ಬೆಂಗಳೂರಿನ ಎಂಜಿ ರೋಡ್​​ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಕಾದು ಕುಳಿತವರಿಗೆ ಶಾಕ್!

ಬೆಂಗಳೂರಿನ ಎಂಜಿ ರೋಡ್​​ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಕಾದು ಕುಳಿತವರಿಗೆ ಶಾಕ್!


ಬೆಂಗಳೂರು, (ಡಿಸೆಂಬರ್ 10): ಹೊಸವರ್ಷವನ್ನ (ಹೊಸ ವರ್ಷ) ಭರ್ಜರಿಯಾಗಿ ವೆಲ್ಕಂ ಮಾಡಲು ಯುವಕ, ಯುವತಿಯರು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಬೆಂಗಳೂರಿನ ಎಂಜಿ ರೋಡ್‌ನಲ್ಲಿ (ಬೆಂಗಳೂರು ಎಂಜಿ ರಸ್ತೆ) ಕುಣಿದು ಕುಪ್ಪಳಿಸಲು ಯುವ ಸಮೂಹ ಸಜ್ಜಾಗಿದೆ. ಡಿಸೆಂಬರ್ 31 ರ ರಾತ್ರಿ ನ್ಯೂಇಯರ್ ಕಿಕ್ಕೇರಿಸದಂತೆ ಸರ್ಕಾರ ಪ್ಲಾನ್ ಮಾಡುತ್ತಿದೆ, ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳ ಸರಣಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಎಂಜಿ ರೋಡ್ ನ್ಯೂಯರ್ ಆಚರಣೆಗೆ ಅವಕಾಶ ನೀಡದಂತೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಾರಿ ನ್ಯೂ ಇಯರ್‌ಗೆ ಜನ ಸೇರುವ ನಿರೀಕ್ಷೆಯಿದೆ, ಚಿನ್ನಸ್ವಾಮಿ ಕಾಲ್ತುಳಿತದಂತಹ ಘಟನೆ ಸಂಭವಿಸೋ ಆತಂಕ ಎದುರಾಗಿದೆ. ಹೀಗಾಗಿ ಎಲ್ಲಾ ಸಾಧಕರ ಬಾಧಕಗಳ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಲಿದ್ದಾರೆ, ಆ ಬಳಿಕ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.



Source link

Leave a Reply

Your email address will not be published. Required fields are marked *