ದೆಹಲಿ, ಡಿ.17: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಂದೇ ಮಾತರಂ, ಎನ್‌ಎನ್‌ಆರ್‌ಇಜಿಎ, ಶಿಕ್ಷಣ ಮಸೂದೆ ಮತ್ತು ಎಸ್‌ಐಆರ್‌ನಂತಹ ವಿಷಯಗಳ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ವಾದ-ವಿವಾದ ನಡೆಯುತ್ತಿದೆ. ಈ ಚರ್ಚೆಯ ನಡುವೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ತಮಾಷೆಯಾಗಿ ಸಂಸತ್ತಿನ ಹೊರಗೆ ಮಾತನಾಡಿದ್ದಾರೆ. ಒಳನುಸುಳುಕೋರನನ್ನು ಹೊರಹಾಕುತ್ತಿದ್ದಾರೆ. ಅವರು ಒಬ್ಬರನ್ನಾದರೂ ಕಂಡು ಹಿಡಿದಿದ್ದಾರೆಯೇ? ಎಂದು ಕಲ್ಯಾಣ್ ಬ್ಯಾನರ್ಜಿ ಕೇಳುತ್ತಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಗಡ್ಕರಿ, ನಾನು ಒಂದು ದಿನ ನಿನ್ನನ್ನು ಹುಡುಕುತ್ತೇನೆ ಎಂದು ಹೇಳಿದರು. ಈ ವೇಳೆ ಮುಂದೆ ಸಾಗಿದ ನಿತಿನ್ ಗಡ್ಕರಿ ಅವರು ಎಳೆದು ಒಂದು ನಿಮಿಷ ಸರ್ ನನ್ನ ಮಾತು ಕೇಳಿ ಎಂದು ಕಲ್ಯಾಣ್ ಬ್ಯಾನರ್ಜಿ ನಿತಿನ್ ಗಡ್ಕರಿ ಅವರ ಕಿವಿಯಲ್ಲಿ ಏನು ಗುಟ್ಟಾಗಿ ಹೇಳುತ್ತಾರೆ. ಕೆಲವು ಸಮಯಗಳು ಇಬ್ಬರ ನಡುವೆ ತಮಾಷೆಯ ಮಾತಕತೆ ನಡೆಯುತ್ತಿತ್ತು. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ