Headlines

ಅಬ್ಬಬ್ಬಾ ಏನ್​ ಚಳಿ ಗುರು: ಥಂಡಾ ಹೊಡೆದ ಉತ್ತರ ಕರ್ನಾಟಕ; ವಾಕಿಂಗ್​​​​ ತೆರಳದಂತೆ ಮನವಿ

ಅಬ್ಬಬ್ಬಾ ಏನ್​ ಚಳಿ ಗುರು: ಥಂಡಾ ಹೊಡೆದ ಉತ್ತರ ಕರ್ನಾಟಕ; ವಾಕಿಂಗ್​​​​ ತೆರಳದಂತೆ ಮನವಿ


ವಿಜಯಪುರ, ಡಿಸೆಂಬರ್ 14: ಭಾರೀ ಚಳಿಗೆ (ಶೀತ) ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಥಂಡಾ ಹೊಡೆದಿವೆ. ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ಕಲ್ಯಾಣವಾಗಿದ್ದು, ಕಿತ್ತೂರು, 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ (ಕಿತ್ತಳೆ ಎಚ್ಚರಿಕೆ) ಘೋಷಿಸಲಾಗಿದೆ. ಇನ್ನೂ ಎರಡು ದಿನಗಳ ಕಾಲ ಶೀತಗಾಳಿ ಬೀಸಲಿದೆ, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

ಉತ್ತರ ಕರ್ನಾಟಕದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಭಾರೀ ಚಳಿಗೆ ಉತ್ತರ ಕರ್ನಾಟಕ ಬೆಚ್ಚಿಬಿದ್ದಿದೆ. ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ, ಹವಾಮಾನ ಇಲಾಖೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಯಾದಗಿರಿ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಶೀತಗಾಳಿ ಬೀಸಲಿದೆ. ಈ 9 ಜಿಲ್ಲೆಗಳಲ್ಲಿ ತಾಪಮಾನ ಕುಸಿತ ಕಂಡಿದ್ದು, ಇನ್ನೂ ತಾಪಮಾನ ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಚಳಿ ಅಬ್ಬರ; ಬೆಂಗಳೂರು ತಾಪಮಾನಕ್ಕೆ ನಲುಗಿದ

ರಾಜ್ಯದಲ್ಲಿಯೇ ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕೇವಲ 7 ತಾಪಮಾನ ದಾಖಲಾಗಿದ್ದು, ಜನರ ಜೀವನ ತತ್ತರಗೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ತಾಪಮಾನ ಕನಿಷ್ಠ ಮಟ್ಟ ತಲುಪಿದೆ. 2023ರಲ್ಲಿ ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈಗ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನೂ ಎರಡು ದಿನಗಳ ಕಾಲ ಶೀತಗಾಳಿ ಬೀಸಲಿದೆ, ತಾಪಮಾನ 6 ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ ಇದೆ.

ಬಗ್ಗೆ ಸಲಹೆ ಏನು?

ಮುಂದಿನ ಎರಡ್ಮೂರು ದಿನಗಳ ಕಾಲ ಜನರು ಕೂಡ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಬೆಳಿಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ಹೊರಗೆ ತೆರಳಿ ವಾಕಿಂಗ್ ಮಾಡುವುದು, ವ್ಯಾಯಾಮ ಮಾಡಬಾರದು. ಬಟ್ಟೆ ಧರಿಸಬೇಕು. ಬಿಸಿ ನೀರು ಸೇವನೆ ಮಾಡಬೇಕು ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಯ ಮುನ್ಸೂಚನೆ, 5 ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ

ಒಟ್ಟಿನಲ್ಲಿ ಸದಾ ಬಿಸಿಲಿರುವ ಉತ್ತರ ಕರ್ನಾಟಕ ಭಾಗದಲ್ಲಿ ಶೀತಗಾಳಿ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಈ ಎರಡೂ ದಿನ ಅಂದರೆ ಡಿ. 16ರವರೆಗೂ ಆರೆಂಜ್ ಅಲರ್ಟ್ ಎಂದು ಘೋಷಿಸಲಾಗಿದೆ, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *