ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ…

ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ…


ನವದೆಹಲಿ, ಫೆಬ್ರುವರಿ 11: ಸರ್ಕಾರದ ಆದಾಯ ತೆರಿಗೆ ಕಾನೂನಿನಲ್ಲಿ (ಹೊಸ ಆದಾಯ ತೆರಿಗೆ ನಿಯಮಗಳು) ಕೆಲವು ಸುಧಾರಣೆಗಳನ್ನು ಮಾಡಲಾಗುತ್ತಿದೆ, ಹೊಸ ಕರಡು ನಿಯಮಗಳನ್ನು ರೂಪಿಸಲಾಗಿದೆ. ಇವು ಸಾರ್ವಜನಿಕ ಪರಾಮರ್ಶೆಗೆ ಒಳಪಡುತ್ತವೆ, ಅಂತಿಮ ನಿಯಮಗಳು 2026ರ ಏಪ್ರಿಲ್ 1 ರಿಂದ ಜಾರಿಗೆ ಬರುತ್ತವೆ. ಈ ಪ್ರಸ್ತಾಪಿತ ನಿಯಮಗಳಲ್ಲಿ ಕೆಲವು ಪ್ಯಾನ್ ನಿಯಮಗಳ ಬದಲಾವಣೆಗಳು ಇವೆ. ನಿಮ್ಮ ಹಣಕಾಸು ಸ್ಥಿತಿ ಗತಿ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರಬಲ್ಲ ನಿಯಮಗಳೂ ಇವೆ. ಕ್ಯಾಷ್ ಡೆಪಾಸಿಟ್, ಮಿತಿ ವಾಹನ ಖರೀದಿ, ಇನ್ಶೂರೆನ್ಸ್ ಇತ್ಯಾದಿ ವಿಚಾರದಲ್ಲಿ ಪ್ಯಾನ್ ಬಳಕೆ ಕುರಿತಾದ ಬದಲಾವಣೆಗಳು.

ಕ್ಯಾಷ್ ಡೆಪಾಸಿಟ್ ಮತ್ತು ವಿತ್ರಾಯಲ್ ಮಿತಿಯಲ್ಲಿ ಭಾರೀ ಪ್ರಮಾಣದಲ್ಲಿ

ಒಬ್ಬ ವ್ಯಕ್ತಿಗೆ ಒಬ್ಬ ಹಣಕಾಸಿನಿಂದ ಹೆಚ್ಚಿನ 10 ಲಕ್ಷ ರೂ ಮೊತ್ತದ ಕ್ಯಾಶ್ಪಾಸಿಟ್ ಅಥವಾ ವಿತ್ಡ್ರಾ ಪ್ಯಾನ್ ಅನ್ನು ನಮೂದಿಸಬೇಕು ಎಂಬ ಪ್ರಸ್ತಾಪವಿದೆ. ಈಗಿರುವ ನಿಯಮ ಪ್ರಕಾರ, ದಿನಕ್ಕೆ 50,000 ರೂ ಹಾಗೂ ಹೆಚ್ಚಿನ ಮೊತ್ತದ ಡೆಪಾಸಿಟ್‌ಗೆ ಪ್ಯಾನ್ ತೋರಿಸಬೇಕು.

ವಾಹನ ಖರೀದಿಯಲ್ಲೂ ಮಿತಿ ಹೆಚ್ಚಿದೆ

ಮೋಟಾರು ವಾಹನವನ್ನು ಖರೀದಿಸುವಾಗ, ಅದರ ಮೌಲ್ಯ 5 ಲಕ್ಷ ರೂಗಿಂತ ಹೆಚ್ಚಿದ್ದರೆ ಆ ಹಣ ಪಾವತಿಸುವಾಗ ಪ್ಯಾನ್ ತೋರಿಸಬೇಕು ಎಂದು ಹೊಸ ನಿಯಮವನ್ನು ಪ್ರಸ್ತಾಪಿಸಲಾಗಿದೆ. ಈಗಿರುವ ನಿಯಮದ ಪ್ರಕಾರ ಯಾವುದೇ ವಾಹನದ ಖರೀದಿಗೆ ಪ್ಯಾನ್ ತೋರಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಹೂಡಿಕೆಗಳು ಎಷ್ಟು..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್ಗಳು; ಹಿಗ್ಗಿದ ಗೋಲ್ಡ್ ಐಟಿಎಫ್ಗಳು

ಹೋಟೆಲ್, ಸಭಾಂಗಣಗಳ ಪಾವತಿಯಲ್ಲಿ…

ಹೋಟೆಲ್, ರೆಸ್ಟೋರೆಂಟ್, ಬ್ಯಾಂಕ್ವೆಟ್ ಹಾಲ್, ಕನ್ವೆನ್ಷನ್ ಸೆಂಟರ್, ಈವೆಂಟ್ ಮ್ಯಾನೇಜರ್ ಇತ್ಯಾದಿ ಸೇವೆಗಳಿಗೆ ಹಣ ಪಾವತಿಸುವಾಗ ಅದರ ಮೌಲ್ಯ 50,000 ರೂ ಇದ್ದರೆ ಪ್ಯಾನ್ ಆಗಿರುತ್ತದೆ. ಆದರೆ, ಹೊಸ ನಿಯಮದಲ್ಲಿ ಈ ಮಿತಿಯನ್ನು ಒಂದು ಲಕ್ಷ ರೂಗೆ ಏರಿಸಲಾಗಿದೆ.

ರಿಯಲ್ ಎಸ್ಟೇಟ್ ವಹಿವಾಟು

ಸದ್ಯ ನೀವು ಖರೀದಿಸಿರುವ ಅಥವಾ ಮಾರುತ್ತಿರುವ ಸೈಟು, ಮನೆಯ ಬೆಲೆ 10 ಲಕ್ಷ ರೂ ದಾಟಿದಾಗ ಪ್ಯಾನ್ ಆಗಿರುತ್ತದೆ. ಈಗ ಇದರ ಮಿತಿಯನ್ನು 20 ಲಕ್ಷ ರೂಗೆ ಏರಿಸುವ ಪ್ರಸ್ತಾಪವನ್ನು ಮಾಡಲಾಗಿದೆ.

ಪ್ಯಾನ್ ವ್ಯಾಪ್ತಿಗೆ ಇನ್ಶೂರೆನ್ಸ್ ಅಕೌಂಟ್

ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗಲೇ ಪ್ಯಾನ್ ತೋರಿಸಬೇಕು ಎಂಬ ನಿಯಮದ ಪ್ರಸ್ತಾಪವಿದೆ. ಈಗಿರುವ ನಿಯಮದ ಪ್ರಕಾರ, ಲೈಫ್ ಇನ್ಶೂರೆನ್ಸ್ ಪ್ರೀಮಿಯಂ ಹಣ ವರ್ಷಕ್ಕೆ 50,000 ರೂ ಮೀರಿದಾಗ ಮಾತ್ರ ಪ್ಯಾನ್ ಅನ್ನು ನಮೂದಿಸಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?

ಹೊಸ ಆದಾಯ ತೆರಿಗೆ ಕಾಯ್ದೆ 2026ರ ಏಪ್ರಿಲ್ ನಿಂದ ಜಾರಿಗೆ ಬರುತ್ತದೆ. ಸರಳ ಮತ್ತು ಸುಲಭಗೊಳಿಸಲಾಗಿದೆ. ಕ್ರಿಪ್ಟೋ ವಹಿವಾಟುಗಳ ಆದಾಯ ತೆರಿಗೆಯನ್ನು ಸಲ್ಲಿಸುವುದು, ಸಿಬಿಡಿಸಿಯನ್ನು (ಇ-ರುಪಾಯಿ) ಮಾನ್ಯವಾದ ಪೇಮೆಂಟ್ ವಿಧಾನವೆಂದು ಅಧಿಕೃತವಾಗಿ ಪರಿಗಣಿಸುವುದು ಇತ್ಯಾದಿ ಹಲವು ಪ್ರಸ್ತಾಪಗಳು ಈ ಕರಡು ನಿಯಮಗಳಲ್ಲಿ ಇವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *