Headlines

Weekly Career Horoscope 2025: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

Weekly Career Horoscope 2025: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?


ಮೇಷ ರಾಶಿ :

ಈ ವಾರ ನಿಮ್ಮ ಕೆಲಸದ ಮೇಲಿನ ದೃಢತೆಯಿಂದ ಯಶಸ್ಸು ತರುತ್ತದೆ. ಅಧಿಕಾರಿಗಳಿಂದ ಮೆಚ್ಚುಗೆ ದೊರೆತರೂ ಸಹ ಹಿಗ್ಗನ್ನು ತೋರಿಸಬಾರದು. ಹೊಸ ಯೋಜನೆಗಾಗಿ ನಿಮಗೆ ಹಸ್ತಾಂತರವಾಗುವ ಸಾಧ್ಯತೆ ಇದೆ. ಇದರಿಂದ ಹಣಕಾಸಿನ ಸುಧಾರಣೆಯೂ ಸಾಧ್ಯ. ಸೋಮವಾರ ಶಿವಮಿಗೆ ತಾಮ್ರಪಾತ್ರೆಯಲ್ಲಿ ಅಭಿಷೇಕ ಮಾಡಿ.

ವೃಷಭ ರಾಶಿ :

ರಾಶಿ ಚಕ್ರದ ಎರಡನೇ ರಾಶಿಯ ರಾಶಿಯ ಅಧಿಪತಿ ಶುಕ್ರನ ಅನುಗ್ರಹದಿಂದ ಉದ್ಯೋಗ ಕ್ಷೇತ್ರದಲ್ಲಿ ಲಾಭ ಮತ್ತು ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಹೊಸ ವ್ಯವಹಾರ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಮಾಡುವಿರಿ. ಮೇಲಧಿಕಾರಿಗಳಿಂದ ಪ್ರೋತ್ಸಾಹ ಬರಲಿದೆ ಅಹಂಕಾರ ಜೊತೆಗೆ ಬರಲಿದೆ. ಶುಕ್ರವಾರ ದೇವಿಗೆ ಸಂಜೆ ಪೂಜೆ ಮಾಡುವುದು ಶುಭ.

ಮಿಥುನ ರಾಶಿ :

ಮೂರನೇ ವಾರ ಈ ರಾಶಿಯವರಿಗೆ ಗುರುವಿನ ಕೃಪೆಯಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಸಂಶೋಧನೆ, ಭಾಷಣ ತರಬೇತಿ ಕ್ಷೇತ್ರದಲ್ಲಿ ಶಿಕ್ಷಣ ಸತ್ಫಲ ಸಿಗಲಿದೆ. ಹೊಸ ಕಲಿಕೆಯವರಿಗೆ, ಆರಂಭದ ಕಲಿಕೆ ಉತ್ತಮ ರೀತಿಯಲ್ಲಿ ಲಭ್ಯ. ಪ್ರಯತ್ನಿಸಿದ ಕೆಲಸಗಳಲ್ಲಿ ಗೌರವ ದೊರೆಯುತ್ತದೆ. ಗುರುವಾರ ಹೆಸರುಕಾಳಿನ ಸಿಹಿ ಮಾಡಿ ಅತಿಥಿಗಳನ್ನು ಸತ್ಕಾರಿಸಿ.

ಕರ್ಕಾಟಕ ರಾಶಿ :

ರಾಶಿಯ ಅಧಿಪತಿ ಚಂದ್ರನ ಅನುಗ್ರಹದಿಂದ ಈ ವಾರ ನಿಮ್ಮ ಮನಸ್ಸಿನಲ್ಲಿ ಶಾಂತಿ ಮತ್ತು ಹಳೆಯ ಒತ್ತಡಗಳು ಕಡಿಮೆಯಾಗುತ್ತವೆ. ಹೊಸ ಸ್ಥಾನಮಾನದ ಜೊತೆ ಬಡ್ತಿಯೂ ಸಾಧ್ಯತೆ. ಸಹೋದ್ಯೋಗಿಗಳನ್ನು ವಿಶ್ವಾಸ ಪಡೆಯಬೇಕು. ಸೋಮವಾರ ರಾತ್ರಿ ತಿನ್ನುವಷ್ಟು ಕಡಿಮೆ ಸೇವಿಸಿ.

ಸಿಂಹ ರಾಶಿ:

ಈ ವಾರ ಸೂರ್ಯನ ಪ್ರಭಾವ ಇಲ್ಲದ ಕಾರಣ ಹೊಸ ಸ್ಥಾನಮಾನ ಅಥವಾ ಗೌರವ ದೊರೆಯುವ ಸಾಧ್ಯತೆ ಇದ್ದರೂ ಆಗದು. ಏನಾದರೂ ಅಡೆತಡೆಗಳು ನಿಮ್ಮ ಕಡೆಯಿಂದಲೂ ಸಂಸ್ಥೆಯ ಕಡೆಯಿಂದಲೂ ಬರಲಿದೆ. ನಾಯಕತ್ವದ ಅವಕಾಶಗಳನ್ನು ಪೂರ್ಣವಾಗಿ ಒಪ್ಪಿಕೊಳ್ಳಲಾರಿರಿ. ಆಡಳಿತ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿಶೇಷ ಯಶಸ್ಸು. ರವಿವಾರ ಸೂರ್ಯನಿಗೆ ನಮಸ್ಕಾರ ಮಾಡಿ. ಆರೋಗ್ಯ ಸುರಕ್ಷಿತವಾಗಿರುವುದು.

ಕನ್ಯಾ ರಾಶಿ:

ರಾಶಿ ಚಕ್ರದ ಆರನೇ ರಾಶಿಯವರಿಗೆ ಬುಧನ ಪ್ರಭಾವದಿಂದ ಯೋಜನೆಗಳಲ್ಲಿ ನಿಖರತೆಯನ್ನು ತಂದುಕೊಳ್ಳಿ. ಅಂಕಿ, ಅಂಶಕ್ಕೆ ಸಂಬಂಧಿಸಿದ ಕೆಲಸ ಯಶಸ್ವಿಯಾಗಿದೆ. ವಿವೇಕದಿಂದ ನಿರ್ಧಾರ ತೆಗೆದುಕೊಂಡಿಲ್ಲ. ಅಲ್ಪ ಮಾತು, ಅಧಿಕ ಕೃತ್ಯ, ಇದೆ ನಿಮ್ಮ ಯಶಸ್ಸಿನ ಗುಟ್ಟು. ಬುಧವಾರ ಹಸಿರು ಬಣ್ಣದ ವಸ್ತ್ರ ಧರಿಸಿದರೆ ಶುಭ.

ತುಲಾ ರಾಶಿ:

ಇದು ಏಳನೇ ರಾಶಿ ಶುಕ್ರನ ಅನುಗ್ರಹದಿಂದ ಕೆಲಸದ ವಾತಾವರಣ ಸೌಮ್ಯವಾಗಿರುತ್ತದೆ. ಸಹೋದ್ಯೋಗಿಗಳ ಸಹಕಾರವನ್ನು ಅಪೇಕ್ಷಿಸಲಾರಿರಿ. ಈ ವಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಶುಭ ಕಾಲ. ನಿಮ್ಮ ವ್ಯಾವಹಾರಿಕ ಗುಟ್ಟನ್ನು ಎಲ್ಲಿಯೂ ಪ್ರಕಟಪಡಿಸಲಾರಿರಿ. ಆರ್ಥಿಕ ಮೂಲವನ್ನು ನಿಮ್ಮದೆಂದು ಒಪ್ಪಿಕೊಳ್ಳಲಾರಿರಿ. ಮಹಾಗೌರಿಯನ್ನು ಸಂಧ್ಯಾಕಾಲದಲ್ಲಿ ಪ್ರಾರ್ಥಿಸಿ.

ವೃಶ್ಚಿಕ ರಾಶಿ:

ನವೆಂಬರ್ ತಿಂಗಳ ಮೂರನೇ ವಾರ ಈ ರಾಶಿಯವರಿಗೆ ಸೂರ್ಯನು ಈ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಖಚಿತ ಖಚಿತ. ಅಧಿಕಾರ ಅಥವಾ ಅಧಿಕರಿಗಳ ಜೊತೆ ಇರುವ, ಅವರ ಸಂಪರ್ಕ ಇಟ್ಟುಕೊಳ್ಳುವ ಸನ್ನಿವೇಶ ಬರಲಿದೆ. ವೈಯಕ್ತಿಕ ಪ್ರಯತ್ನಗಳಿಂದಲೇ ಯಶಸ್ಸು. ಉದ್ಯೋಗ ಬದಲಾವಣೆ ಯೋಚನೆಗಳು ಫಲಪ್ರದವಾಗಬಹುದು. ಭಾನುವಾರ ಅಲ್ಪ ಗೋಧಿಯನ್ನು ಗೋವಿಗೆ ನೀಡಿ.

ಧನು ರಾಶಿ:

ಹತ್ತನೆಯ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿಯಾದ ಬೃಹಸ್ಪತಿಯ ಅನುಗ್ರಹದಿಂದ ಶಿಕ್ಷಣ, ಸಂಶೋಧನೆ, ಧಾರ್ಮಿಕ ಕಾರ್ಯಗಳಲ್ಲಿ ಪ್ರಗತಿ. ಪ್ರಾಯೋಗಿ ಕೆಲಸಕ್ಕೆ ಹೆಚ್ಚು ತೊಡಗಿಸಿಕೊಳ್ಳಿ. ಹಿರಿಯರಿಂದ ಮಾರ್ಗದರ್ಶನವೂ ಸಕಾಲಕ್ಕೆ ದೊರೆಯುತ್ತದೆ. ಹಳದಿ ವಸ್ತ್ರ ಅಥವಾ ಹಳದಿ ಇರುವ ವಸ್ತ್ರ ಧರಿಸಿ.

ಇದನ್ನೂ ಓದಿ: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9 ರಿಂದ 15 ರ ತನಕ ವಾರಭವಿಷ್ಯ

ಮಕರ ರಾಶಿ:

ಮೂರನೆಯ ವಾರ ಶನಿಯ ಕೃಪೆಯಿಂದ ಶ್ರಮಪಟ್ಟು ಮಾಡಿದ ಕಾರ್ಯಕ್ಕೆ ಫಲ ಸಿಗುತ್ತದೆ. ಈ ಹಿಂದಿನ ಪ್ರಯತ್ನಗಳೂ ಕೆಲವು ಈ ವಾರ ಫಲಿಸುವುದು. ಆದಾಯ ನಿಧಾನವಾಗಿ. ಹಿರಿಯರ ಸಲಹೆ ಅನುಸರಿಸಿ. ನಿಮಗೆ ಶನಿವಾರ ಶುಭವಾಗುವುದು, ಎಳ್ಳಿನ ದೀಪವನ್ನು ಆಂಜನೇಯನ ಸನ್ನಿಧಿಯಲ್ಲಿ ಹೊತ್ತಿಸಿ.

ಕುಂಭ ರಾಶಿ:

ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ಮನಸ್ಸಿಗೆ ದ್ವಂದ್ವವನ್ನು ತಂದುಕೊಡುವನು. ಆದರೆ ಕೊನೆಯಲ್ಲಿ ತಿಳಿದೋ ತಿಳಿಯದೆಯೋ ಸಕಾರಾತ್ಮಕ, ಲಾಭದಾಯಕ ಅಂಶಕ್ಕೆ ನಿಮ್ಮ ತೀರ್ಮಾನ ಇರಲಿದೆ. ಕೆಲಸದಲ್ಲಿ ನಿಷ್ಠೆ ಹಾಗೂ ಕ್ರಮ ಎರಡೂ ಮುಖ್ಯ. ಹೆಚ್ಚು ಹೊಣೆಗಾರಿಕೆ ಗೌರವವೂ ಅಷ್ಟೇ. ದಿನ ಪ್ರತಿ ಹನುಮಾನ್ ಚಾಲೀಸ್ ಪಠಿಸಿರಿ.

ಮೀನ ರಾಶಿ:

ರಾಶಿ ಚಕ್ರದ ಕೊನೆಯ ರಾಶಿ ಗುರುವಿನ ದೃಷ್ಟಿಯಿಂದ ಕೆಲಸದಲ್ಲಿ ಅನುಭವಿಗಳ ಮಾರ್ಗದರ್ಶನ ದೊರೆಯುತ್ತದೆ. ಹೊಸ ಮಾರ್ಗ, ಹೊಸ ಯೋಚನೆಯಿಂದ ನಿಮಗೆ ಯಶಸ್ಸು. ಹಾಗೂ ಧರ್ಮದ ಬಲದಿಂದ ಎಲ್ಲ ತೊಂದರೆಗಳನ್ನೂ ಎದುರಿಸಬಹುದು. ಗುರುವಾರ ಶುಭವಾಗಿದ್ದು ಹೆಸರು ಕಾಳನ್ನು ಸೇವಿಸಿ.

– ಲೋಹಿತ ಹೆಬ್ಬಾರ್ – 8762924271 (What’s app only)



Source link

Leave a Reply

Your email address will not be published. Required fields are marked *