
ಇರಾನ್- ಇಸ್ರೇಲ್ ನಡುವಿನ ಸಂಘರ್ಷದಿಂದ ಜಾಗತಿಕ ಇಂಧನ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿ, ಅದರ ಪರಿಣಾಮ ಭಾರತದಲ್ಲೂ ಎಲ್‌ಪಿಜಿ ಪೂರೈಕೆಯ ಮೇಲೆ ಸಾಕಷ್ಟು ಪರಿಣಾಮ ಬಿದ್ದಿದೆ. ಜಗ್ ವಿಕ್ರಮ್ ನೌಕೆ 20,400 ಟನ್ ಎಲ್‌ಪಿಜಿ ಜೊತೆ ಭಾರತದತ್ತ ಆಗಮಿಸುತ್ತಿದೆ. ಜಗ್ ವಿಕ್ರಮ್ ನೌಕೆಯು 24 ನಾವಿಕರನ್ನು ಹೊಂದಿದ್ದು, ಏಪ್ರಿಲ್ 15, 2026 ರಂದು ಮುಂಬೈ ಬಂದರಿಗೆ ಅಗಮಿಸುವ ನಿರೀಕ್ಷೆಗಳಿವೆ.