ಕಲಬುರಗಿ, (ಫೆಬ್ರವರಿ 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ಅವರು ಇಂದು (ಫೆಬ್ರವರಿ 01) 2026-27ನೇ ಸಾಲಿನ ಬಜೆಟ್ (ಯೂನಿಯನ್ ಬಜೆಟ್ 2026) ಮಂಡಿಸಿದ್ದಾರೆ. 53.47 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಬಜೆಟ್ ಮಂಡಿಸಿದ್ದಾರೆ. ಇನ್ನು ಈ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಪ್ರತಿಕ್ರಿಯಿಸಿದ್ದು, ಕರ್ನಾಟಕಕ್ಕೆ ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ. ಕರ್ನಾಟಕ್ಕೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್ ಇದು.ಇಂದು ಮಂಡಿಸಿರುವ ಬಜೆಟ್ ಬರೀ ಹೇಳಿಕೆಗಳಿಂದ ಕೂಡಿದೆ.ಪರಿಷ್ಕೃತ ಅಂದಾಜು ಗಾತ್ರ 49 ಲಕ್ಷ 64 ಸಾವಿರ ಕೋಟಿ. ಒಂದು ಲಕ್ಷ ಕೋಟಿಯಷ್ಟು ಪರಿಷ್ಕೃತ ಅಂದಾಜು ಕಡಿಮೆ. ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಘೋಷಣೆ ಮಾಡಿದೆ. ಇದರಿಂದ ಕರ್ನಾಟಕಕ್ಕೆ ಏನು ಅನುಕೂಲ. ಮುಂದಿನ 5 ವರ್ಷಗಳಿಂದ ಯೋಜನೆ ಎಂದು ಹೇಳಿದರು. ನಮಗೆ ಬೇಕಾಗಿರುವುದು ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು. ಬೆಂಗಳೂರು-ಮಂಗಳೂರಿಗೆ ಹೈಸ್ಪೀಡ್ ಬೇಕು. ಕೇಂದ್ರದವರು ವಿಕಸಿತ ಭಾರತ ಬಗ್ಗೆ ಬಹಳ ಮಾತನಾಡಿದ್ರು. ಆದರೆ ಅದು ಬರೀ ಮಾತಿನಲ್ಲಿದೆ, ಕೃತಿಯಾಗಿ ಅವರು ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.