
ಬೆಂಗಳೂರು, (ಮಾರ್ಚ್ 09): ಕರ್ನಾಟಕದ ಜೈಲುಗಳಲ್ಲಿ (ಕರ್ನಾಟಕ ಜೈಲು) ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಡಿಜಿಪಿ ಅಲೋಕ್ ಕುಮಾರ್ (ಅಲೋಕ್ ಕುಮಾರ್) ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವರ್ಷಾನುಗಟ್ಟಲೆ ಕೆಲಸ ಮಾಡುತ್ತಿರುವ ಜೈಲು ಸಿಬ್ಬಂದಿಯನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಲು ಯೋಜಿಸಲಾಗಿದೆ. ಇನ್ನು ಜೈಲಿನಲ್ಲಿ ಕೈದಿಗಳ ಉಟೋಪಚಾರದಲ್ಲೂ ಸಹ ಮಹತ್ವದ ಬದಲಾವಣೆ ತಂದಿದ್ದು, ಇದೀಗ ಜೈಲುಗಳಲ್ಲಿ ಕೈದಿಗಳ ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್ ಮಾಡಲಾಗಿದೆ. ಕೈದಿಗಳಿಗೆ ಗಂಭೀರ ಅನಾರೋಗ್ಯ, ಗಾಯದಿಂದ ನಡೆಯಲು ಆಗದಿದ್ದಾಗ ತಿಂಗಳಿಗೆ ಒಮ್ಮೆ ಕುಟುಂಬವನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಈ ಸಂಬಂಧ ಇಂದು (ಮಾರ್ಚ್ 09) ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕೈದಿಗಳ ಭೇಟಿಗೆ ಹೊಸ ನಿಯಮಗಳು
- ಕೈದಿಗೆ ಗಂಭೀರ ಅನಾರೋಗ್ಯ ಅಥವಾ ಗಾಯದಿಂದ ನಡೆಯಲು ಸಾಧ್ಯವಾಗದ ವೇಳೆ (ತಿಂಗಳಲ್ಲಿ ಒಮ್ಮೆ ಭೇಟಿಗೆ ಅವಕಾಶ)
- ಕುಟುಂಬದಲ್ಲಿ ಸಾವು ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ ವೇಳೆ (ಕೈದಿಗೆ ಭೇಟಿ ಮಾಡಿ ಮಾಹಿತಿ ಅವಕಾಶ)
- ಬಿಡುಗಡೆಯ ದಿನಾಂಕದ ಎರಡು ತಿಂಗಳ ಮುಂಚೆ (ಕೈದಿ ಸಜೆ ಮುಗಿದಿದ್ದು ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸಲು ಭೇಟಿಗೆ ಅವಕಾಶ)
- ಉದ್ಯೋಗ, ವಾಸಸ್ಥಳ, ಸಲಹೆ ಇತ್ಯಾದಿ ವ್ಯವಸ್ಥೆಗಾಗಿ ಸಂದರ್ಶನಕ್ಕೆ ಅವಕಾಶ.
- ಕೈದಿಗಳನ್ನ ಭೇಟಿ ಮಾಡುವವರು ವಿಕಲಚೇತನರು ಅಥವಾ ಗರ್ಭಿಣಿಯರಿದ್ದರೆ (ತಿಂಗಳಲ್ಲಿ ಒಮ್ಮೆ ಭೇಟಿಯಾಗುವ ಅವಕಾಶ)
ಇದನ್ನೂ ಓದಿ: ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಹೊಸ ಅಸ್ತ್ರ ಪ್ರಯೋಗಿಸಿದ ಡಿಜಿಪಿ ಅಲೋಕ್ ಕುಮಾರ್
ಹೀಗೆ ಜೈಲಿನಲ್ಲಿರುವ ಕೈದಿಗಳನ್ನು ಕುಟುಂಬಸ್ಥರ ಭೇಟಿಗೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇನ್ನು ಈ ರೀತಿ ವಿಶೇಷ ಸಂದರ್ಶನ ಭೇಟಿಗೆ ಕೆಲವು ನಿಯಮಗಳು ಸಹ ಪಾಲಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹಾಗದ್ರೆ, ಕೈದಿ ಭೇಟಿಗೆ ಪಾಲಿಸಬೇಕಾದ ನಿಯಮಗಳೇನು ಈ ಕೆಳನಂತಿವೆ ನೋಡಿ.
ಕೈದಿ ಭೇಟಿಗೆ ಪಾಲಿಸಬೇಕಾದ ನಿಯಮಗಳು
- ಆಯಾ ಜೈಲು ಮುಖ್ಯಸ್ಥರ ಲಿಖಿತ ಅನುಮತಿ ಕಡ್ಡಾಯ.
- ಜೈಲು ಭದ್ರತಾ ಕಾರಣಕ್ಕೆ ಸಿಬ್ಬಂದಿ ತಪಾಸಣೆಗೆ ಸಹಕಾರ ನೀಡಲಾಗಿದೆ.
- ನಿಗಧಿತ ಸಂದರ್ಶನ ಕೊಠಡಿಯಲ್ಲಿ ಮಾತ್ರ ಅವಕಾಶ.
- 30 ನಿಮಿಷಗಳವರೆಗೆ ಮಾತ್ರ ಸಂದರ್ಶನಕ್ಕೆ ಅವಕಾಶ.
- 5 ಮಂದಿಗೂ ಮೀರಿ ಭೇಟಿಗೆ ಅವಕಾಶವಿಲ್ಲ.
- ಜೈಲು ಅಧಿಕಾರಿಯ ಮೇಲ್ವಿಚಾರಣೆ ಇರಬೇಕು.
- ಕನಿಷ್ಠ 2 ಕೆಲಸದ ದಿನಗಳ ಮೊದಲು ಅರ್ಜಿ ಸಲ್ಲಿಸಬೇಕು.
- ಅತ್ಯವಶ್ಯಕ ಕಾರಣವಿದ್ರೆ ಕಾರಾಗೃಹ DGP ಅನುಮತಿ ಅಗತ್ಯ.
ಹೀಗೆ ಜೈಲಿನಲ್ಲಿರುವ ಕೈದಿಗಳ ಭೇಟಿಗೆ ಹಾಗೂ ಭೇಟಿಗೆ ಮುನ್ನ ಕುಟುಂಬಸ್ಥರು ಪಾಲಿಸಬೇಕಾದ ನಿಯಮಾವಳಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಜಾರಿಯಲ್ಲಿದೆ. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಕೈಗಳಿಗೆ ರಾಜಾತಿಥ್ಯಕ್ಕೆ ಕಡಿವಾಣ ಹಾಕಲು ಡಿಜಿಪಿ ಅಲೋಕ್ ಕುಮಾರ್ ಈ ರೀತಿಯ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ.
ಇನ್ನು ವರ್ಷಾನುಗಟ್ಟಲೇ ಜೈಲಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನೂ ಸಹ ಬೇರೆಯವರ ವರ್ಗಾವಣೆ ಮಾಡುವ ಚಿಂತನೆಗಳು ನಡೆದಿವೆ. ಯಾಕಂದ್ರೆ, ಸಿಬ್ಬಂದಿ ಒಂದೇ ಜಾಗದಲ್ಲಿ ವರ್ಷಾನುಗಟ್ಟಲೇ ಇದ್ದರೆ ಕೈದಿಗಳೊಂದಿಗೆ ಅನ್ಯೂನ್ಯತೆಯಿದೆ, ಹಣಕ್ಕಾಗಿ ಅವರಿಗೆ ಬೇಕಾದ ಸೌಲತ್ತುಗಳನ್ನು ಒದಗಿಸುವ ಸಾಧ್ಯತೆಗಳಿವೆ. ಹೀಗಾಗಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.