ನಮ್ಮ ದೇಶದ ಕಾನೂನುಗಳ ಬಗ್ಗೆ ಎಲ್ಲರಿಗೂ ವಿಸ್ತೃತವಾಗಿ ಗೊತ್ತಿರಲ್ಲ, ಆದರೆ ಅದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಈ ಟ್ರಾಫಿಕ್ ರೂಲ್ಸ್ ಬಗ್ಗೆ ಎಲ್ಲರೂ ತಿಳಿದುಕೊಳ್ಳಲೇಬೇಕು. ಕೆಲವು ಪೊಲೀಸರಿಗೂ ಈ ಟ್ರಾಫಿಕ್ ರೂಲ್ಸ್ (ನೋ-ಪಾರ್ಕಿಂಗ್) ಹಾಗೂ ವಾಹನ ಸಂಚಾರದ ಕಾನೂನಿನ ಬಗ್ಗೆ ತಿಳಿದಿಲ್ಲ. ಸಾರ್ವಜನಿಕರು ಈ ಬಗ್ಗೆ ತಿಳಿದುಕೊಂಡು ಸಂಚಾರ ನಿಯಮಗಳು ಹಾಗೂ ಅದಕ್ಕಿರುವ ಕಾನೂನು ಕ್ರಮಗಳೇನು ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಈ ನೋ-ಪಾರ್ಕಿಂಗ್ ಬಗ್ಗೆಯೂ ಒಂದು ಕಾನೂನಿನ ನಿಯಮವಿದೆ. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಕಾನೂನಿನಲ್ಲಿ ಯಾವೆಲ್ಲ ನೀತಿ ನಿಯಮಗಳು ಇವೆ ಎಂಬುದನ್ನು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳನ್ನು ಪ್ರತಿಯೊಬ್ಬ ವಾಹನ ಸವಾರರು ಗಮನಿಸಲೇಬೇಕು. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಪೊಲೀಸರು ತೆಗೆದುಕೊಳ್ಳಬಾರದು.
ಒಂದು ವೇಳೆ ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಅಧಿಕೃತ ದಂಡದ ರಸೀದಿ (ಚಲನ್) ನೀಡಬಹುದು. ಸ್ಥಳದಲ್ಲೇ ದಂಡವನ್ನು ಪಡೆಯಬಹುದು ಅಥವಾ ಆನ್ಲೈನ್ ಮೂಲಕ ಪಾವತಿಸಲು ಅವಕಾಶವಿದೆ. ವಾಹನದ ಚಕ್ರಕ್ಕೆ ಲಾಕ್ (ವೀಲ್ ಕ್ಲಾಂಪ್) ಹಾಕಬಹುದು. ಆಗಲೂ ನೀವು ದಂಡಿ ಲಾಕ್ ತೆಗೆಯಬಹುದು. ಪೊಲೀಸ್ ಕ್ರೇನ್ ಬಳಸಿ ವಾಹನವನ್ನು ಟೋ ಮಾಡಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ಯಬಹುದು. ಆಗಾ ನೀವು ಪಾರ್ಕಿಂಗ್ ದಂಡದ ಜೊತೆಗೆ ‘ಟೋಯಿಂಗ್ ಶುಲ್ಕ’ವನ್ನೂ (ಟೋವಿಂಗ್ ಶುಲ್ಕಗಳು) ತೆಗೆದುಕೊಂಡರು. ವಾಹನದ ವಿಂಡ್ಶೀಲ್ಡ್ ಮೇಲೆ ನೋಟಿಸ್ ಅಂಟಿಸಬಹುದು. ಇದನ್ನು ಬಿಟ್ಟು ನಿಮ್ಮ ವಾಹನದ ಟೈರ್ನಿಂದ ಗಾಳಿಯನ್ನು ತೆಗೆಯುವ ಅಧಿಕಾರವಿಲ್ಲ. ಇದು ಕಾನೂನುಬಾಹಿಯಾಗಿದೆ. ಟೈರ್ ಗಾಳಿ ತೆಗೆಯುವುದು ಈ ಖಾಸಗಿ ಆಸ್ತಿಗೆ ಹಾನಿ ಉಂಟುಮಾಡುವ ಕ್ರಿಯೆ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 425 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
ವಾಹನದ ಟೈರ್ನಿಂದ ಗಾಳಿಯನ್ನು ತೆಗೆಯುವುದು ನಿಮ್ಮ ವಾಹನಕ್ಕೆ ಮಾಡುವ ಹಾನಿ, ಒಂದು ವೇಳೆ ಗಾಳಿ ತೆಗೆದರೆ ಅದು ಅಪರಾಧ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಶ್ನಿಸಿ ಕೋರ್ಟ್ ಹೋಗಬಹುದು. ಇದರೊಂದಿಗೆ ಚಾಲಕನ ಮೇಲೆ ಕೈ ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಶಿಕ್ಷಾರ್ಹ ಅಪರಾಧ. ಬಲವಂತವಾಗಿ ವಾಹನದ ಕೀಲಿಯನ್ನು ಕಸಿದುಕೊಳ್ಳುವ ಅಧಿಕಾರ ಕೂಡ ಪೊಲೀಸರಿಗೆ ಇಲ್ಲ. ಇನ್ನು ಮೋಟಾರು ವಾಹನ ಕಾಯ್ದೆ, 198 (ಮೋಟಾರು ವಾಹನಗಳ ಕಾಯಿದೆ) ಮತ್ತು ಸಂಚಾರಿ ಕಾಯ್ದೆಯಡಿ ನ್ಯಾಯಾಲಯದ ಉಲ್ಲಂಘನೆಗಾಗಿ ದಂಡದ ರಶೀದಿ ನೀಡಲಾಗುವುದು. ಹಾಗೂ ವಾಹನವನ್ನು ಜಪ್ತಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: ವೈರಲ್: ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?
ವಾಹನ ಗಾಳಿ ತೆಗೆದರೆ ನೀವು ಹೀಗೆ ಮಾಡಬಹುದು?
ಸಾಕ್ಷ್ಯ ಸಂಗ್ರಹಿಸಿ: ಘಟನೆಯ ವೀಡಿಯೊ ಅಥವಾ ಫೋಟೋ ತೆಗೆಯಿರಿ. ಅಧಿಕಾರಿಯ ಹೆಸರು ಗಮನಿಸಿ.
ದೂರು ನೀಡಿ: ಹತ್ತಿರದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಥವಾ ಎಸ್ಸಿಪಿ (ಎಸಿಪಿ) ಅವರಿಗೆ ಅಧಿಕೃತ ದೂರು ನೀಡಿ.
ಸೋಷಿಯಲ್ ಮೀಡಿಯಾ: ಬೆಂಗಳೂರು ಸಂಚಾರಿ ಪೊಲೀಸ್ ಅಧಿಕೃತ ಎಕ್ಸ್ (ಎಕ್ಸ್) ಖಾತೆಗೆ (@blrechelon ಅಥವಾ @jointcptraffic) ಟ್ಯಾಗ್ ಮಾಡಿ ದೂರನ್ನು ಹಂಚಿಕೊಳ್ಳಿ.
112 ಗೆ ಕರೆ ಮಾಡಿ: ಸ್ಥಳದಲ್ಲೇ ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ