಸ್ ನಿರ್ಮಾಣ ಮಾಡಿದೆ. ಇವೆಲ್ಲವೂ ಈಗ ನೆಟ್ಫ್ಲಿಕ್ಸ್ ತೆಕ್ಕೆಗೆ ಸಿಕ್ಕಿವೆ. ವಾರ್ನರ್ ಬ್ರೋಸ್ ಡಿಸ್ಕವರಿ ಕಂಪನಿಯ ಮೌಲ್ಯ 82 ಬಿಲಿಯನ್ ಡಾಲರ್. ಇದರಲ್ಲಿ 72 ಬಿಲಿಯನ್ ಡಾಲರ್ ಇದರ ಷೇರುಗಳಿಂದಲೇ ಬರುತ್ತಿದೆ. 2026 ಮಾರ್ಚ್ ವೇಳೆಗೆ ಈ ಡೀಲ್ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ವಾರ್ನರ್ ಬ್ರೋಸ್ ಬಳಿ ಸಾಕಷ್ಟು ಸಿನಿಮಾ ಹಾಗೂ ಸೀರಿಸ್ಗಳಿವೆ. ಇವುಗಳ ಮೇಲೆ ನೆಟ್ಫ್ಲಿಕ್ಸ್ ಕಣ್ಣಿಟ್ಟಿತ್ತು. ಇದನ್ನು ಈಗ ನೆಟ್ಫ್ಲಿಕ್ಸ್ ಖರೀದಿ ಮಾಡುವ ಮೂಲಕ ತನ್ನ ಲೈಬ್ರರಿ ದೊಡ್ಡದಾಗಿಸಿದೆ. ಇದರಿಂದ ನೆಟ್ಫ್ಲಿಕ್ಸ್ ಸ್ಕ್ರೈಬರ್ಗಳಿಗೆ ಹೆಚ್ಚು ಸರಣಿ ಮತ್ತು ಸಿನಿಮಾಗಳ ವೀಕ್ಷಣೆಗೆ ಸಬ್ಡಿಕ್ಯುಲರ್ಗಳು.
ಈ ದೊಡ್ಡ ಸ್ಟುಡಿಯೋ ಇವರ ಕೈ ಸೇರುವುದರಿಂದ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಲು, ಸರಣಿಗಳನ್ನು ನಿರ್ಮಿಸಲು ಈ ಒಪ್ಪಂದ ಸಹಕಾರಿ ಆಗಲಿದೆ. ಇದು ನೆಟ್ಫ್ಲಿಕ್ಸ್ ಬಳಕೆದಾರರ ಖುಷಿ ಹೆಚ್ಚಿದೆ.
ಇದನ್ನೂ ಓದಿ: ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್ಫ್ಲಿಕ್ಸ್
ಕಳೆದ ಕೆಲವು ದಿನಗಳಿಂದ ವಾರ್ನರ್ ಬ್ರೋಸ್ ಡಿಸ್ಕವರಿ ಮಾರಾಟದ ಬಗ್ಗೆ ಚರ್ಚೆ ನಡೆಯಿತು. ಪ್ಯಾರಾಮೌಂಟ್ ಸಂಸ್ಥೆ ವಾರ್ನರ್ ಬ್ರೋಸ್ ಖರೀದಿ ಮಾಡಲಿದೆ ಎಂದು ಹೇಳಲಾಗಿದೆ. ಆದರೆ, ನೆಟ್ಫ್ಲಿಕ್ಸ್ ಇವರನ್ನು ಹಿಂದಿಕ್ಕಿ ಡೀಲ್ನ ತನ್ನದಾಗಿಸಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 2:54 pm, ಶನಿ, 6 ಡಿಸೆಂಬರ್ 25