Headlines

ಬೆಂಗಳೂರಿನ ಅನೇಕ ಪೊಲೀಸ್ ಠಾಣೆಗಳಲ್ಲಿ ಇನ್ಸ್​ಪೆಕ್ಟರ್​ಗಳೇ ಇಲ್ಲ! ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲು

ಬೆಂಗಳೂರಿನ ಅನೇಕ ಪೊಲೀಸ್ ಠಾಣೆಗಳಲ್ಲಿ ಇನ್ಸ್​ಪೆಕ್ಟರ್​ಗಳೇ ಇಲ್ಲ! ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲು


ಬೆಂಗಳೂರು, ಜನವರಿ 22: ರಾಜಧಾನಿ ಬೆಂಗಳೂರು (ಬೆಂಗಳೂರು) ಹಲವಾರು ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆÇೀರ್‌ಗಳ ಕೊರತೆ ತೀವ್ರವಾಗಿ ಕಂಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರದಲ್ಲೇ 15ಕ್ಕೂ ಹೆಚ್ಚು ಠಾಣೆಗಳಲ್ಲಿ ಇನ್ಸ್ ಪೆಕ್ಟರ್ ಹುದ್ದೆಗಳು ಹಲವು ದಿನಗಳು ಹಾಗೂ ತಿಂಗಳಿನಿಂದ ಖಾಲಿಯಾಗಿದೆ. ಅಮಾನತು, ಕಡ್ಡಾಯ ರಜೆ, ನಿವೃತ್ತಿ ಹಾಗೂ ಭಡ್ತಿ ಪ್ರಕ್ರಿಯೆಗಳ ಪರಿಣಾಮವಾಗಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಾಗಲು ಪೊಲೀಸ್ ಮೂಲಗಳು ತಿಳಿಸಿವೆ.

ಯಾವೆಲ್ಲ ಠಾಣೆಗಳಲ್ಲಿ ಇನ್ಸ್ ಪೆಕ್ಟರ್ ಹುದ್ದೆ ಖಾಲಿ?

ಶಿವಾಜಿನಗರ, ಸಂಪಿಗೆಹಳ್ಳಿ, ಯಶವಂತಪುರ, ಮಲ್ಲೇಶ್ವರ, ಜ್ಞಾನಭಾರತಿ, ಬಾಗಲೂರು, ವಿವೇಕನಗರ, ಬಂಡೆಪಾಳ್ಯ, ಸದಾಶಿವನಗರ (OOD), ಡಿಜೆ ಹಳ್ಳಿ (OOD), ಕೊತ್ತನೂರು (OOD), ಜಾಲಹಳ್ಳಿ (OOD) ಸೇರಿದಂತೆ ಹಲವು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿ ಉಳಿದಿವೆ.

ಇದಷ್ಟೇ ಅಲ್ಲದೆ, ಮಾಗಡಿ ರೋಡ್ ಟ್ರಾಫಿಕ್, ಮಡಿವಾಳ ಟ್ರಾಫಿಕ್ ಠಾಣೆಗಳು ಹಾಗೂ ಶೇಷಾದ್ರಿಪುರಂ ಎಸ್ಸಿಪಿ, ಮಲ್ಲೇಶ್ವರ ಎಸ್ಸಿಪಿ, ಕೆಜಿ ಕೆಜಿ ಇಸಿಪಿ ವ್ಯಾಪ್ತಿಗೆ ಇನ್ಸ್ ಪೆಕ್ಟರ್ ಮತ್ತು ಇಸಿಪಿ ಹುದ್ದೆಗಳು ಖಾಲಿಯಾಗಿವೆ. ಸರ್ಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು, ಬೇರೆ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಹೆಚ್ಚುವರಿ ಹೊಣೆ ನೀಡುವುದು ಅಥವಾ OOD ಮೂಲಕ ವ್ಯವಸ್ಥೆ ಮಾಡುತ್ತಿರುವುದರಿಂದ ಸಮಸ್ಯೆ ಗಂಭೀರವಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವುದೇ ಕಷ್ಟ

ಒಬ್ಬೊಬ್ಬ ಇನ್ಸ್‌ಪೆಕ್ಟರ್‌ಗಳು ಎರಡು ಠಾಣೆಗಳ ಉಸ್ತುವಾರಿ ವಹಿಸಿಕೊಂಡು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುವುದು ಕಷ್ಟಕರವಾಗಿದೆ. ಹೆಚ್ಚುವರಿ ಹೊಣೆಗಾರಿಕೆಯ ಒತ್ತಡದಿಂದ ಅನೇಕ ಇನ್ಸ್‌ಪೆಕ್ಟರ್‌ಗಳು ಹೈರಾಣಾಗಿದ್ದಾರೆ.

ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆಯು ಸ್ಥಗಿತ

ಇನ್ಸ್ ಪೆಕ್ಟರ್ ಮತ್ತು ಎಸ್ಸಿಪಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಇಲಾಖೆಯೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ವರ್ಷಕ್ಕೊಮ್ಮೆ ನಡೆಯುತ್ತಿದ್ದ ವರ್ಗಾವಣೆ ನಿಯಮವನ್ನು ಎರಡು ವರ್ಷಗಳಿಗೆ ಬದಲಾಯಿಸಲಾಯಿತು. ಆದರೆ ಇದೀಗ 2.4 ವರ್ಷ ಕಳೆದರೂ ಬೆಂಗಳೂರನ್ನು ಸೇರಿಸಿ ಹಲವು ಜಿಲ್ಲೆಗಳ ಇನ್ಸ್‌ಪೆಕ್ಟರ್ ಮತ್ತು ಎಸ್ಸಿಪಿಗಳ ಸಾಮಾನ್ಯ ವರ್ಗಾವಣೆ ಇನ್ನೂ ಜಾರಿಯಲ್ಲಿಲ್ಲ.

ಇದನ್ನೂ ಓದಿ: 1997 ರ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸ್: 29 ವರ್ಷಗಳ ಬಳಿಕ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್ ಸದಸ್ಯ

ಪೊಲೀಸರ ಸಾಮಾನ್ಯ ವರ್ಗಾವಣೆ ಪಟ್ಟಿ ರಿಲೀಸ್‌ಗೆ ಪದೇ ಪದೇ ಅಡ್ಡಿ ಉಂಟಾಗುತ್ತಿದೆ, ಕೆಲ ರಾಜಕೀಯ ನಾಯಕರ ಮುಸುಕಿನ ಗುದ್ದಾಟ ಹಾಗೂ ತಮ್ಮ ‘ನೆಚ್ಚಿನ’ ಅಧಿಕಾರಿಗಳ ವರ್ಗಾವಣೆಯನ್ನು ತಡೆಯುವ ಪ್ರಯತ್ನಗಳಿಂದ ಪ್ರಕ್ರಿಯೆ ಸ್ಥಗಿತಗೊಂಡಿದೆ. ನಿಗದಿತ ಅವಧಿ ಕಳೆದರೂ ವರ್ಗಾವಣೆ ಆಗದೆ, ಪೊಲೀಸರಿಗೆ ಅಸಮಾಧಾನ ಹೊಗೆ ಕಾಡುತ್ತಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *