ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಮದುವೆ ಆರತಕ್ಷತೆಯೊಂದಕ್ಕೆ ಜೊತೆಯಾಗಿ ಬಂದಿದ್ದು, ಒಂದೇ ಬಣ್ಣದ ಬಟ್ಟೆ ಧರಿಸಿ, ಒಂದೇ ಕಾರಿನಲ್ಲಿ ಬಂದಿದ್ದು, ಇವರಿಬ್ಬರ ವಿವಾಹೇತರ ಸಂಬಂಧದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಪತ್ನಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ ಬಳಿಕ ಸಾಕಷ್ಟು ಸುದ್ದಿಯಲ್ಲಿರುವ ತಮಿಳು ನಟ ದಳಪತಿ ವಿಜಯ್, ನಟಿ ತ್ರಿಶಾ ಕೃಷ್ಣನ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಸಾಕಷ್ಟು ಊಹಾಪೋಹಾಗಳು ಹಬ್ಬಿದ್ದವು, ಇದರ ಬೆನ್ನಲೇ ಈಗ ನಟಿ ತ್ರಿಶಾ ಕೃಷ್ಣನ್ ಜೊತೆ ವಿಜಯ್ ಮದುವೆ ಆರತಕ್ಷತೆಯೊಂದರಲ್ಲಿ ಭಾಗವಹಿಸಿದ್ದು, ಸಂಚಲನ ಸೃಷ್ಟಿಸಿದೆ. ಗುರುವಾರ ಚೆನ್ನೈನಲ್ಲಿ ನಡೆದ ನಿರ್ಮಾಪಕ ಕಲ್ಪತಿ ಎಸ್ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ನಟ ಕಾಮ್ ರಾಜಕಾರಣಿ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಭಾಗವಹಿಸಿದ್ದರು. ಈ ಆರತಕ್ಷತೆ ಕಾರ್ಯಕ್ರಮವು ತಮಿಳು ಚಲನಚಿತ್ರೋದ್ಯಮದ ಹಲವಾರು ಸದಸ್ಯರನ್ನು ಒಟ್ಟುಗೂಡಿಸಿತು

ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ಈ ಬೆಳವಣಿಗೆ ನಡೆದಿದೆ. ಗಂಡ ಹೆಂಡತಿಯಂತೆ ಮ್ಯಾಚಿಂಗ್ ಬಟ್ಟೆ ತೊಟ್ಟು ಒಂದೇ ಕಾರಿನಲ್ಲಿ ವಿಜಯ್ ಹಾಗೂ ತ್ರಿಷಾ ಕೃಷ್ಣನ್ ಆಗಮಿಸಿದ್ದು, ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇವರನ್ನು ತಮಿಳು ಚಿತ್ರರಂಗದ ಮತ್ತೊಂದು ವಿವಾದಿತ ಜೋಡಿ ರವಿ ಮೋಹನ್ ಹಾಗೂ ಅವರ ಗರ್ಲ್ಫ್ರೆಂಡ್ ಕೆನಿಷಾಗೆ ಜನ ಹೋಲಿಸಿದ್ದಾರೆ. ರವಿ ಮೋಹನ್ ಕೂಡ ಪತ್ನಿ ಆರತಿಯಿಂದ ಡಿವೋರ್ಸ್ಗಾಗಿ ಅರ್ಜಿ ಸಲ್ಲಿಸಿದ್ದು, ಇವರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ.

ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ಅವರು ಡಿಸೆಂಬರ್ 2025 ರಲ್ಲಿ ಪತಿ ವಿಜಯ್ನಿಂದ ವಿಚ್ಛೇದನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು. ಅರ್ಜಿಯು ಏಪ್ರಿಲ್ 20 ರಂದು ವಿಚಾರಣೆಗೆ ಬರುವ ನಿರೀಕ್ಷೆಯಿದೆ. ಈ ವಿಚ್ಛೇದನ ಅರ್ಜಿಯಲ್ಲಿ ವಿಜಯ್ ಪತ್ನಿ ಸಂಗೀತಾ ಅವರು ವಿಜಯ್ ನಟಿ ಜೊತೆ ವಿವಾಹೇತರ ಸಂಬಂಧ ಹೊಂದಿರುವ ಬಗ್ಗೆ ಆರೋಪಿಸಿದ್ದರು. ವಿಜಯ್ ವಿವಾಹೇತರ ಸಂಬಂಧದಲ್ಲಿ ಇರುವುದನ್ನು ಏಪ್ರಿಲ್ 2021 ರಲ್ಲಿ ಪತ್ತೆ ಮಾಡಿದ್ದಾಗಿ ಅಗತ್ಯವಿದ್ದರೆ ಪ್ರಕರಣದಲ್ಲಿ ನಟಿಯನ್ನು ಎರಡನೇ ಪ್ರತಿವಾದಿಯನ್ನಾಗಿ ಮಾಡುವುದಾಗಿ ಅವರು ಹೇಳಿದ್ದಾರೆ.

ಸಂಗೀತಾ ವಿಜಯ್ ಜೊತೆಗಿನ ವಿವಾಹವನ್ನು ವಜಾಗೊಳಿಸುವ ಜೊತೆಗೆ ತನ್ನ ವೈವಾಹಿಕ ಮನೆಯಲ್ಲಿ ವಾಸಿಸುವ ಹಕ್ಕು ಮತ್ತು ಶಾಶ್ವತ ಜೀವನಾಂಶವನ್ನು ಕೋರಿದ್ದಾರೆ. ವಿಜಯ್ ಸಂಗೀತಾ ಅವರದ್ದು ಪ್ರೇಮ ವಿವಾಹವಾಗಿತ್ತು. ನಟ ತನ್ನ ಅಭಿಮಾನಿಯನ್ನೇ ಮದುವೆಯಾಗಿದ್ದರು. ಈ ಜೋಡಿ ಆಗಸ್ಟ್ 25, 1999 ರಂದು ಚೆನ್ನೈನಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದು, ಕ್ರಿಶ್ಚಿಯನ್ ಆಗಿರುವ ವಿಜಯ್ ಮತ್ತು ಹಿಂದೂ ಆಗಿರುವ ಸಂಗೀತಾ ಸಾಂಪ್ರದಾಯಿಕ ಹಿಂದೂ ವಿವಾಹ ಸಮಾರಂಭದಲ್ಲಿ ವಿವಾಹವಾಗಿದ್ದರು.

ಒಂದು ವರ್ಷದ ನಂತರ, ಅವರು 2000ದ ಆಗಸ್ಟ್ 26ರಂದು ತಮ್ಮ ಮೊದಲ ಮಗುವಾದ ಜೇಸನ್ ಸಂಜಯ್ ಗೆ ಜನ್ಮ ನೀಡಿದರು. ಮಗಳು ದಿವ್ಯಾ ಸಾಶಾ 2005 ರಲ್ಲಿ ಜನಿಸಿದ್ದಳು. ತಮಿಳು ಚಿತ್ರರಂಗದ ದೊಡ್ಡ ತಾರೆಯರಲ್ಲಿ ಒಬ್ಬರನ್ನು ಮದುವೆಯಾಗಿದ್ದರೂ, ಸಂಗೀತಾ ಹೆಚ್ಚಾಗಿ ಜನಮನದಿಂದ ದೂರವೇ ಉಳಿದವರು. ಈ ಹಿನ್ನೆಲೆಯಲ್ಲಿ ವಿಜಯ್ ಮತ್ತು ತ್ರಿಶಾ ಒಂದೇ ಕಾರಿನಲ್ಲಿ ಒಟ್ಟಿಗೆ ಬಂದು ಎಜಿಎಸ್ ಕುಟುಂಬದ ವಿವಾಹದಲ್ಲಿ ಭಾಗವಹಿಸುತ್ತಿರುವುದು ಆನ್ಲೈನ್ ಹೊಸಚರ್ಚೆಗಳನ್ನು ಹುಟ್ಟುಹಾಕಿದೆ.

ಇತ್ತ ತಮಿಳಿನ ಮತ್ತೊಬ್ಬ ಖ್ಯಾತ ನಟ ರವಿ ಮೋಹನ್ ಅವರದ್ದು ಇದೇ ಕತೆ. ಮುದ್ದಾದ ಹೆಂಡ್ತಿ ಇದ್ದರೂ ಅವರು ಗಾಯಕಿ/ಸಂಗೀತ ನಿರ್ಮಾಪಕಿ ಕೆನಿಷಾ ಫ್ರಾನ್ಸಿಸ್ ಜೊತೆ ವಿವಾಹೇತರ ಸಂಬಂಧದಲ್ಲಿ ಸಿಲುಕಿಕೊಂಡು ಈಗ ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಈ ಕೆನಿಷಾ ಹಾಗೂ ರವಿ ಮೋಹನ್ ಅವರು ಕೂಡ ತಮ್ಮ ಪ್ರೇಮ ಸಂಬಂಧದ ಗಾಸಿಪ್ ಊರೆಲ್ಲಾ ಹಬ್ಬಿದ ನಂತರ ಜೊತೆಯಾಗಿ ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ತೊಟ್ಟು ಚೆನ್ನೈನಲ್ಲಿ ನಡೆದ ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ರವಿ ಮೋಹನ್ ತಮ್ಮ ಮಾಜಿ ಪತ್ನಿ ಆರತಿಯಿಂದ ಬೇರ್ಪಡುವುದಾಗಿ ಘೋಷಿಸಿದ ತಿಂಗಳುಗಳ ನಂತರ ಅವರು ಹೀಗೆ ಜೊತೆಜೊತೆಯಾಗಿ ಕಾಣಿಸಿಕೊಂಡಿದ್ದರು.

Source link
ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು