ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ, ಫೆ.26ರಂದು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿದೆ. ಮದುವೆ ಹಾಜರಾಗಲು ಕೆಲ ಕಂಡಿಷ್ ಇದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಫೆ.26ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸೆಲೆಬ್ರೆಟಿ ಜೋಡಿಗಳದ್ದು ಎನ್ನಲಾದ ಲಗ್ನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತ ರಾಜಸ್ಥಾನದ ಉದಯಪುರದಲ್ಲಿ ಭರ್ಜರಿ ತಯಾರಿಗಳು ನಡೆಯುತ್ತಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆಗೆ ಹಾಜರಾಗುವವರಿಗೆ ಕೆಲ ಷರತ್ತು ವಿಧಿಸಲಾಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇದುವರೆಗೂ ಅಧಿಕೃತವಾಗಿ ತಮ್ಮ ಮದುವೆ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಇತ್ತ ಮಾಧ್ಯಮದ ಪ್ರಶ್ನೆಗಳಿಂದಲೂ ನುಣುಚಿಕೊಂಡಿದ್ದಾರೆ. ತಮ್ಮ ಮದುವೆಯನ್ನು ಸೀಕ್ರೆಟ್ ಆಗಿ ಸೈಲೆಂಟ್ ಮಾಡಲು ಈ ಜೋಡಿ ಮಂದಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣ ಮದುವೆಗೆ ಕುಟುಂಬಸ್ಥರು, ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಗೆ ಹಾಜರಾಗುವವರು ಮಂಟಪ ಒಳಗೆ, ಆವರಣಕ್ಕೆ ಫೋನ್ ತರುವಂತಿಲ್ಲ. ಈ ಮೂಲಕ ಯಾವುದೇ ವಿಡಿಯೋ, ಫೋಟೋಗಳು ಲೀಕ್ ಆಗದಂತೆ, ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು, ವಿಡಿಯೋಗಳು ಕೋಲಾಹಲ ಎಬ್ಬಿಸಿದಂತೆ ತಡಹಿಡಿಯಲು ನೋ ಪಾಲಿಸಿ ಜಾರಿಗೆ ತರಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

ಮದುವೆ ಹಾಗೂ ಆರತಕ್ಷತೆಗೆ ಹಾಜರಾಗುವ ಅತಿಥಿಗಳು ಯಾವುದೇ ಉಡುಗೊರೆ ತರುವಂತಿಲ್ಲ. ಆಗಮನವೇ ಉಡುಗೊರೆಯಾಗಿದೆ. ಈ ಕುರಿತು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೈಬರಹದ ಪತ್ರವನ್ನು ಕುಟುಂಬಸ್ಥರು ಆಪ್ತರಿಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಫೆಬ್ರವರಿ 26ರಂದು ನಡೆಯಲಿರುವ ಮದುವೆಗೆ ಸೆಲೆಬ್ರೆಟಿಗಳಿಗೆ ಆಹ್ವಾನವಿಲ್ಲ. ಮದುವೆಗೆ ನೋ ಸೆಲೆಬ್ರೆಟಿಸ್ ಪಾಲಿಸಿ ತೆಗೆದುಕೊಳ್ಳಲಾಗಿದೆ. ಕುಟುಂಬಸ್ಥರು, ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಬಳಿಕ ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಸೆಲೆಬ್ರೆಟಿಗಳು ಸರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

ಮದುವೆ ಬಳಿಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಂದು ತಿಂಗಳು ಬ್ರೇಕ್ ಪಡೆದುಕೊಳ್ಳುತ್ತಿದ್ದಾರೆ. ಶೂಟಿಂಗ್, ಸಿನಿಮಾ ಪ್ರಚಾರ ಎಲ್ಲದರಿಂದಲೂ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಈ ಜೋಡಿ ಮದುವೆ ಬೆನ್ನಲ್ಲೇ ವಿದೇಶಕ್ಕೆ ತೆರಳಲಿದ್ದಾರೆ ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಶೂಟಿಂಗ್‌ನಿಂದ ಬ್ರೇಕ್

Source link

Leave a Reply

Your email address will not be published. Required fields are marked *