ಇಡ್ಲಿ(ಇಡ್ಲಿ) ಎಲ್ಲರ ನೆಚ್ಚಿನ ತಿಂಡಿ. ದಕ್ಷಿಣ ಭಾರತದ ಪ್ರಮುಖ ತಿಂಡಿಗಳಲ್ಲಿ ನಾನಾ ವೆರೈಂಟಿಗಳಿವೆ. ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಮೈಸೂರು ಇಡ್ಲಿ, ಮಸಾಲೆ ಇಡ್ಲಿ ಹೀಗೆ ನಾನಾ ತರಹದ ಇಡ್ಲಿಗಳ ರುಚಿ ಸವಿದಿರಬಹುದು. ಆದರೆ ಇದೀಗ ಉತ್ತರ ಭಾರತೀಗರು (ಉತ್ತರ ಭಾರತೀಯರು) ಇಡ್ಲಿ ಮೇಲೆ ಹೊಸ ಪ್ರಯೋಗಗಳನ್ನು ಮಾಡಲಾಗಿದೆ. ಇದು ಇಡ್ಲಿ ಪ್ರಿಯರನ್ನು ಕೆರಳಿಸಿದೆ. ಹೌದು ಉತ್ತರ ಭಾರತದಲ್ಲಿ ಇಡ್ಲಿ ಬೋಂಡಾ ತಯಾರಿಸುವ ವಿಡಿಯೋ ವೈರಲ್ ಆಗಿದೆ.
ಅಧವನ್ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಉತ್ತರ ಭಾರತದಲ್ಲಿ ತಯಾರಿಸಲಾದ ಇಡ್ಲಿಯ ವಿಭಿನ್ನ ಖಾದ್ಯದ್ದಾಗಿದೆ. ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತು ಹೋಗಿದೆ ಎಂದು ಶೀರ್ಷಿಕೆ ನೀಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇಡ್ಲಿ: ಹುಟ್ಟಿದ್ದು ದಕ್ಷಿಣ ಭಾರತದಲ್ಲಿ… ಉತ್ತರದಲ್ಲಿ ಮರಣ! 😭
ಪಾಪಮ್ಯಾ ಅಂತ ಇಡ್ಲಿ! ಏನು ಪಾಡುಮಾಡುರಂಗ ಪಾರುಂಗ… 😖
ಈ ದುರಂತವನ್ನು ನೋಡಿ! 👇 pic.twitter.com/XHR82R86Fg
— Aadhavan® (@aadaavaan) ನವೆಂಬರ್ 24, 2025
ಇಲ್ಲಿ ವ್ಯಕ್ತಿಯೊಬ್ಬ ಮೃದುವಾದ ಮಲ್ಲಿಗೆಯಂತಹ ಇಡ್ಲಿ ರುಚಿಕರ ಇಡ್ಲಿ ಬೋಂಡಾ ತಯಾರಿಸಿದ್ದಾನೆ. ಗರಿಗರಿಯಾದ ಇಡ್ಲಿ ಬೋಂಡಾವನ್ನು ಸಣ್ಣ ತುಂಡುಗಳಾಗಿ ಮಾಡಿ ಅದಕ್ಕೆ ಸಾಂಬಾರ್ ಹಾಗೂ ಚಟ್ನಿ ಸೇರಿಸಿ ಗ್ರಾಹಕರು ಕೊಡುವುದನ್ನು ನೀವು ನೋಡಬಹುದು. ರಸ್ತೆ ಬದಿಯ ಸಣ್ಣ ಅಂಗಡಿಯೊಂದರ ವಿಡಿಯೋ ಇಲ್ಲಿದೆ.
ಇದನ್ನೂ ಓದಿ:ಇಟಾಲಿಯನ್ ಕಾನ್ಸುಲ್ ಜನರಲ್ ಹೃದಯ ಗೆದ್ದ ಬೆಂಗಳೂರು ಮಸಾಲೆ ದೋಸೆ
ಈ ವಿಡಿಯೋ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ.. ಒಬ್ಬ ಬಳಕೆದಾರ ಇಡ್ಲಿ ಮರ್ಯಾದೆಯನ್ನು ಉತ್ತರ ಭಾರತದವರು ತೆಗೆದರು. ಇತರರು, ಉದ್ದಿನ ವಡೆ ಬಗ್ಗೆಯಾದ್ರೂ, ಆದರೆ ಇಡ್ಲಿಯನ್ನು ಕೆಂಪಾಗಿ ಕರಿದ ಈ ಖಾದ್ಯ ಯಾವುದು ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಇಡ್ಲಿಯ ಹತ್ಯೆಯಾಗಿದೆ ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:01 pm, ಮಂಗಳವಾರ, 25 ನವೆಂಬರ್ 25