
ಮಣ್ಣಿನ ಮಡಿಕೆ ತುಂಬಾ ಕೆಂಪಾಗಿದ್ದರೆ: ಕೆಲವೊಂದು ಮಣ್ಣಿನ ಮಡಿಕೆಗಳು ನೋಡಲು ತುಂಬಾನೇ ಆಕರ್ಷಕವಾಗಿರುತ್ತದೆ, ಒರಿಜಿನಲ್ ಮಣ್ಣಿನ ಪಾತ್ರೆಗಳು ಅಷ್ಟೊಂದು ಕಲರ್ಫುಲ್ ಇರಲ್ಲ, ಜೇಡಿಮಣ್ಣು ಬಳಸಿ ಮಾಡುವ ಪಾತ್ರೆಗಳು ಸ್ವಲ್ಪ ಡಲ್ ಕಲರ್ನಲ್ಲಿರುತ್ತದೆ.
ಕಪ್ಪಗೆ ಇರುವ ಮಣ್ಣಿನ ಪಾತ್ರೆ ಬಳಸಬೇಡಿ
ಮಣ್ಣಿನ ಪಾತ್ರೆ ತಂದು ಅದಕ್ಕೆ ತೆಂಗಿನಕಾಯಿ ಚಿಪ್ಪು ಹಾಕಿ ಬೆಂಕ ಹಚ್ಚಿ ಕಪ್ಪು ಮಾಡುವುದು ಬೇರೆ, ಆದರೆ ನೀವು ಖರೀದಿಸುವಾಗಲೇ ಕಪ್ಪು ಬಣ್ಣದಲ್ಲಿದ್ದರೆ ಅದನ್ನು ಖರೀದಿಸಲು ಹೋಗಬೇಡಿ, ಏಕೆಂದರೆ ಆ ಪಾತ್ರೆ ಕಪ್ಪು ಬಣ್ಣಕ್ಕೆ ಬರಲು ಅವರು ಕೆಮಿಕಲ್ ಬಳಸಿರುತ್ತಾರೆ, ಹಾಗಾಗಿ ಅಂಥ ಪಾತ್ರೆ ಬಳಸಬೇಡಿ.