ನಿವೀನ್ ಪೌಳಿ (ನಿವಿನ್ ಪಾಲಿ) ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಆದರೆ, ಅವರಿಗೆ ಇತ್ತೀಚೆಗೆ ಗೆಲುವು ಸಿಕ್ಕಿರಲಿಲ್ಲ. ಆದರೆ, ‘ಸರ್ವಮ್ ಮಾಯಾ’ ಚಿತ್ರದ ಮೂಲಕ ಅವರು ಗೆಲುವಿನ ನಗೆ ಬೀರಿದ್ದಾರೆ. ಹಾಗಾದರೆ ಈ ಸಿನಿಮಾದಲ್ಲಿ ಅಂಥದ್ದೇನಿದೆ? ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದು ಏಕೆ? ಆ ಎಲ್ಲಾ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿದೆ ಉತ್ತರ. ಈ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಮಲಯಾಳಂ ಜೊತೆ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ.
ಪ್ರಭೇಂದು (ನಿವೀನ್ ಪೌಳಿ) ದೊಡ್ಡ ಗಿಟಾರ್ ಆಗಬೇಕು ಎಂದು ಕನಸು ಕಾಣುತ್ತಾನೆ. ಅವರ ಟೀಂ ಯುರೋಪ್ ಗೆ ತೆರಳುತ್ತದೆ. ಆದರೆ, ಪ್ರಭೇಂದುಗೆ ಮಾತ್ರ ವೀಸಾ ಸಿಗೋದಿಲ್ಲ. ಹೀಗಾಗಿ ಅವರಿಗೆ ಸಿಗುತ್ತದೆ. ಇವರದ್ದು ಅರ್ಚಕರ ಕುಟುಂಬ. ಆ ವೃತ್ತಿಯನ್ನು ಮಾಡೋದಿಲ್ಲ ಎಂದು ದಿಕ್ಕರಿಸಿ ಹೋದವನು ಪ್ರಭೇಂದು. ನಂತರ ಮತ್ತೆ ಇದೇ ವೃತ್ತಿ ಮಾಡೋ ಪರಿಸ್ಥಿತಿ ಬರುತ್ತದೆ. ಆಗ ಶುರುವಾಗುತ್ತೆ ನೋಡಿ ಸಮಸ್ಯೆ.
ಮಾಯಾ ಮ್ಯಾಥೀವ್/ಡೆಲುಲು (ರಿಯಾ ಶಿಬು) ಆತ್ಮ ಪ್ರಭೇಂದು ಬೆನ್ನು ಬೀಳುತ್ತದೆ . ಮಾಯಾ ಈತನ ಹಿಂದೆ ಬೀಳಲು ಕಾರಣ ಏನು? ಕೊನೆ ಪ್ರಕರಣ ಯಾವ ಹಂತಕ್ಕೆ ತಲುಪುತ್ತದೆ ಎಂದು ಹಾಸ್ಯದ ರೂಪದಲ್ಲಿ ಹೇಳಲಾಗಿದೆ. ಅಜು ವರ್ಗಗಳು ಹಾಗೂ ನಿವೀನ್ ಪೌಳಿಯ ಕಾಂಬಿನೇಷನ್ ನಲ್ಲಿ ಮೂಡಿಬರೋ ಹಾಸ್ಯ ಸಖತ್ ಆಗಿದೆ.
ಇದನ್ನೂ ಓದಿ: ಕಿರುಕುಳ ಆರೋಪ ಸುಳ್ಳು ಎಂದು ಹೇಳಲು ಬೇರೆ ಹಂತಕ್ಕೆ ನಿವೀನ್ ಪೌಳಿ
ಇದು ಆತ್ಮ/ದೆವ್ವದ ಸಿನಿಮಾ ಆದರೂ ಇಲ್ಲಿ ಎಲ್ಲಿಯೂ ಭಯ ಬೀಳೋ ಒಂದೇ ಒಂದು ದೃಶ್ಯ ಇಲ್ಲ. ಹೀಗಾಗಿ, ಹಾಹರ್ ಸಿನಿಮಾ ಎಂದು ದೂರ ಹೋಗುವವರು ಯಾವುದೇ ಅಂಜಿಕೆ ಇಲ್ಲದೆ ಈ ಚಿತ್ರವನ್ನು ವೀಕ್ಷಿಸಬಹುದು. ಈ ಸಿನಿಮಾದಲ್ಲಿ ಹಾಸ್ಯ ಇದೆ, ಒಂದು ಮಧುರ ಪ್ರೇಮಕಥೆ ಇದೆ. ಆತ್ಮದ ಕಥೆ ಇಟ್ಟುಕೊಂಡು ಹೀಗೂ ಸಿನಿಮಾ ಮಾಡಬಹುದು ನಿರ್ದೇಶಕ ಅಖಿಲ್ ಸತ್ಯನ್ ತೋರಿಸಿಕೊಟ್ಟಿದ್ದಾರೆ.
ಕ್ಲೈಮ್ಯಾಕ್ಸ್ ಅರ್ಥವೇನು? (ಸಿನಿಮಾ ನೋಡಿದವರಿಗೆ ಮಾತ್ರ)
ಕ್ಲೈಮ್ಯಾಕ್ಸ್ ಅಲ್ಲಿ ಪ್ರಭೇಂದು ಮಾಯಾ ಮನೆಗೆ ಬರುತ್ತಾನೆ ಚಿತ್ರದ. ಮಾಯಾ ತಾಯಿ, ನೀನೇನಾ ನನ್ನ ಮಗಳನ್ನು ಪ್ರೀತಿಸಿದ್ದು ಎಂದು ಕೇಳುತ್ತಾಳೆ. ಆಗ ಪ್ರಭೇಂದು ಹೌದು ಎನ್ನುವ ಉತ್ತರ ಕೊಡುತ್ತಾನೆ. ಆದರೆ, ಡೆಲು ಅಥವಾ ಮಾಯಾ ಬದುಕಿದ್ದಾಗ ಪ್ರೀತಿಸಿದ ಹುಡುಗ ಪ್ರಭೇಂದು ಅಲ್ಲ. ಒಂದೊಮ್ಮೆ ಪ್ರಭೇಂದುವೇ ಆಕೆ ಪ್ರೀತಿಸಿದ ಹುಡುಗನಾಗಿದ್ದರೆ ಮೊದಲ ಭೇಟಿಯಲ್ಲೇ ಗೊತ್ತಾಗಿಬಿಡುತ್ತಿತ್ತು. ಆಕೆ ಪ್ರೀತಿಸಿದ ಹುಡುಗನ ಮಿಸ್ಟರಿಯಾಗಿಯೇ ಇಡಲಾಗಿದೆ. ಪ್ರಭೇಂದು ಹೇಳುವ ‘ಯೆಸ್’ ಎಂಬುದರಿಂದ ಮಾಯಾಗೆ ಮುಕ್ತಿ ಸಿಗುತ್ತದೆ. ಏಕೆಂದರೆ ತಾನು ಪ್ರೀತಿಸಿದ ಹುಡುಗನ ಮನೆಯವರಿಗೆ ಪರಿಚಯಿಸಬೇಕು ಎಂಬುದು ಆಕೆಯ ಕೊನೆಯ ಆಸೆ ಕೂಡ. ಸತ್ತ ಬಳಿಕ ನಿಜವಾಗಿಯೂ ಪ್ರಭೇಂದು ಮೇಲೆ ಮಾಯಾಗೆ ಪ್ರೀತಿ ಆಗುತ್ತಿದೆ, ಅವಳು ಹೌದು ಹೇಳಿದ್ದರಲ್ಲಿ ಅರ್ಥವಿದೆ ಎಂದು ಕೂಡ ಹೇಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.