ವಾಷಿಂಗ್ಟನ್, ನವೆಂಬರ್ 7: ವಲಸಿಗರ ಸ್ವರ್ಗ ಎನಿಸಿದ್ದ ಅಮೆರಿಕ ಈಗ ವಿದೇಶಿಗರಿಗೆ ಸಾಲು ಸಾಲಾಗಿ ನಿರ್ಬಂಧಗಳನ್ನು ಹಾಕಲು ಹೊರಟಿದೆ. ಎಚ್1ಬಿ ವೀಸಾ ಮೇಲೆ ನಿರ್ಬಂಧ ಹಾಕಿದ ಅಮೆರಿಕ ಈಗ ಇತರ ವೀಸಾಗಳಲ್ಲಿ (US ವೀಸಾ) ವಿವಿಧ ನಿರ್ಬಂಧಗಳನ್ನು ವಿಧಿಸಿದೆ. ಡಯಾಬಿಟಿಸ್, ಬೊಜ್ಜು, ಹೃದಯ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ವಿದೇಶೀ ನಾಗರಿಕರಿಗೆ ವೀಸಾ ನೀಡದಿರಲು ನಿರ್ಧರಿಸಲಾಗಿದೆ. ಅಮೆರಿಕ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ಈ ಅಂಶವಿದೆ. ಬೇರೆ ಬೇರೆ ದೇಶಗಳಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ.
ಈ ಹಿಂದೆಯೂ ವೈದ್ಯಕೀಯ ತಪಾಸಣೆ ಇತ್ತು…
ಅಮೆರಿಕದ ವೀಸಾ ಪಡೆಯಲು ಅಭ್ಯರ್ಥಿಗಳ ಆರೋಗ್ಯ ಪರೀಕ್ಷೆ ನಡೆಸುವುದು ಈ ಮುಂಚಿನಿಂದಲೂ ಇರುವ ನಿಯಮವೇ. ಆದರೆ, ವೀಸಾ ಗೈಡೆನ್ಸ್ ಅದನ್ನು ಎಲ್ಲಿಯೂ ನಮೂದಿಸಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದಾಗ ಅದನ್ನು ನಿರ್ಲಕ್ಷಿಸಿ ವೀಸಾ ನೀಡುವುದು ವಾಡಿಕೆಯಾಗಿತ್ತು. ಈಗ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿಲ್ಲ ರಾಯಭಾರ ಅಧಿಕಾರಿಗಳು ಅರ್ಜಿದಾರರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ವೀಸಾ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಕ್ಲೌಡ್ ಕಿಚನ್ ಐಡಿಯಾ; ಹೋಟೆಲ್ ಬೇಕಿಲ್ಲ, ಇದು ಟ್ರೆಂಡಿ ಬ್ಯೂಸಿನೆಸ್
ಆರೋಗ್ಯ ಸಮಸ್ಯೆಗಳಿರುವ ಜನರು ಅಮೆರಿಕಕ್ಕೆ ಹೋದರೆ ಏನು ಕಷ್ಟ?
ಅಮೆರಿಕ ಸರ್ಕಾರ ತನ್ನ ನಿವಾಸಿಗಳ ಆರೋಗ್ಯ ಪಾಲನೆಗೆ ಸಾಕಷ್ಟು ಹಣ ವ್ಯಯಿಸುತ್ತದೆ. ಅಲ್ಲಿ ಇನ್ಶೂರೆನ್ಸ್ ಯೋಜನೆಗಳು ಸರ್ಕಾರದಿಂದ ಸಬ್ಸಿಡಿ ಹೋಗುತ್ತವೆ. ಹೀಗಾಗಿ, ಜನರ ಆರೋಗ್ಯ ಸಮಸ್ಯೆ ಹೆಚ್ಚಾದರೆ ಸರ್ಕಾರಕ್ಕೆ ಹೊರೆಯಾಗಿದೆ. ಈ ಕಾರಣಕ್ಕೆ ಅನಾರೋಗ್ಯದ ವಲಸಿಗರನ್ನು ಒಳಗೆ ಸೇರಿಸಲು ಅಮೆರಿಕ ನಿರ್ಧರಿಸಬಹುದು.
‘ನೀವು ಅರ್ಜಿದಾರರ ಆರೋಗ್ಯವನ್ನು ಪರಿಗಣಿಸಬೇಕು. ಹೃದಯ ಕಾಯಿಲೆ, ಶ್ವಾಸಕೋಶ ಕಾಯಿಲೆ, ಕ್ಯಾನ್ಸರ್, ಡಯಾಬಿಟಿಸ್, ನರರೋಗ, ಮಾನಸಿಕ ಆರೋಗ್ಯ ಮೊದಲಾದ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವವರನ್ನು ನೋಡಿಕೊಳ್ಳಲು ಸಾವಿರಾರು ಡಾಲರ್‌ಗಳು ವ್ಯಯವಾಗುತ್ತಿವೆ…. ಬೊಜ್ಜು ಆಸ್ತಮಾ, ಬಿಪಿ ಇತ್ಯಾದಿ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಅದನ್ನು ಪರಿಶೀಲಿಸಲಾಗಿದೆ’ ಎಂದು ಅಮೆರಿಕದ ಹೊಸ ವೀಸಾ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: ಬುಲ್ಸ್ ಐ, ಯುಪಿಸಿ ಬಾರ್ಕೋಡ್ನಿಂದ ಕ್ಯುಆರ್ ಕೋಡ್ವರೆಗೆ, ಕುತೂಹಲಕಾರಿ ಕಥೆ
ವೀಸಾ ಸಿಗಲು ಹಣಬಲವಾದರೂ ಇರಬೇಕು
ಒಂದು ವೇಳೆ ಅರ್ಜಿದಾರರಿಗೆ ಸಮಸ್ಯೆಗಳಿದ್ದು, ಆ ಕಾರಣಕ್ಕೆ ವೀಸಾ ಅರ್ಜಿ ತಿರಸ್ಕೃತಗೊಳ್ಳುವಂತಿದ್ದರೆ, ಅಂಥ ಅರ್ಜಿದಾರರ ಬಳಿ ಹಣ ಬಲ ಇದೆಯಾ ಎನ್ನುವುದನ್ನೂ ನಿರ್ವಹಿಸಬೇಕು. ಅಮೆರಿಕದಲ್ಲಿ ಸರ್ಕಾರದ ನೆರವಿಲ್ಲದೆ ತಾವೇ ಭರಿಸುವಷ್ಟು ಹಣ ಇದ್ದರೆ ಅಂಥವರಿಗೆ ವೀಸಾ ಕೊಡಲು ಅವಕಾಶ ಇರುತ್ತದೆ. ಅಮೇರಿಕಾದಲ್ಲಿ ಖಾಸಗಿಯಾಗಿ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಹಳ ಖರ್ಚು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ