New Year: ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ತಯಾರಿ ಜೋರು, ನಗರದಾದ್ಯಂತ ಪೊಲೀಸರು ಹೈ ಅಲರ್ಟ್

New Year: ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ತಯಾರಿ ಜೋರು, ನಗರದಾದ್ಯಂತ ಪೊಲೀಸರು ಹೈ ಅಲರ್ಟ್


ಬೆಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ

ಬೆಂಗಳೂರು, ಡಿಸೆಂಬರ್ 15: ಹೊಸ ವರ್ಷವನ್ನು (ಹೊಸ ವರ್ಷ 2026) ಸ್ವಾಗತಿಸಲು ಬೆಂಗಳೂರಿಗರು (ಬೆಂಗಳೂರು) ತವಕದಲ್ಲಿದ್ದಾರೆ. ಎಲ್ಲಾ ಕಡೆ ನ್ಯೂ ಇಯರ್ ವೈಬ್ ಶುರುವಾಗಿದೆ. ಪಬ್, ರೆಸ್ಟೋರೆಂಟ್ ಟೇಬಲ್‌ಗಳು ಹದಿನೈದು ದಿನಗಳ ಮುಂಚೆಯೇ ಬುಕಿಂಗ್ ಆಗುತ್ತಿವೆ. ಕೆಲವೆಡೆ ಡ್ರಗ್ ಪಾರ್ಟಿಗೂ ಪ್ಲಾನಿಂಗ್ ನಡೆಯುತ್ತಿದೆ. ಇತ್ತ ಕೂಡ ಈ ಎಲ್ಲಾ ವಿಷಯಗಳಲ್ಲಿ ಅಲರ್ಟ್ ಆಗಿದ್ದಾರೆ. ಹೊಸ ವರ್ಷ ಹತ್ತಿರ ಆಗ್ತಿದ್ದಂತೆಯೇ ಚೆಕಿಂಗ್ ಹೆಚ್ಚಿಸಿದ್ದಾರೆ. ವಿಶೇಷವಾಗಿ ವಾರಾಂತ್ಯದಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಹೆಚ್ಚು ತಪಾಸಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಎಲ್ಲೆಲ್ಲಿ ಪೊಲೀಸ್ ತಪಾಸಣೆ?

ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸೂಚನೆ ಬೆನ್ನಲ್ಲೇ ರಾತ್ರಿ ವಿಭಾಗಗಳ ಠಾಣೆಯ ಪೊಲೀಸರಿಗೆ ವಿಶೇಷ ಕಾರ್ಯಾಚರಣೆ ಇದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಜ್ ಸ್ಟ್ರೀಟ್, ಕೋರಮಂಗಲದ 80ಫೀಟ್ ರೋಡ್, ಇಂದಿರಾನಗರದ 100 ಫೀಟ್ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ಪರಿಶೀಲನೆ ನಡೆದಿದೆ.

ಬೆಂಗಳೂರು ಪೊಲೀಸರಿಂದ ಡ್ರೋನ್ ಕಣ್ಗಾವಲು

ಕೆಲವೆಡೆ ಡ್ರೋನ್‌ಗಳನ್ನು ಹಾರಿಸುವ ಮೂಲಕವೂ ಪರಿಶೀಲನೆ. ಎಲ್ಲಾ ಪಬ್, ರೆಸ್ಟೋರೆಂಟ್, ಪ್ರಮುಖ ಮಾಲ್ಗಳಲ್ಲಿ ಪರಿಶೀಲನೆ. ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ, ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಸರಿ ಇದ್ಯಾ, ಭದ್ರತಾ ವ್ಯವಸ್ಥೆ ಏನ್ ಮಾಡ್ಕೊಂಡಿದ್ದಾರೆ, ಏನಾದ್ರೂ ಅವಘಡ ಸಂಭವಿಸಿದರೆ ಕೂಡಲೇ ತಡೆಗಟ್ಟುವ ಕ್ರಮವಹಿಸಿಯಾ ಎಂಬುದೂ ಸೇರಿ ಎಲ್ಲದರ ಬಗ್ಗೆ ಪರಿಶೀಲನೆ ನಡೆಸಿದರು. ನ್ಯೂ ಇಯರ್‌ಗೆ ಯಾವ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು, ಎಲ್ಲಾ ರೂಲ್ಸ್ ಫಾಲೋ ಮಾಡಬೇಕೆಂದು ಪಬ್, ರೆಸ್ಟೋರೆಂಟ್‌ಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಪ್ರಯಾಣಿಕರನ್ನು ಗಮನಿಸಿ: ಕ್ರಿಸ್ಮಸ್, ಹೊಸ ವರ್ಷದ ಹಿನ್ನೆಲೆ ಈ ಮಾರ್ಗಗಳಲ್ಲಿ ವಿಶೇಷ ರೈಲು

ಚರ್ಚ್ ಸ್ಟ್ರೀಟ್ ಬಳಿ ಪಬ್ ಕ್ಲೋಸ್ ಮಾಡುವ ವೇಳೆ ಮೂರು ಜನ ಏಕಾಏಕಿ ನುಗ್ಗಿ ಅಲ್ಲಿರೋ ಕೆಲ ವಸ್ತುಗಳನ್ನು ಹೊಡೆದಾಕಿದ ಘಟನೆಯೂ ನಡೆದಿದೆ. ಈ ವೇಳೆ ಇಬ್ಬರು ಪರಾರಿ ಆಗಿದ್ದು, ಆಪ್‌ನ ಪಬ್ ಸಿಬ್ಬಂದಿ ಹಿಡಿದಿದ್ದಾರೆ. ನಂತರ ಮಾಹಿತಿ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆ ಕೇಂದ್ರ ತನಿಖಾ ಸಂಸ್ಥೆಗಳು ಎಲ್ಲಾ ರಾಜ್ಯಗಳ ಪ್ರಮುಖ ನಗರಗಳಲ್ಲಿ ಎಚ್ಚರಿಕೆ ನೀಡುವಂತೆ ಸೂಚಿಸಿವೆ. ಹೀಗಾಗಿ ಬೆಂಗಳೂರು ಹೆಚ್ಚಿನ ನಿಗಾ ಇರಿಸಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *