Headlines

‘ರೋಣ’ ಸಿನಿಮಾ ವಿಮರ್ಶೆ: ಹಳ್ಳಿ ಜಾತ್ರೆಯಲ್ಲಿ ಧರ್ಮ ವರ್ಸಸ್ ಅಧರ್ಮ

‘ರೋಣ’ ಸಿನಿಮಾ ವಿಮರ್ಶೆ: ಹಳ್ಳಿ ಜಾತ್ರೆಯಲ್ಲಿ ಧರ್ಮ ವರ್ಸಸ್ ಅಧರ್ಮ


  • ಸಮಯ – 126 ನಿಮಿಷಗಳು
  • ಬಿಡುಗಡೆಯಾಗಿದೆ – ನವೆಂಬರ್ 7, 2025
  • ಭಾಷೆ – ಕನ್ನಡ
  • ಪ್ರಕಾರ – ಆಕ್ಷನ್, ನಾಟಕ

ಪಾತ್ರವರ್ಗ – ರಘು ರಾಜ ನಂದ, ಶರತ್ ಲೋಹಿತಾಶ್ವ, ಪ್ರಕೃತಿ ಪ್ರಸಾದ್, ಬಾಲ ರಾಜವಾಡಿ, ಸಂಗೀತಾ, ಕೆ.ಎಸ್. ಶ್ರೀಧರ್ ಮುಂತಾದವರು.

ನಿರ್ದೇಶಕ – ಸತೀಶ್ ಕುಮಾರ್.

‘ರೋಣ’ ಸಿನಿಮಾದಲ್ಲಿ ಹೊಸ ನಟ ರಘು ರಾಜ ನಂದ (ರಘು ರಾಜ ನಂದ) ಅವರು ಹೀರೋ ಆಗಿ ನಟಿಸಿದ್ದಾರೆ. ನವೆಂಬರ್ 7 ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಸತೀಶ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಅಧರ್ಮದ ಜನರು ಹೇಗೆಲ್ಲ ಕಾಟ ಕೊಡುತ್ತಾರೆ ಎಂದು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಂತಿಮವಾಗಿ ಧರ್ಮವೇ ಗೆಲ್ಲುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಗೆಲುವಿಗಾಗಿ ಎಷ್ಟೆಲ್ಲ ಹೋರಾಟ ನಡೆಯುತ್ತಿದೆ ಎಂಬುದೇ ‘ರೋಣ’ (ರೋನಾ ಚಲನಚಿತ್ರ) ಸಿನಿಮಾದ ಸಾರಾಂಶ.

ರಾಜಕೀಯದ ಗಾಳಿ ಸೋಕಿದೆಲ್ಲ ಭ್ರಷ್ಟಾಚಾರ ಇದ್ದೇ ಇರುತ್ತದೆ. ಹಳ್ಳಿ ಪಂಚಾಯಿತಿಯಿಂದ ದಿಲ್ಲಿಯ ಸಂಸತ್ ತನಕವೂ ಅವ್ಯವಹಾರ ಕಂಡುಬಂದಿದೆ. ‘ರೋಣ’ ಸಿನಿಮಾದ ನಿರ್ದೇಶಕ ಸತೀಶ್ ಅವರು ಹಳ್ಳಿಗಾಡಿನಲ್ಲಿ ನಡೆಯುವ ರಾಜಕೀಯದ ಘಟನೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ. ಭೂಮಿ ಉಳಿಸಿಕೊಳ್ಳುವ ರೈತರು ಕಷ್ಟಪಡುವ ದೃಶ್ಯದಿಂದ ಸಿನಿಮಾ ಶುರುವಾಗುತ್ತದೆ. ಆರಂಭದಿಂದ ಕೊನೆಯವರೆಗೂ ಒಳಿತಿಗಾಗಿ ಹೀರೋ ಹೋರಾಡುತ್ತಲೇ ಇರುತ್ತಾನೆ.

ರಾಜಕಾರಣಿಯಾದರೂ ಜನಸೇವೆ ಮಾಡಲು ಸದಾ ಮುಂದಿರುವ ಹಿರಿಯನ ಪಾತ್ರದಲ್ಲಿ ಶರತ್ ಲೋಹಿತಾಶ್ವ ಅವರು ನಟಿಸಿದ್ದಾರೆ. ಅವರ ಪುತ್ರನ ಪಾತ್ರದಲ್ಲಿ ರಘು ರಾಜ ನಂದ ಅವರು ನಟಿಸಿದ್ದಾರೆ. ಇವರಿಬ್ಬರ ಜೊತೆಯಲ್ಲಿ ಬಾಲ ರಾಜವಾಡಿ ಅವರು ಕೂಡ ಅನೇಕ ದೃಶ್ಯಗಳಲ್ಲಿ ಸಾಥ್ ನೀಡಿದ್ದಾರೆ. ಹೀರೋ ಆಗಿ ನಟಿಸಿದ ಮೊದಲ ಸಿನಿಮಾದಲ್ಲೇ ಹಿರಿಯ ನಟರ ಜೊತೆ ತೆರೆಹಂಚಿಕೊಳ್ಳಲು ಸಿಕ್ಕ ಅವಕಾಶವನ್ನು ರಘು ರಾಜ ನಂದ ಅವರು ಸದ್ಬಳಕೆ ಮಾಡಿಕೊಂಡಿದ್ದಾರೆ.

ರಘು ರಾಜ ನಂದ ಅವರಿಗೆ ಜೋಡಿಯಾಗಿ ನಟಿ ಪ್ರಕೃತಿ ಪ್ರಸಾದ್ ಅವರು ನಟಿಸಿದ್ದಾರೆ. ವಿದ್ಯಾವಂತೆಯಾದರೂ ಹಳ್ಳಿಯಲ್ಲಿ ಇದ್ದು ಬಡವರಿಗೆ ಸಹಾಯ ಮಾಡಬೇಕು ಎಂಬ ಯುವತಿಯ ಪಾತ್ರದಲ್ಲಿ ಪ್ರಕೃತಿ ಅವರು ಕಾಣಿಸಿಕೊಂಡಿದ್ದಾರೆ. ರಘು ರಾಜ ನಂದ ಮತ್ತು ಪ್ರಕೃತಿ ಪ್ರಸಾದ್ ಅವರ ಕೆಮಿಸ್ಟ್ರಿ ಚೆನ್ನಾಗಿದೆ. ಹಾಡುಗಳಲ್ಲಿ ಮಿಂಚಿದ್ದುದೇ ಎಮೋಷನಲ್ ದೃಶ್ಯಗಳಲ್ಲಿ ಅವರು ಸೈ ಎನಿಸಿಕೊಂಡಿದ್ದಾರೆ.

ಹೊಸ ನಟನ ಪರಿಚಯಕ್ಕೆ ಬೇಕಾದ ಎಲ್ಲ ಅಂಶಗಳು ‘ರೋಣ’ ಸಿನಿಮಾದಲ್ಲಿ ಇವೆ. ನಟನೆ, ಡ್ಯಾನ್ಸ್, ಫೈಟ್ ಯಾವುದರಲ್ಲೂ ರಘು ರಾಜ ನಂದ ಅವರು ಹಿಂದೆ ಬಿದ್ದಿಲ್ಲ. ಕ್ಲಾಸ್ ಹಾಗೂ ಮಾಸ್ ಶೇಡ್ ಇರುವ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಮುಖ್ಯಮಂತ್ರಿಯಾಗಿ ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರದಲ್ಲಿ ಕೆ.ಎಸ್. ಶ್ರೀಧರ್ ಅವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಐ ಆಮ್ ಗಾಡ್ ರಿವ್ಯೂ: ರಿಯಲ್ ಸ್ಟಾರ್ ಫ್ಯಾನ್ಸ್ ಇಷ್ಟಪಡುವಂತಿದೆ ಉಪ್ಪಿ ಶಿಷ್ಯನ ‘ಎ’ ಫ್ಲೇವರ್ ಸಿನಿಮಾ

ಈ ಸಿನಿಮಾದ ಕಥೆ ಗ್ರಾಮೀಣ ಪರಿಸರದಲ್ಲಿ ನಡೆಯುತ್ತಿದೆ. ಹಳ್ಳಿ ಎಂದಮೇಲೆ ಹಬ್ಬ, ಜಾತ್ರೆ ಇರಲೇಬೇಕು. ಕಾಳಿ ದೇವಿಯ ಜಾತ್ರೆಯನ್ನೇ ಹಿನ್ನೆಲೆಯಾಗಿ ಇಟ್ಟುಕೊಂಡು ಒಳಿತು ಮತ್ತು ಕೆಡುಕಿನ ನಡುವಿನ ಯುದ್ಧವನ್ನು ‘ರೋಣ’ ಚಿತ್ರದಲ್ಲಿ ತೋರಿಸಲಾಗಿದೆ. ಆದರೆ ಒಟ್ಟಾರೆ ಸಿನಿಮಾದಲ್ಲಿ ಹೆಚ್ಚೇನೂ ಹೊಸತನ ನಿರೀಕ್ಷಿಸಲು ಆಗದು. ಅದು ಈ ಚಿತ್ರಕ್ಕೆ ಮೈನಸ್ ಆಗಿದೆ. ಸಿದ್ಧಸೂತ್ರದ ಒಂದು ಕಮರ್ಷಿಯಲ್ ಸಿನಿಮಾ ರೀತಿ ‘ರೋಣ’ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *