Headlines

ಹೊಸ ವರ್ಷಕ್ಕೆ ಗುಡ್​​ನ್ಯೂಸ್​​: ಡಿ. 31ರ ತಡರಾತ್ರಿವರೆಗೂ ಮೆಟ್ರೋ, BMTC ಬಸ್​​ ಸಂಚಾರ

ಹೊಸ ವರ್ಷಕ್ಕೆ ಗುಡ್​​ನ್ಯೂಸ್​​: ಡಿ. 31ರ ತಡರಾತ್ರಿವರೆಗೂ ಮೆಟ್ರೋ, BMTC ಬಸ್​​ ಸಂಚಾರ


ಬೆಂಗಳೂರು, ಡಿಸೆಂಬರ್ 29: ಹೊಸ ಹಿನ್ನೆಲೆ ಮೆಟ್ರೋ ಸೇವೆಯನ್ನು ವಿಸ್ತರಣೆಗೊಳಿಸಲಾಯಿತು, ಡಿ.31 ರಂದು ಬೆಳಗಿನಜಾವ 3:10 ರವರೆಗೂ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಕಟಣೆ ಮೂಲಕ ಬಿಎಂಆರ್ ಸಿಎಲ್.

ಕೊನೆಯ ಮೆಟ್ರೋ ರೈಲಿನ ಸಮಯ

ನೇರ ಮಾರ್ಗ

ವೈಟ್ ಫೀಲ್ಡ್ ನಿಂದ ಚಲ್ಲಘಟ್ಟದ ​​ವರೆಗೆ- ರಾತ್ರಿ 1:45 ಗಂಟೆ

ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ವರೆಗೆ- ರಾತ್ರಿ 2 ಗಂಟೆ

ಹಸಿರು ಮಾರ್ಗ

ಮಾದಾವರದಿಂದ ರೇಷ್ಮೆ ಸಂಸ್ಥೆಯ ವರೆಗೆ- ರಾತ್ರಿ 2 ಗಂಟೆ

ರೇಷ್ಮೆ ಸಂಸ್ಥೆಯಿಂದ ಮಾದಾವರದ ವರೆಗೆ- ರಾತ್ರಿ 2 ಗಂಟೆ

ಹಳದಿ ಮಾರ್ಗ

ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗೆ- ಬೆಳಗಿನಜಾವ 3:10 ಗಂಟೆ

ಬೊಮ್ಮಸಂದ್ರದಿಂದ ಆರ್‌.ವಿ ರಸ್ತೆಯ ವರೆಗೆ- 1:30 ಗಂಟೆ

ಇದನ್ನೂ ಓದಿ: ಬೆಂಗಳೂರಿನ ಹೊಸ ವರ್ಷಾಚರಣೆಗೆ ಈ ಫ್ಲೈಓವರ್ಗಳು, ಮೆಟ್ರೋ ಸ್ಟೇಷನ್ ಕ್ಲೋಸ್

ಮೆಜೆಸ್ಟಿಕ್ ನಿಂದ ಕೊನೆಯ ಮೆಟ್ರೋ ಸಮಯ

ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲು ರಾತ್ರಿ 2:45ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಹೊರಡಲಿದೆ.

ರೈಲು ಸಂಚಾರದ ಅಂತರ

31ನೇ ಡಿಸೆಂಬರ್ 2025ರ ರಾತ್ರಿ 11:30ರಿಂದ ವಿಸ್ತೃತ ಸೇವೆ ಮುಗಿಯುವವರೆಗೂ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ ಹಾಗೂ ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಎಂ.ಜಿ. ರೋಡ್ ನಿಲ್ದಾಣ ಬಂದ್

ಎಂ.ಜಿ. ರಸ್ತೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿದೆ, ಡಿಸೆಂಬರ್ 31, 2025ರ ರಾತ್ರಿ 10 ರಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಪವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚದಿದ್ದರೆ. ಆದರೆ, ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ, ಪುಯಾಣಿಕರು ಅಲ್ಲಿ ರೈಲನ್ನು ಹತ್ತಿ-ಇಳಿಯಬಹುದು.

ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11 ರ ನಂತರ ಟೋಕನ್ ಮಾರಾಟ ಇರುವುದಿಲ್ಲ. ಈ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಪಯಣಿಸುವ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಮೂಲಕ ಅಥವಾ ಮುಂಗಡವಾಗಿ ರಿಟರ್ನ್ ಟಿಕೆಟ್ ಖರೀದಿಸಿ ಪ್ರಯಾಣಿಸಲು ಬಿಎಂಆರ್‌ಸಿಎಲ್.

ತಡರಾತ್ರಿವರೆಗೆ BMTC ಬಸ್ ಕೂಡ ಓಡಾಟ

ಡಿಸೆಂಬರ್ 31 ರಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್‌ಗಳು ಕೂಡ ಕಾರ್ಯಾಚರಣೆ ನಡೆಸಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯವಿದೆ. ರಾತ್ರಿ 11 ಗಂಟೆಯ ನಂತರ ತಡರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ಸುಗಳನ್ನು ಓಡಾಟ ನಡೆಸಲಾಗುವುದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವರ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ KHB ಕ್ವಾಟರ್ಸ್, ಜನಪ್ರಿಯ ಟೌನ್ ಶಿಪ್, ನೆಲಮಂಗಲ, ಯಲಹಂಕ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಸೇರಿದಂತೆ ಹಲವೆಡೆ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:49 pm, ಸೋಮ, 29 ಡಿಸೆಂಬರ್ 25





Source link

Leave a Reply

Your email address will not be published. Required fields are marked *