7 ಗಂಟೆ 18 ನಿಮಿಷದ ನಿದ್ದೆಯಲ್ಲಿ ಅಡಗಿದೆ ಬಿಪಿ, ಶುಗರ್ ಗುಟ್ಟು, ಏನಿದು ಹೊಸ ಅಧ್ಯಯನ ವರದಿ? ಡಯಾಬಿಟಿಸ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಇಲ್ಲಿದೆ, ವಯಸ್ಸಾಗುತ್ತಿದ್ದಂತೆ ಕಾಯಿಲೆಯಿಂದ ದೂರವಿರಲು ಅಧ್ಯಯನ ವರದಿ ಹೇಳಿದೆ.

ಮನುಷ್ಯನ ಜೀವನದಲ್ಲಿ ನಿದ್ದೆ ಅತ್ಯಂತ ಮುಖ್ಯ. ಸರಿಯಾದ ಪ್ರಮಾಣದ ನಿದ್ದೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ನಿದ್ದೆ ಕಡಿಮೆಯಾಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಉಲ್ಭಣಗೊಳ್ಳುತ್ತದೆ. ಶುಗರ್, ಬಿಪಿ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳ ಹಿಂದೆ ಸರಿಯಾದ ಪ್ರಮಾಣದ ನಿದ್ದೆ ಅತ್ಯವಶ್ಯಕ. ಇದೀಗ ಅಧ್ಯಯನ ವರದಿಯೊಂದು 7 ಗಂಟೆ 18 ನಿಮಿಷದ ಸೂತ್ರ ಮುಂದಿಟ್ಟಿದೆ.

ಮನುಷ್ಯನಿಗೆ 7 ರಿಂದ 9 ಗಂಟೆ ಸರಿಯಾದ ನಿದ್ದೆ ಅತ್ಯವಶ್ಯಕ ಎಂದು ವೈದ್ಯರು ಸೂಚನೆ ನೀಡಿರುವುದು ಕೇಳಿರುತ್ತೀರಿ. ಇದೀಗ ಒರ್ವನ ಆರೋಗ್ಯ ಕಾಪಾಡಲು ಎಷ್ಟು ಗಂಟೆ ನಿದ್ದೆ ಬೇಕು ಅನ್ನೋದನ್ನು ಬಿಎಂಜೆ ಒಪನ್ ಡಯಾಬಿಟಿಸ್ ರಿಸರ್ಚ್ ಆ್ಯಂಡ್ ಕೇರ್ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಹೇಳಿದೆ. ಬಿಪಿ, ಶುಗರ್, ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಲು ಒಬ್ಬ ವ್ಯಕ್ತಿ 7 ಗಂಟೆ 18 ನಿಮಿಷ ನಿದ್ದೆ ಮಾಡಬೇಕು ಎಂದಿದೆ.

ಕೆಲಸದ ಕಾರಣದಿಂದ, ಜೀವನ ಶೈಲಿಯ ಕಾರಣದಿಂದ ಹಲವರಿಗೆ ವಾರದ 5 ರಿಂದ 6 ದಿನ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.ಇದಕ್ಕಾಗಿ ವಾರಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ನಿದ್ದೆ ಸರಿದೂಗಿಸಲು ಹೆಚ್ಚು ಹೊತ್ತು ನಿದ್ದೆ ಮಾಡುವುದರಿಂದ ಅಪಾಯ ಹೆಚ್ಚು ಎಂದು ಈ ಅಧ್ಯಯನ ವರದಿ ಹೇಳಿದೆ. ಇದರಿಂದ ಗ್ಲೂಕೋಸ್ ಮೆಟಬಾಲಿಸಂ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದ ಆರೋಗ್ಯ ಮತ್ತಷ್ಟು ಹದಗೆಡಲಿದೆ ಎಂದು ವರದಿ ಹೇಳಿದೆ.

ಟೈಪ್ 2 ಮಧುಮೇಹ ಹಾಗೂ ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡಲು ಸರಿಯಾಗಿ 7 ಗಂಟೆ 18 ನಿಮಿಷ ನಿದ್ದೆ ಮಾಡಬೇಕು. ಅಂದರೆ ಬೆಡ್ ಮೇಲೆ ಮಲಗಿದ್ದರೆ ಸಾಲದು ನಿದ್ದೆ 7 ಗಂಟೆ 18 ನಿಮಿಷ ಆಗಬೇಕು. ದೆಹವು ಇನ್ಸುಲಿನ್ ಸರಿಯಾಗಿ ಬಳಕೆ ಮಾಡದಿದ್ದಾಗ ಅಥವಾ ಪ್ಯಾಂಕ್ರಿಯಾಸ್ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸದಿದ್ದಾಗ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ.

ಈ ಅಧ್ಯಯನಕ್ಕಾಗಿ 20 ರಿಂದ 80 ವರ್ಷದೊಳಗಿನ 23475 ಮಂದಿಯನ್ನು ಮಾದರಿಗಳಾಗಿ ಪರಿಗಣಿಸಿ ಅಧ್ಯಯನ ನಡೆಸಲಾಗಿದೆ. 2009 ರಿಂದ 2003ರ ವರೆಗೆ ಈ ಅಧ್ಯಯನ ನಡೆಸಲಾಗಿದೆ. ಸುದೀರ್ಘ ಅವಧಿಯ ಅಧ್ಯಯನದ ಮೂಲಕ ಆರೋಗ್ಯಕರ ನಿದ್ದೆಯ ಸೂತ್ರ ಪತ್ತೆ ಹಚ್ಚಲಾಗಿದೆ.

ನಿದ್ದೆ ಮುಖ್ಯ ಹಾಗಂತ ಯಾವುದೋ ಸಮಯದಲ್ಲಿ ಉತ್ತಮವಲ್ಲ. ತಡ ರಾತ್ರಿವರೆಗೆ ಇರುವುದು ಉತ್ತಮ ಅಭ್ಯಾಸವಲ್ಲ. 10 ಗಂಟೆ ಒಳಗೆ ನಿದ್ದೆಗೆ ಹತ್ತಿರಬೇಕು. ಸರಿಯಾಗಿ 7 ಗಂಟೆ 18 ನಿಮಿಷ ಸಂಪೂರ್ಣ ನಿದ್ದೆ ಮಾಡಿ ಎದ್ದಿರಬೇಕು. ಈ ಅಭ್ಯಾಸ ರೂಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನ ವರದಿ ಹೇಳಿದೆ.

ಸೂಚನೆ: ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡುವಾಗ ನುರಿತ ವೈದ್ಯರನ್ನು ಸಂಪರ್ಕಿಸಿ

ಸರಿಯಾದ ಸಮಯಕ್ಕೆ ನಿದ್ದೆ

Source link
7 ಗಂಟೆ 18 ನಿಮಿಷದ ನಿದ್ದೆಯಲ್ಲಿ ಅಡಗಿದೆ ಬಿಪಿ, ಶುಗರ್ ಗುಟ್ಟು, ಏನಿದು ಹೊಸ ಅಧ್ಯಯನ ವರದಿ?