Headlines

ಟ್ರಿಲಿಯನ್ ಡಾಲರ್ ಆರ್ಥಿಕತೆ ನಿಭಾಯಿಸೋ ಸಚಿವೆ ಬಳಿ ಕಾರೇ ಇಲ್ಲ! ಮಧ್ಯಮ ವರ್ಗದವರ ಸಿಟ್ಟಲ್ಲಿರುವ ನಿರ್ಮಲಾ ಸೀತಾರಾಮನ್ ಆಸ್ತಿ ಎಷ್ಟು?

ಟ್ರಿಲಿಯನ್ ಡಾಲರ್ ಆರ್ಥಿಕತೆ ನಿಭಾಯಿಸೋ ಸಚಿವೆ ಬಳಿ ಕಾರೇ ಇಲ್ಲ! ಮಧ್ಯಮ ವರ್ಗದವರ ಸಿಟ್ಟಲ್ಲಿರುವ ನಿರ್ಮಲಾ ಸೀತಾರಾಮನ್ ಆಸ್ತಿ ಎಷ್ಟು?

ಟ್ರಿಲಿಯನ್ ಡಾಲರ್ ಆರ್ಥಿಕತೆ ನಿಭಾಯಿಸೋ ಸಚಿವೆ ಬಳಿ ಕಾರೇ ಇಲ್ಲ! ಮಧ್ಯಮ ವರ್ಗದವರ ಸಿಟ್ಟಲ್ಲಿರುವ ನಿರ್ಮಲಾ ಸೀತಾರಾಮನ್ ಆಸ್ತಿ ಎಷ್ಟು?

ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮಧ್ಯಮ ವರ್ಗಕ್ಕೆ ನಿರಾಸೆ ಮೂಡಿಸಿದ ನಂತರ, ಅವರ ಆಸ್ತಿ ಮತ್ತು ಸಂಬಳದ ಬಗ್ಗೆ ಚರ್ಚೆ ಶುರುವಾಗಿದೆ. ಅವರ ಒಟ್ಟು ಆಸ್ತಿ 2.75 ಕೋಟಿ ರೂ. ಆಗಿದ್ದು, 1.11 ಕೋಟಿ ರೂ. ಸಾಲವಿದೆ. ಅವರ ಬಳಿ ಕಾರು ಇಲ್ಲ, ಬದಲಾಗಿ ಒಂದು ಬಜಾಜ್ ಚೇತಕ್ ಸ್ಕೂಟರ್ ಮಾತ್ರ ಇದೆ.

ಆದಾಯ ತೆರಿಗೆಯಲ್ಲಿ ಒಂಚೂರೂ ಬದಲಾವಣೆ ಮಾಡದೇ ಮಧ್ಯಮ ವರ್ಗದವರ ಸಿಟ್ಟಿಗೆ ಗುರಿಯಾಗಿರುವ ನಿರ್ಮಲಾ ಸೀತಾರಾಮನ್‌ ಅವರ ಬಳಿ ಇರುವ ಆಸ್ತಿ ಎಷ್ಟು, ಕೇಂದ್ರದಿಂದ ಅವರಿಗೆ ಬರೋ ಸಂಬಳ ಎಷ್ಟು ಅನ್ನೋದರ ಬಗ್ಗೆ ಚರ್ಚೆ ಶುರುವಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸತತ 9 ನೇ ಬಾರಿಗೆ ಬಜೆಟ್‌ ಮಂಡಿಸಿದ್ದಾರೆ. ಭಾರತದ ಆರ್ಥಿಕತೆಗೆ ಇಂಬು ನೀಡುವ ಬಜೆಟ್‌ ಆಗಿದ್ದರೂ, ಮಧ್ಯಮವರ್ಗದವರಿಗೆ ಯಾವುದೇ ಸಿಹಿಯನ್ನೂ ಬಜೆಟ್‌ ನೀಡಿಲ್ಲ.

ಇದರ ನಡುವೆ ನಿರ್ಮಲಾ ಸೀತಾರಾಮನ್‌ ಅವರ ಅಸ್ತಿ ಎಷ್ಟು, ಅವರು ಪಡೆಯುವ ಸಂಬಳವೆಷ್ಟು, ತಮ್ಮ ಆಸ್ತಿಗೆ ಅವರು ಕಟ್ಟೋ ತೆರಿಗೆ ಎಷ್ಟು?? ಅನ್ನೋದರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.

MyNeta.info ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಟ್ಟು 2.75 ಕೋಟಿ ರೂ. ಮೌಲ್ಯದ ಆಸ್ತಿ ಮತ್ತು 1.11 ಕೋಟಿ ರೂ. ಸಾಲಗಳನ್ನು ಹೊಂದಿದ್ದಾರೆ.

ಅವರು 315 ಗ್ರಾಂ ಚಿನ್ನ ಮತ್ತು ಎರಡು ಕಿಲೋಗ್ರಾಂ ಬೆಳ್ಳಿಯನ್ನು ಸಹ ಹೊಂದಿರುವುದಾಗಿ ತಿಳಿಸಿದ್ದಾರೆ. ಅಂದಿನ ಮೌಲ್ಯದ ಪ್ರಕಾರ ಇದು 7.87 ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದರೆ. 2 ಕೆಜಿಯ ಬೆಳ್ಳಿ ಬೆಲೆ 80 ಸಾವಿರ ಮೌಲ್ಯದ್ದಾಗಿತ್ತು.

ನಿರ್ಮಲಾ ಸೀತಾರಾಮನ್ ಅವರ ಬಳಿ ಯಾವುದೇ ಕಾರು ಇಲ್ಲ ಆದರೆ ಅವರ ಹೆಸರಿನಲ್ಲಿ ಒಂದು ಬಜಾಜ್ ಚೇತಕ್ ಸ್ಕೂಟರ್ ಇದೆ. ಅದನ್ನು ಬರೀ 28,200 ರೂಪಾಯಿಗೆ ಖರೀದಿ ಮಾಡಲಾಗಿತ್ತು.

ಅವರು ಹೈದರಾಬಾದ್ ಬಳಿ ಸುಮಾರು 16 ಲಕ್ಷ ರೂ. ಮೌಲ್ಯದ ಕೃಷಿಯೇತರ ಆಸ್ತಿಯನ್ನು ಹೊಂದಿದ್ದಾರೆ. ಅವರ ಸ್ಥಿರ ಆಸ್ತಿಗಳ ಮೌಲ್ಯ 1,87,60,200 ರೂಪಾಯಿ.

ಇದಲ್ಲದೆ, ಅವರು ಕ್ರಮವಾಗಿ ಒಟ್ಟು 3,50,000 ರೂ. ಮತ್ತು 30,44,838 ರೂ. ವೈಯಕ್ತಿಕ ಸಾಲಗಳನ್ನು ಹೊಂದಿದ್ದಾರೆ ಎಂದು ವರದಿ ಮಾಡಿದ್ದಾರೆ. ರಾಜ್ಯಸಭೆಗೆ ಅವರು ಸಲ್ಲಿಸಿದ ಚುನಾವಣಾ ಘೋಷಣೆಯಲ್ಲಿ, ಸೀತಾರಾಮನ್ ಅವರು ಒಟ್ಟು 17,200 ರೂ. ನಗದು ಮತ್ತು 45,04,479 ರೂ. ಬ್ಯಾಂಕ್ ಸ್ಥಿರ ಠೇವಣಿ ಹೊಂದಿದ್ದಾರೆ.

ಸಂಸತ್ ಸದಸ್ಯೆಯಾಗಿ ತಮ್ಮ ವಾರ್ಷಿಕ ವೇತನದ ಬಗ್ಗೆ ಹೇಳುವುದಾದರೆ, ನಿರ್ಮಲಾ ಸೀತಾರಾಮನ್ ಅವರು ಮಾಸಿಕ 1 ಲಕ್ಷ ರೂ. ಸಂಬಳ ಪಡೆಯುತ್ತಾರೆ. ಇದರ ಹೊರತಾಗಿ, ಅವರು ತಮ್ಮ ಅಧಿಕೃತ ಕರ್ತವ್ಯಗಳಿಗಾಗಿ ಪ್ರಯಾಣ ಮತ್ತು ಇತರ ಭತ್ಯೆಗಳನ್ನು ಪಡೆಯುತ್ತಾರೆ. ಪ್ರತಿದಿನ ಸರ್ಕಾರಿ ಕರ್ತವ್ಯಕ್ಕಾಗಿ ಅವರು 2 ಸಾವಿರ ರೂಪಾಯಿ ಭತ್ಯೆ ಪಡೆಯುತ್ತಾರೆ. ಸಂಸತ್ತಿನ ಅಧಿವೇಶನಗಳು ಅಥವಾ ಇತರ ಅಧಿಕೃತ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಯಾಣಗಳಿಗೆ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ. ಉಚಿತ ಸಾರಿಗೆ, ವಸತಿ ಇತ್ಯಾದಿ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಹಲವಾರು ಭತ್ಯೆಗಳನ್ನು ಸೇರಿಸುವ ಮೂಲಕ ಸಚಿವರ ಸಂಬಳ ಹೆಚ್ಚಾಗುತ್ತದೆ.

ಭಾರತೀಯ ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕಿಯಾಗಿರುವ ಸೀತಾರಾಮನ್ ಅವರು 2019 ರಿಂದ ಹಣಕಾಸು ಸಚಿವೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *