ರಿತ್ವಿಕ್ ಮಠದ್ ‘ಮಾರ್ನಮಿ’ ಸಿನಿಮಾ ನೋಡಲು ಮತ್ತೆ ಒಂದಾದ ‘Ninagaagi ’ ಸೀರಿಯಲ್ ತಂಡ

ರಿತ್ವಿಕ್ ಮಠದ್ ‘ಮಾರ್ನಮಿ’ ಸಿನಿಮಾ ನೋಡಲು ಮತ್ತೆ ಒಂದಾದ ‘Ninagaagi ’ ಸೀರಿಯಲ್ ತಂಡ

ರಿತ್ವಿಕ್ ಮಠದ್ ‘ಮಾರ್ನಮಿ’ ಸಿನಿಮಾ ನೋಡಲು ಮತ್ತೆ ಒಂದಾದ ‘Ninagaagi ’ ಸೀರಿಯಲ್ ತಂಡ

ಕಲರ್ಸ್ ಕನ್ನಡದ ಜನಪ್ರಿಯ ಟಿವಿ ಸೀರಿಯಲ್ ‘ನಿನಗಾಗಿ’ ತಂಡ ಮತ್ತೆ ಒಟ್ಟಿಗೆ ಸೇರಿದ್ದಾರೆ. ಸೀರಿಯಲ್ ನಾಯಕ ರಿತ್ವಿಕ್ ಮಠದ್ ನಟಿಸಿರುವ ‘ಮಾರ್ನಮಿ’ ಸಿನಿಮಾ ನೋಡಲು ನಾಯಕಿ ದಿವ್ಯಾ ಉರುಡುಗ, ಕಿಶನ್ ಬಿಳಗಲಿ ಸೇರಿ ಪೂರ್ತಿ ಸೀರಿಯಲ್ ತಂಡ ಹಾಜರಾಗಿತ್ತು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೀರಿಯಲ್ ‘ನಿನಗಾಗಿ’ ನೆನಪಿದೆಯಾ? ಸೂಪರ್ ಸ್ಟಾರ್ ರಚನಾ ಮತ್ತು ಫುಡ್ ಟ್ರಕ್ ನಡೆಸುವ ಜೀವಾ ಜೋಡಿಯ ಸುಂದರವಾದ ವಿಭಿನ್ನ ಕಥೆಯೊಂದಿಗೆ ಸೀರಿಯಲ್ ಪ್ರಸಾರವಾಗುತ್ತಿತ್ತು.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸೀರಿಯಲ್ ಅಂತ್ಯವಾಗಿದ್ದು, ಇದೀಗ ಐದು ತಿಂಗಳ ಬಳಿಕ ಸೀರಿಯಲ್ ಪೂರ್ತಿ ತಂಡ ಜೊತೆ ಸೇರಿದ್ದಾರೆ. ಇದಕ್ಕೆ ಕಾರಣ ಸೀರಿಯಲ್ ನಾಯಕ ರಿತ್ವಿಕ್ ಮಠದ್ ನಟಿಸಿರುವ ‘ಮಾರ್ನಮಿ’ ಸಿನಿಮಾ.

ರಿತ್ವಿಕ್ ಮಠದ್ ಮತ್ತು ಚೈತ್ರಾ ಆಚಾರ್ ಜೊತೆಯಾಗಿ ನಟಿಸಿರುವ ಕರಾವಳಿ ಭಾಗದ ಕಥೆಯನ್ನು ಹೊಂದಿರುವ ಸಿನಿಮಾ ಮಾರ್ನಮಿ ಫೆಬ್ರುವರಿ 20 ರಂದು ರಿಲೀಸ್ ಆಗಿತ್ತು. ಈ ಸಿನಿಮಾ ವೀಕ್ಷಣೆಗೆ ನಿನಗಾಗಿ ಸೀರಿಯಲ್ ತಂಡ ಜೊತೆ ಸೇರಿತ್ತು.

ಸಿನಿಮಾ ವೀಕ್ಷಣೆಗೆ ದಿವ್ಯಾ ಉರುಡುಗ, ಕಿಶನ್ ಬಿಳಗಲಿ, ವಜ್ರೇಶ್ವರಿ ಖ್ಯಾತಿಯ ಸೋನಿಯಾ ಪೊನಮ್ಮ, ರೋಹಿಣೀ ಕೃಷ್ಣ, ಪುನೀತ್, ಸುಮೋಕ್ಷ ಹಾಗೂ ಅರವಿಂದ್ ಕೆಪಿ ಅವರು ಕೂಡ ಜೊತೆಯಾಗಿ ಸಿನಿಮಾ ನೋಡಿದ್ದಾರೆ.

ಸೆಲೆಬ್ರಿಟಿ ಸಿನಿಮಾ ಶೋ ಸಂದರ್ಭದಲ್ಲಿ ಎಲ್ಲಾ ಸೀರಿಯಲ್ ತಾರೆಯರು ಜೊತೆಯಾಗಿದ್ದು, ಫೋಟೊಗಳೀಗೆ ಪೋಸ್ ಕೊಟ್ಟಿದ್ದಾರೆ, ಜೊತೆಗೆ ತಮ್ಮ ಹಳೆಯ ದಿನಗಳನ್ನು ನೆನೆದು, ಸಿನಿಮಾ ಎಂಜಾಯ್ ಮಾಡಿದ್ದಾರೆ. ಈ ತಂಡವನ್ನು ಮತ್ತೆ ಜೊತೆಯಾಗಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಿನಗಾಗಿ ಧಾರಾವಾಹಿಯಲ್ಲಿ ತಾಯಿಯ ಹಿಡಿತದಲ್ಲಿರುವ ಸೂಪರ್ ಸ್ಟಾರ್ ರಚನಾ, ನಂತರ ಮಗುವಿನ ಅಪ್ಪನೊಂದಿಗೆ ಹೇಗೆ ಪ್ರೀತಿಯಲ್ಲಿ ಬೀಳುತ್ತಾಳೆ, ಅವರಿಬ್ಬರ ಮದುವೆ ಹೇಗಾಗುತ್ತೆ, ನಂತರ ಕೃಷ್ಣನಿಗಾಗಿ ಇಬ್ಬರು ಏನೇನು ಮಾಡುತ್ತಾರೆ. ಜೀವಾ ಕೇವಲ ಟ್ರಕ್ ಡ್ರೈವರ್ ಅಲ್ಲ, ಆಗರ್ಭ ಶ್ರೀಮಂತ ಅನ್ನೋದು ಗೊತ್ತಾದ ಮೇಲೆ ಏನಾಗುತ್ತೆ ಅನ್ನೋದೇ ಈ ಸೀರಿಯಲ್ ಕಥೆಯಾಗಿತ್ತು.

ರಿತ್ವಿಕ್ ಮಠದ್ ಈ ಧಾರಾವಾಹಿಯಲ್ಲಿ ಜೀವಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಸಿಂಗಲ್ ಪೇರೆಂಟ್ ಆಗಿ ಹಾಗೂ ರಚನಾ ಜೊತೆ ಕೋಳಿ ಜಗಳ ಮಾಡುವ ರಿತ್ವಿಕ್ ನಟನೆಯನ್ನು ಜನ ಇಷ್ಟಪಟ್ಟಿದ್ದರು. ಇದೀಗ ರಿತ್ವಿಕ್ ತಮ್ಮ ಮೊದಲ ಸಿನಿಮಾ ‘ಮಾರ್ನಮಿ’ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಸಂಭ್ರಮದಲ್ಲಿದ್ದಾರೆ.

Source link

Leave a Reply

Your email address will not be published. Required fields are marked *