ಚಳಿಗಾಲದ ಎಫೆಕ್ಟ್‌: ಸಾವಿರ ರೂ ಗಡಿಯತ್ತ ಮಟನ್‌ ದರ; ನಾನ್‌ವೆಜ್‌ ಪ್ರಿಯರಿಗೆ ಶಾಕ್​​!

ಚಳಿಗಾಲದ ಎಫೆಕ್ಟ್‌: ಸಾವಿರ ರೂ ಗಡಿಯತ್ತ ಮಟನ್‌ ದರ; ನಾನ್‌ವೆಜ್‌ ಪ್ರಿಯರಿಗೆ ಶಾಕ್​​!


ಬೆಂಗಳೂರು, ಡಿಸೆಂಬರ್ 21: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚಳಿ (ಶೀತ) ಹಾಗೂ ಶೀತಗಾಳಿ ಶುರುವಾಗಿದೆ. ಚಳಿ ಮತ್ತು ಗಾಳಿಗೆ ಥರಗುಟ್ಟುತ್ತಿರುವ ಜನರ ಮಾಂಸಹಾರಕ್ಕೆ (ನಾನ್ ವೆಜ್) ಹೆಚ್ಚು ಹೋಗುತ್ತಿದ್ದಾರೆ. ಕುರಿ, ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದೆ. ಅದರಲ್ಲೂ ಕ್ರಿಸ್‌ಮಾಸ್‌ ಹಾಗೂ ಹೊಸ ವರ್ಷದಿಂದ ಬೇಡಿಕೆ ಹೆಚ್ಚಿದ ದರದಲ್ಲಿ ಸಾವಿರ ಗಡಿ ಮುಟ್ಟಿದ್ದು, ನಾನ್‌ವೆಜ್‌ ಪ್ರಿಯರಿಗಂತೂ ಬಿಗ್‌ ಶಾಕ್‌ ಉಂಟಾಗಿದೆ.

ರಾಜ್ಯದಲ್ಲಿ ಅತಿಯಾದ ಚಳಿ ಹಿನ್ನೆಲೆ ಮಟನ್, ಚಿಕನ್ ದರ ಏರಿಕೆಯಾಗಿದೆ. ಸಾವಿರ ಗಡಿಯತ್ತ ಮಟನ್ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಕೋಳಿ ಬೆಲೆಯೂ ಏರಿಕೆ ಕಂಡಿರುವುದು ನಾನ್ವೆಜ್ ಪ್ರಿಯರಿಗೆ ಬೇಸರ ಉಂಟು ಮಾಡಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಯೋ ಚಳಿ; 7 ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ!

ತೀವ್ರಚಳಿ, ಹವಮಾನದಲ್ಲಿ ಬದಲಾವಣೆ ಹಿನ್ನಲೆ ಕುರಿ, ಕೋಳಿ ಉತ್ಪಾದನೆ ಕುಸಿತವಾಗಿದೆ. ಜೊತೆಗೆ ಕ್ರಿಸ್ ಮಾಸ್ ಹಾಗೂ ನ್ಯೂಯಿಯರ್ ಹಿನ್ನಲೆ ಮಟನ್ ಹಾಗೂ ಚಿಕನ್, ಮೊಟ್ಟೆಗೆ ಬೇಡಿಕೆ ಹೆಚ್ಚಿದೆ. ದಾಖಲೆಯ ಪ್ರಮಾಣದಲ್ಲಿ ಚಿಕನ್ ಹಾಗೂ ಮಟನ್ ದರದಲ್ಲಿ ದರ ಏರಿಕೆಯಾಗಿದೆ.

ಮಟನ್ ರೇಟ್ 900 ರೂ

ಕಳೆದೊಂದು ತಿಂಗಳಿನಿಂದ ಚಿಕನ್ ಹಾಗೂ ಮಟನ್ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಳಿಯಿಂದ ಕುರಿ ಬೆಳವಣಿಗೆ ಕುಸಿತವಾದ ಹಿನ್ನಲೆ ಕೆಜಿ ಮಟನ್‌ಗೆ 900 ರೂ. ಇದ್ದು, ಮುಂದಿನ ವಾರ ಒಂದು ಸಾವಿರ ರೂ. ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ 230 ರಿಂದ 240 ರೂ. ರವರಗೆ ಇರುತ್ತಿದ್ದ ಚಿಕನ್ ದರ ಇದೀಗ ಕೆಜಿಗೆ 300 ರಿಂದ 310 ರೂ. ಗೆ ಏರಿಕೆ ಕಂಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ಅತಿಯಾದ ಹವಾಮಾನ ಹಾಗೂ ಬೇಡಿಕೆ ಹೆಚ್ಚಾದ ಹಿನ್ನಲೆ ದರ ಏರಿಕೆಯಾಗಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶದ ಚರ್ಚೆಯ ನಡುವೆ ಹೊಸ ವರ್ಷ ಹಾಗೂ ಕ್ರಿಸ್ ಮಾಸ್ ಹಬ್ಬದ ಬೇಡಿಕೆ ಮಾಂಸ ಪ್ರಿಯರಿಗೆ ಇದು ನಿಜವಾಗಿ ಉತ್ಪಾದಿಸಿದೆ.

ಒಟ್ಟಿನಲ್ಲಿ ಅತಿಯಾದ ಚಳಿ ಹಾಗೂ ಹೆಚ್ಚಾದ ಬೇಡಿಕೆಯ ಬೆಲೆ ಏರಿಕೆ ನಾನ್ ವೆಜ್ ಪ್ರಿಯರಿಗೆ ಟೆನ್ಷನ್ ಶುರುವಾಗಿದೆ, ಬೆಲೆ ಏರಿಕೆಗೆ ಕಂಗೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *