‘ರಾಮಾಯಣ’ ಸಿನಿಮಾದ ಹೈಲೈಟ್ ವಿಎಫ್​​ಎಕ್ಸ್ ಅಲ್ಲ, ನಿರ್ದೇಶಕ ಹೇಳಿದ್ದೇನು?

‘ರಾಮಾಯಣ’ ಸಿನಿಮಾದ ಹೈಲೈಟ್ ವಿಎಫ್​​ಎಕ್ಸ್ ಅಲ್ಲ, ನಿರ್ದೇಶಕ ಹೇಳಿದ್ದೇನು?


'ರಾಮಾಯಣ' ಸಿನಿಮಾದ ಹೈಲೈಟ್ ವಿಎಫ್‌ಎಕ್ಸ್ ಅಲ್ಲ, ನಿರ್ದೇಶಕ ಹೇಳಿದ್ದೇನು?

ರಣಬೀರ್ ಕಪೂರ್ (ರಣಬೀರ್ ಕಪೂರ್), ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಭಾರಿ ಅದ್ಧೂರಿ ವಿಎಫ್‌ಎಕ್ಸ್, ಅದ್ಧೂರಿ ಸೆಟ್‌ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಪೌರಾಣಿಕ ಕಥೆಗೆ ಭವ್ಯತೆಯನ್ನು ಸೇರಿಸಲು ‘ರಾಮಾಯಣ’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಹಲವು ಆಸ್ಕರ್‌ಗಳನ್ನು ಗೆದ್ದಿರುವ ಡಿಎನ್‌ಇಜಿ ಸಂಸ್ಥೆ ಈ ಸಿನಿಮಾಕ್ಕೆ ವಿಎಫ್‌ಎಕ್ಸ್‌ ಮಾಡಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರು ಸಂಗೀತ ನೀಡಲಿದ್ದಾರೆ. ರಣಬೀರ್, ಯಶ್ ಇನ್ನೂ ಹಲವು ಸ್ಟಾರ್‌ಗಳು ಸಿನಿಮಾದಲ್ಲಿ ನಟಿಸಲಿದ್ದಾರೆ. ಇಷ್ಟೆಲ್ಲ ಇದ್ದರೂ, ಸಿನಿಮಾದ ಮುಖ್ಯ ಹೈಲೆಟ್ ಬೇರೆ ಏನೋ ಇದೆಯಂತೆ. ಖುದ್ದು ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ಈ ಬಗ್ಗೆ ಮಾತನಾಡಿದ್ದಾರೆ.

ನಿತೇಶ್ ತಿವಾರಿ ಅವರು ಹೇಳುವಂತೆ ಅವರ ಪ್ರಕಾರ ಈ ವರ್ಷ ಬಿಡುಗಡೆ ಆಗುತ್ತಿರುವ ‘ರಾಮಾಯಣ’ ಸಿನಿಮಾದ ಮೊದಲ ನಿರ್ದೇಶಕ ಭಾಗದಲ್ಲಿ ಹೈಲೆಟ್ ದೃಶ್ಯವೆಂದರೆ ಅದು ರಾಮ ಅಯೋಧ್ಯೆ ಬಿಟ್ಟು ಹೋಗುವ ದೃಶ್ಯವಂತೆ. ನಿತೇಶ್ ತಿವಾರಿ ಅವರು ಹೇಳುವಂತೆ ‘ಸಿನಿಮಾ ಬಿಡುಗಡೆಯಾದಾಗ ಜನ ಆ ದೃಶ್ಯಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನೋಡಲು ಕಾತರನಾಗಿ ಕಾಯುತ್ತಿದ್ದಾರೆ. ಆ ಇಡೀ ಸನ್ನಿವೇಶ ನಮ್ಮ ಸಿನಿಮಾದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ನಾನಂತೂ ಪ್ರತಿ ಬಾರಿ ಆ ದೃಶ್ಯವನ್ನು ನೋಡಿದಾಗಲೂ ಕಣ್ಣೀರಾಗುತ್ತೇನೆ. ಆ ದೃಶ್ಯ ನಮ್ಮ ಸಿನಿಮಾದ ಬಹಳ ಮುಖ್ಯವಾದ ದೃಶ್ಯ’ ನಿತೇಶ್ ತಿವಾರಿ.

ಇದನ್ನೂ ಓದಿ:ರಾವಣನ ಪಾತ್ರ ಮಾಡಿದ ಯಶ್ನ ಹಾಡಿ ಹೊಗಳಿದ ರಣಬೀರ್ ಕಪೂರ್

ಇದೀಗ ಬಿಡುಗಡೆ ಆಗಿರುವ ‘ರಾಮಾಯಣ’ ಟೀಸರ್‌ನಲ್ಲಿ ಆ ಸನ್ನಿವೇಶದ ಎರಡು ಸಣ್ಣ ದೃಶ್ಯಗಳನ್ನು ಸೇರಿಸಲಾಗಿದೆ. ಆದರೆ ಸಿನಿಮಾದ ವೈಭವದ ದೃಶ್ಯಗಳು, ಕೆಲ ಆಕ್ಷನ್ ದೃಶ್ಯಗಳು, ಪುಷ್ಪಕ ವಿಮಾನ ಮತ್ತು ರಣಬೀರ್ ಕಪೂರ್ ಅವರ ರಾಮನ ಪಾತ್ರದ ಮೇಲೆ ಟೀಸರ್ ಹೆಚ್ಚು ಪೋಕಸ್ ಆಗುತ್ತಿದೆ. ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಸಹಜವಾಗಿಯೇ ಕೆಲವರು ಮೆಚ್ಚಿಕೊಂಡರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರು ಸಂಗೀತ ನೀಡಿದ್ದಾರೆ. ರಾಮಾಯಣ ಸಿನಿಮಾದ ಎರಡೂ ಭಾಗಗಳಿಗೆ 4000 ಕೋಟಿ ರೂಪಾಯಿ ಖರ್ಚು ಮಾಡಿದೆ. ಸಿನಿಮಾದ ಮೊದಲ ಭಾಗ ಇದೇ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *