ಹೊಸ ಆಧಾರ್ ಆ್ಯಪ್​ಗೂ ಹಿಂದಿನ ಎಂ ಆಧಾರ್ ಆ್ಯಪ್​ಗೂ ಏನು ವ್ಯತ್ಯಾಸ? ಇಲ್ಲಿದೆ ಡೀಟೇಲ್ಸ್

ಹೊಸ ಆಧಾರ್ ಆ್ಯಪ್​ಗೂ ಹಿಂದಿನ ಎಂ ಆಧಾರ್ ಆ್ಯಪ್​ಗೂ ಏನು ವ್ಯತ್ಯಾಸ? ಇಲ್ಲಿದೆ ಡೀಟೇಲ್ಸ್


ಯುಐಡಿಐಐ ಸಂಸ್ಥೆ ಹೊಸ ಆಧಾರ್ ಆಯಪ್ (ಆಧಾರ್) ಕೆಲವು ದಿನಗಳ ಹಿಂದೆ (2025ರ ನ. 10) ಬಿಡುಗಡೆ ಮಾಡಿದೆ. ಗೂಗಲ್‌ನ ಪ್ಲೇಸ್ಟೋರ್ ಮತ್ತು ಆಯಪಲ್ ಆಯಪ್ ಸ್ಟೋರ್‌ನಲ್ಲಿ ಆಧಾರ್ ಆಯಪ್ ಲಭ್ಯವಿರುತ್ತದೆ, ಡೌನ್‌ಲೋಡ್ ಮಾಡಿಕೊಳ್ಳಬಹುದು. ಗುರುತು ದಾಖಲೆ ಪರಿಶೀಲನೆಯ ಅವಶ್ಯಕತೆ ಇದ್ದಾಗ ಈ ಆಯಪ್ ಅನ್ನು ಬಳಸಬಹುದು. ಇದೂ ಸೇರಿದಂತೆ ಇನ್ನೂ ಹಲವು ಕಾರ್ಯಗಳಿಗೆ ಹೊಸ ಆಧಾರ್ ಆಯಪ್ ಪ್ರಯೋಜನಕಾರಿ ಎನಿಸಬಲ್ಲದು. ಎಂಆಧಾರ್ (mAadhaar – My Aadhaar) ಎಂಬ ಆಯಪ್ ಕೂಡ ಅಸ್ತಿತ್ವದಲ್ಲಿದೆ, ಈ ಹೊಸ ಆಯಪ್ ಯಾಕೆ ಎಂದನಿಸಬಹುದು. ಈ ಎರಡೂ ಆಯಪ್ಗಳ ಮಧ್ಯೆ ವ್ಯತ್ಯಾಸಗಳಿವೆ. ಸದ್ಯಕ್ಕೆ ಎರಡೂ ಪ್ರತ್ಯೇಕವಾಗಿ ಲಭ್ಯವಿಲ್ಲ. ಈ ಎರಡೂ ಆಯಪ್ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಮೊದಲು ಹೊಸ ಆಧಾರ್ ಆಯಪ್ನ ಕೆಲವು ಮುಖ್ಯ ಕಾರ್ಯಗಳೇನು ಎಂಬ ವಿವರ ಈ ಕೆಳಕಂಡಂತಿವೆ:

ಹೊಸ ಆಧಾರ್ ಆಯಪ್ನ ಫೀಚರ್‌ಗಳು

  • ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಒಂದೇ ಆಯಪ್‌ನಲ್ಲಿ ಇಟ್ಟುಕೊಂಡು ನಿರ್ವಹಿಸಬಹುದು.
  • ಆಧಾರ್ ಡಾಟಾ ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಬಯೋಮೆಟ್ರಿಕ್ ಅಥೆಂಟಿಕೇಶನ್ ನಿಯಂತ್ರಣ ಹೊಸ ಆಧಾರ್ ಆಯಪ್ನಲ್ಲಿ ಇರುತ್ತದೆ. , ಆಧಾರ್ ದೃಢೀಕರಣಕ್ಕಾಗಿ ಆಧಾರ್ ಅನ್ನು ಅನ್ಲಾಕ್ ಮಾಡಿದ ನಂತರ ಮತ್ತೆ ಅದನ್ನು ಲಾಕ್ ಮಾಡಬಹುದು.
  • ಆಧಾರ್ ಡಾಟಾದಲ್ಲಿ ಯಾವುದನ್ನು ತೋರಿಸಬೇಕು, ತೋರಿಸಬಾರದು ಎಂಬ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಅಂದರೆ, ಆಧಾರ್‌ನಲ್ಲಿ ನಿಮ್ಮ ಹೆಸರು ಮತ್ತು ಫೋಟೋ ಮಾತ್ರ ಕಾಣಬೇಕು. , ಜನ್ಮದಿನಾಂಕ ವಿವರ ಕಾಣಬಾರದು ವಿಳಾಸ ನಮೂದಿಸಿದರೆ ಅದರ ನಿಯಂತ್ರಣ ನಿಮಗಿರುತ್ತದೆ.
  • ಬ್ಯಾಂಕು, ಸರ್ಕಾರಿ ಕಚೇರಿ, ಸರ್ವಿಸ್ ಸೆಂಟರ್ ಇತ್ಯಾದಿ ಕಡೆಗಳಲ್ಲಿ ಆಧಾರ್ ದೃಢೀಕರಣಕ್ಕೆ ಆಧಾರ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಸೌಲಭ್ಯವನ್ನು ಈ ಆಯಪ್ ಕೊಡುಗೆ.
  • ಇಂಟರ್ನೆಟ್ ಇಲ್ಲದಿದ್ದರೂ ಆಧಾರ್ ವಿವರವನ್ನು ವೀಕ್ಷಿಸಲು ಅವಕಾಶ ಇರುತ್ತದೆ.
  • ಆಧಾರ್ ಯಾವಾಗ್ಯಾವಾಗ ಮತ್ತು ಯಾವ ಉದ್ದೇಶಕ್ಕೆ ಬಳಸಲಾಯಿತು ಎನ್ನುವುದನ್ನು ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ: ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ನಾಟಕ ಬ್ಯಾಂಕ್‌ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ

ಹೊಸ ಆಧಾರ್ ಆಯಪ್ ಸೆಟಪ್ ಪ್ರಕ್ರಿಯೆ

  • ಫೋನ್‌ಗೆ ಆಧಾರ್ ಆಯಪ್ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್ ಮಾಡಿಕೊಂಡ ನಂತರ ಅದನ್ನು ತೆರೆಯಿರಿ.
  • ಆಧಾರ್ ನಂಬರ್ ಅನ್ನು ನಮೂದಿಸಿ
  • ಆಧಾರ್‌ಗೆ ನೊಂದಾಯಿತವಾದ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ಮೂಲಕ ವೆರಿಫೈ ಮಾಡಿ
  • ಫೇಸ್ ಅಥೆಂಟಿಕೇಶನ್ ಮಾಡಬೇಕು.
  • ನಂತರ, ನಿಮ್ಮ ಆಧಾರ್ ಪ್ರೊಫೈಲ್ ರಕ್ಷಣೆಗೆ 5 ಅಂಕಿಗಳ ಸೆಕ್ಯೂರಿಟಿ ಪಿನ್ ರಚಿಸಬೇಕು.

ಹಳೆಯ ಎಂ ಆಧಾರ್ ಆಯಪ್ ಬಳಕೆ ಯಾತಕ್ಕೆ?

  • ಎಂ ಆಧಾರ್ ಆಯಪ್‌ನಲ್ಲಿ ಆಧಾರ್ ದಾಖಲೆಯನ್ನು ನೀವು ಪಿಡಿಎಫ್ ಫೈಲ್‌ನಲ್ಲಿ ಪಡೆದು ಸಲ್ಲಿಸಬಹುದು.
  • ಭೌತಿಕವಾದ ಪಿವಿಸಿ ಆಧಾರ್ ಕಾರ್ಡ್‌ಗಳನ್ನು ಪೋಸ್ಟ್ ಮೂಲಕ ತರಿಸಿಕೊಳ್ಳಬಹುದು.
  • ಆನ್‌ಲೈನ್ ಟ್ರಾನ್ಸಾಕ್ಷನ್ ವೇಳೆ, 16 ಅಂಕಿಗಳ ತಾತ್ಕಾಲಿಕ ಐಡಿ ಸೃಷ್ಟಿಸಿ ನೀಡಬಹುದು. ಇದರಿಂದ ನಿಜವಾದ ಆಧಾರ್ ನಂಬರ್ ಅನ್ನು ಮರೆಮಾಚಬಹುದು.
  • ಆಧಾರ್‌ಗೆ ನೊಂದಾಯಿತವಾದ ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ಪರಿಶೀಲಿಸಬಹುದು ಅಥವಾ ಬದಲಾಯಿಸಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *