‘ಪುಷ್ಪ 2’ (ಪುಷ್ಪ 2) ಸಿನಿಮಾ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿದೆ. ಸುಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾಗಳಲ್ಲಿ ಹೊಸ ದಾಖಲೆಗಳನ್ನು ಬರೆಯಿತು. ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ‘ಪುಷ್ಪ 2’. ಈ ಸಿನಿಮಾದ ಅಂತ್ಯದಲ್ಲಿ ‘ಪುಷ್ಪ 3’ ಸಹ ಬರಲಿದೆ ಎಂದು ಸುಕುಮಾರ್ ನೀಡಿದ್ದರು. ‘ಪುಷ್ಪ 3’ ಸಿನಿಮಾದ ಒನ್ ಲೈನರ್ ರೆಡಿ ಇದೆ ಎಂದು ಸಹ ಸುಕುಮಾರ್ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಈಗ ಸುಕುಮಾರ್ ಹಠಾತ್ತನೆ ‘ಪುಷ್ಪ 3’ ಸಿನಿಮಾ ಪ್ರಾಜೆಕ್ಟ್ ಅನ್ನು ಕೈಬಿಟ್ಟಿದ್ದಾರೆ.
‘ಪುಷ್ಪ’ ಸಿನಿಮಾ ಮುಗಿದ ಬಳಿಕ ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾ ಶುರು ಮಾಡಿದರು. ಅದು ಮುಗಿದ ಕೂಡಲೇ ‘ಪುಷ್ಪ 3’ ಸಿನಿಮಾ ಶುರುವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಸುಕುಮಾರ್ ಅವರು ಇದೀಗ ಬೇರೆ ನಟನ ಜೊತೆ ಕೈಜೋಡಿಸಲು ಮುಂದಾಗಿದ್ದು ಬೇರೊಂದು ಸಿನಿಮಾಕ್ಕಾಗಿ ಚಿತ್ರಕತೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ನಿರ್ಮಾಪಕರು ಅಧಿಕೃತವಾಗಿ ಮಾತನಾಡಿದ್ದಾರೆ.
ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುಕುಮಾರ್ ಅವರ ಪ್ರಥಮ ಶಿಷ್ಯ ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್. ‘ಪೆದ್ದಿ’ ಸಿನಿಮಾ ಮಾರ್ಚ್, 2026 ರಲ್ಲಿ ಬಿಡುಗಡೆ ಆಗಲಿದೆ. ‘ಪೆದ್ದಿ’ ಸಿನಿಮಾದ ಶೂಟಿಂಗ್ ಪೂರ್ತಿ ಆಗುತ್ತಿದ್ದಂತೆ ರಾಮ್ ಚರಣ್, ಸುಕುಮಾರ್ ಜೊತೆಗಿನ ಸಿನಿಮಾ ಶುರುವಾಗಲಿದೆ.
ಇದನ್ನೂ ಓದಿ:40ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಅಲ್ಲು ಅರ್ಜುನ್ ಪತ್ನಿ
ಮೈತ್ರಿ ಮೂವಿ ಮೇಕರ್ಸ್ ನವರೇ ಸುಕುಮಾರ್-ರಾಮ್ ಚರಣ್ ಸಿನಿಮಾಕ್ಕೂ ಬಂಡವಾಳ ಹೂಡುತ್ತಿದ್ದರು, ಈ ಬಗ್ಗೆ ಅವರೇ ಖಾತ್ರಿ ಪಡಿಸಿದ್ದಾರೆ. ಸದ್ಯಕ್ಕೆ ಸುಕುಮಾರ್ ದುಬೈನಲ್ಲಿದ್ದು ರಾಮ್ ಚರಣ್ ಸಿನಿಮಾಕ್ಕೆ ಚಿತ್ರಕತೆ ಸಿದ್ಧವಾಗುತ್ತಿದೆ. ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಮುಗಿಯುವ ಹೊತ್ತಿಗೆ ಸುಕುಮಾರ್ ಸಿನಿಮಾ ಶುರುವಾಗಲಿದೆ ಎಂದು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರು. ಇದೊಂದು ಭಾರಿ ಬಜೆಟ್ ಸಿನಿಮಾ ಆಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಲಿದೆ.
ಅಸಲಿಗೆ ಸುಕುಮಾರ್ ಹಾಗೂ ರಾಮ್ ಚರಣ್ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದು. ಈ ಮೊದಲು ‘ರಂಗಸ್ಥಲಂ’ ಸಿನಿಮಾದಲ್ಲಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಿನಿಮಾದಲ್ಲಿ ಕಿವುಡನ ಪಾತ್ರದಲ್ಲಿ ಮಿಂಚಿದ್ದರು ರಾಮ್ ಚರಣ್. ಸಿನಿಮಾ ಭಾರಿ ಹಿಟ್ ಆಗಿದೆ. ಈಗ ಮತ್ತೊಮ್ಮೆ ರಾಮ್ ಚರಣ್ ಮತ್ತು ಸುಕುಮಾರ್ ಅದೇ ಮ್ಯಾಜಿಕ್ ಪುನರಾವರ್ತನೆ ಮಾಡುತ್ತಾರೆಯೇ ಕಾದು ನೋಡಬೇಕಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ