
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಸತತ 9 ಬಜೆಟ್‌ಗಳನ್ನು ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸತತ ಒಂಬತ್ತು ಬಾರಿ ಬಜೆಟ್ ಮಂಡನೆ ಮಾಡಿದ ಮೊತ್ತಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರಿಗಿದೆ.

ಪ್ರತೀ ವರ್ಷ ಬಜೆಟ್ ಮಂಡನೆಯ ವೇಳೆ ಇವರು ಉಡುವ ಸೀರೆ ಸಾಕಷ್ಟು ಗಮನಸೆಳೆಯುತ್ತದೆ. ಪ್ರತೀ ಸೀರೆಯೂ ಕೂಡ ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಈ ಬಜೆಟ್ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ಇಲ್ಲಿಯವರೆಗೆ ಉಟ್ಟ ಸೀರೆಗಳ ವಿಶೇಷತೆಯನ್ನು ಇಲ್ಲಿ ತಿಳಿದುಕೊಳ್ಳಿ.

2026-27ರ ಬಜೆಟ್: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಂದು ಬಣ್ಣದ ಅಂಚು ಹೊಂದಿರುವ ಕೆನ್ನೇರಳೆ ಬಣ್ಣ ಸೀರೆ ಉಟ್ಟು ಸಂಸತ್ ಭವನಕ್ಕೆ ತೆರಳಿದ್ದಾರೆ. ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

2019-20ರ ಬಜೆಟ್: ಮೋದಿ 3.0 ಸರ್ಕಾರದಲ್ಲಿ ಹಣಕಾಸು ಮಂತ್ರಿ ಹೊಣೆ ಪಡೆದ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಬಜೆಟ್ ಮಂಡನೆಯಾಗಿದೆ. ತನ್ನ ಮೊದಲ ಬಜೆಟ್‌ಗೆ ಸ್ಥಿರತೆ ಮತ್ತು ಗಂಭೀರತೆಯ ಸಂಕೇತವಾಗಿರುವ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದರು. ಇದು ಆಂಧ್ರಪ್ರದೇಶದ ಮಂಗಳಗಿರಿ ಕಾಟನ್ ಮತ್ತು ರೇಷ್ಮೆ ಮಿಶ್ರಿತ ಗೋಲ್ಡನ್ ಕಲರ್ ಬಾರ್ಡರ್ ಅನ್ನು ಹೊಂದಿದೆ.

2020-21 ರ ತಮ್ಮ ಎರಡನೇ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಳದಿ ಮತ್ತು ನೀಲಿ ಬಣ್ಣದ ಅಂಚಿನಲ್ಲಿ ರೇಷ್ಮೆ ಸೀರೆಯನ್ನುಂಟುಮಾಡಿದ್ದಾರೆ. ಈ ಸಮಯದಲ್ಲಿ ಆರೋಗ್ಯಾಧಿಕಾರಿ, ಭಾರತ್ ಮಿಷನ್, ಮನೆಗಳಿಗೆ ಕೊಳವೆ ನೀರು ಇತ್ಯಾದಿ ಯೋಜನೆಗಳಿಗೆ ಹೇರಳ ಅನುದಾನ ಬಿಡುಗಡೆ ಮಾಡಿದರು.

2021-22ರ ಬಜೆಟ್: ಕೋವಿಡ್‌ನಿಂದ ಜರ್ಝರಿತಗೊಳ್ಳುತ್ತಿದ್ದ ಸಂದರ್ಭದಲ್ಲಿ ಮಂಡನೆಯಾದ ಮೂರನೇ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೈದರಾಬಾದ್ ಪೋಚಂಪಳ್ಳಿ ಗ್ರಾಮದ ಪೋಚಂಪಳ್ಳಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದರು. ಕೆಂಪು ಮತ್ತು ಬಿಳಿ ಬಣ್ಣದ ಈ ಸೀರೆ ಇಕ್ಕತ್ ಶೈಲಿಯನ್ನು ಹೊಂದಿತ್ತು.

2022-23ರ ಬಜೆಟ್: ಕೋವಿಡ್‌ನಿಂದ ಅಧಃಪತನಕ್ಕೆ ಇಳಿದಿದ್ದಕ್ಕೆ ಆರ್ಥಿಕ ಪ್ರಗತಿ ತುಂಬ ಪ್ರಯತ್ನ ಈ ಬಜೆಟ್‌ನಲ್ಲೂ ಮುಂದುವರಿಯುತ್ತದೆ. ಈ ಬಜೆಟ್ ಮಂಡನೆ ವೇಳೆ ಓಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ಬೊಮ್ಮೆ ಸೀರೆಯನ್ನು ನಿರ್ಮಲಾ ಸೀತಾರಾಮನ್ ತೊಟ್ಟಿದ್ದರು.

2023-24ರ ಬಜೆಟ್: ಕರ್ನಾಟಕದಿಂದ ರಾಜ್ಯಸಭಾ ಸಂಸದೆಯಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ಖ್ಯಾತ ಇಳಕಲ್ ಸೀರೆ ತೊಟ್ಟು ಬಜೆಟ್ ಮಂಡಿಸಿದ್ದು ವಿಶೇಷ.

2024-25ರ ಮಧ್ಯಂತರ ಬಜೆಟ್: ಮೋದಿ 2.0 ಸರ್ಕಾರದ ಕೊನೆಯ ಬಜೆಟ್. ಚುನಾವಣೆ ಇರುವುದರಿಂದ 2024ರ ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಾಯಿತು. ನಿರ್ಮಲಾ ಸೀತಾರಾಮನ್ ಅವರ ಮೊದಲ ಮಧ್ಯಂತರ ಬಜೆಟ್ ಕೂಡ ಇದು. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕಾಂತ ಹೊಲಿಗೆಯಿಂದ ಅಲಂಕರಿಸಿದ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆಯಲ್ಲಿ ಮಿಂಚಿದ್ದ ನಿರ್ಮಲಾ ಸೀತಾರಾಮನ್.

9. 2024-25ರ ಬಜೆಟ್: ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್ ಮಜೆಂಟಾ ಬಾರ್ಡರ್ ಹೊಂದಿದ್ದ ಮಂಗಳಗಿರಿ ಕಾಟನ್ ಸೀರೆಯಲ್ಲಿ ಗಮನಸೆಳೆದಿದ್ದರು. ಈ ಸಮಯದಲ್ಲಿ ಅವರು ಮೊಬೈಲ್ ಫೋನ್, ಚಿನ್ನ, ಬೆಳ್ಳಿ ಮೇಲೆ ಆಮದು ಸುಂಕ ಕಡಿಮೆ ಮಾಡಿದರು.

2025-26ರ ಬಜೆಟ್: ನಿರ್ಮಲಾ ಸೀತಾರಾಮನ್ ಅವರಿಗೆ ಇದು 8ನೇ ಬಜೆಟ್. ಈ ಸಮಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಬಿಹಾರದ ಖ್ಯಾತ ಮಿಥಿಲಾ ಕಲಾವಿದೆ ದುಲಾರಿ ದೇವಿ ಅವರಿಂದ ಕೊಡುಗೆಯಾಗಿ ಸಿಕ್ಕಿದ್ದ ಸೀರೆಯನ್ನುಟ್ಟಿದ್ದರು. ಮಿಥಿಲಾ ಆರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಕ್ರೆಡಿಟ್ ಔಟ್‌ರೀಚ್ ಕಾರ್ಯಕ್ರಮಕ್ಕಾಗಿ ಮಧುಬನಿಗೆ ಭೇಟಿ ನೀಡಿದಾಗ ಸಿಕ್ಕಿದ್ದ ಸೀರೆಯಿತು.
ರಂದು ಪ್ರಕಟಿಸಲಾಗಿದೆ – 10:07 am, ಭಾನುವಾರ, 1 ಫೆಬ್ರವರಿ 26