ನವದೆಹಲಿ, ಫೆಬ್ರುವರಿ 22: ಮತ್ತು ಕಾಶ್ಮೀರದ ಕಿಶ್ತವಾರ್ ನಲ್ಲಿ (ಕಿಶ್ತ್ವಾರ್) ಭದ್ರತಾ ಪಡೆಗಳು ಮೂವರು ಉಗ್ರಗಾಮಿಗಳನ್ನು ಕೊಂದುಹಾಕಿದ್ದಾರೆ. ಈ ಮೂವರಲ್ಲಿ ಒಬ್ಬಾತ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರ ಸೈಫುಲ್ಲಾ ಎಂದು ಹೇಳಲಾಗಿದೆ. ಈ ಪಾಕ್ ಮೂಲದ ಉಗ್ರಗಾಮಿ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗವಹಿಸಿರುತ್ತಾನೆ. ಕಳೆದ ಎರಡು ವರ್ಷಗಳಲ್ಲಿ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ತಿರುಗುತ್ತಿರುತ್ತಾನೆ. 20ಕ್ಕೂ ಹೆಚ್ಚು ಬಾರಿ ಸಾವಿನ ದವಡೆಯಿಂದ ತಪ್ಪಿಸಿಕೊಂಡಿರುತ್ತಾನೆ. ಕೊನೆಗೆ ಕಿಷ್ಟವಾರ್ ನಲ್ಲಿ ಎನ್ ಕೌಂಟರ್ ನಲ್ಲಿ ಆತನ ಸಂಹಾರವಾಗಿದೆ.
ಕಿಷ್ಟವಾರ್ ನಲ್ಲಿ ಉಗ್ರಗಾಮಿಗಳು ನುಸುಳಿದ್ದಾರೆ ಎಂದು ಗುಪ್ತಚರರಿಂದ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಗುಡ್ಡದ ಬಳಿ ಮಣ್ಣಿನ ಮನೆಯೊಳಗೆ ಉಗ್ರರು ಇರುವ ಜಾಗಕ್ಕೆ ಭದ್ರತಾ ಪಡೆಗಳು ಹೋಗುತ್ತಿದ್ದಂತೆಯೇ, ಉಗ್ರರಿಂದ ಗುಂಡಿನ ದಾಳಿ. ಯೋಧರು ಪ್ರತಿದಾಳಿ ನಡೆಸುತ್ತಾರೆ. ಇದರಲ್ಲಿ ಮೂವರು ಉಗ್ರರು ಹತ್ಯೆಯಾಗುತ್ತಾರೆ.
ಇದನ್ನೂ ಓದಿ: ಎಂಟು ಮಂದಿ ಶಂಕಿತ ಉಗ್ರರ ಬಂಧನ; ಗಾರ್ಮೆಂಟ್ಸ್ ಫ್ಯಾಕ್ಟರಿ ಕಡೆಗೆ ಕೆಲಸ ಮಾಡುತ್ತಿರುವವರು
ಎರಡು ಅಸ್ಸಾಲ್ಟ್ ರೈಫಲ್ಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ನಡೆಸಿದ ಭದ್ರತಾ ಪಡೆ ತಂಡಗಳಲ್ಲಿ ಕಾಶ್ಮೀರ ರಾಜ್ಯದ ಪೊಲೀಸ್, ಸಿಆರ್ ಪಿಎಫ್ ಮತ್ತು ವಿಶೇಷ ಪಡೆಗಳು ಇದ್ದವು.
ಇದೇ ಕಿಷ್ಟವಾರ್ ನಲ್ಲಿ ಇತ್ತೀಚೆಗೆ ಹಲವು ಬಾರಿ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಕಾಳಗಗಳು ನಡೆದಿವೆ. ಇತ್ತೀಚೆಗೆ ನಡೆದ ಎನ್‌ಕೌಂಟ್‌ನಲ್ಲಿ ಜೇಷೆ ಆದಿಲ್ ಎಂಬಾತನನ್ನು ಉಗ್ರರಿಂದ ಹೊಡೆದು ಹತ್ಯೆ ಮಾಡಲಾಗಿದೆ.
ಇದನ್ನೂ ಓದಿ: ಭಾರತೀಯರು ಬೇರೆಯವರಿಗೆ ಸೇವೆ ಸಲ್ಲಿಸಿದ್ದೇ ಆಯ್ತು, ಸ್ವಂತದ್ದೇನೂ ಸಾಧಿಸಲಿಲ್ಲ: ಸ್ಯಾಮ್ ಪಿತ್ರೋಡಾ
ಕಿಷ್ಟವಾರ್ನ ಛಾತ್ರ ಅರಣ್ಯ ಪ್ರದೇಶದಲ್ಲಿ ಜನವರಿ ತಿಂಗಳಿನಲ್ಲಿ ಐದಾರು ಬಾರಿ ಎನ್ ಕೌಂಟರ್ ಪ್ರಕರಣಗಳು ನಡೆದಿವೆ. ತ್ರಾಶಿ ಐ ಆಪರೇಷನ್ ಕೈಗೊಂಡಿದ್ದ ಭದ್ರತಾ ಪಡೆಗಳು ಕಿಶ್ತವಾರ್ನ ಛಾತ್ರೂ, ಸೊನ್ನಾರ್, ದೋಲ್ಗಂ, ಡಿಚ್ಚರ್ ಮೊದಲಾದ ಸ್ಥಳಗಳಲ್ಲಿ ಉಗ್ರರ ಬೆನ್ನಟ್ಟಿ ಹೋಗಿದ್ದವು. ಈ ಕಿಷ್ಟವಾರ್ ಪ್ರದೇಶವು ಬಹಳ ಕ್ಷಿಷ್ಟಕರವಾದ ದಟ್ಟ ಅರಣ್ಯ ಮತ್ತು ಗುಡ್ಡಗಾಡು ಇರುವ ಸ್ಥಳವಾಗಿದೆ, ಉಗ್ರರಿಗೆ ಅಡಗಿಕೊಳ್ಳಲು ಪ್ರಶಸ್ತ ಎನಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ