Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 18ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 18ರ ದಿನಭವಿಷ್ಯ


ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 18 ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮಕ್ಕಳ ಅನಾರೋಗ್ಯ ಸಮಸ್ಯೆ ನಿಮಗೆ ಚಿಂತೆಗೆ ಕಾರಣ ಆಗಬಹುದು. ಅಥವಾ ಮನೆಯ ಕಿರಿಯ ಸದಸ್ಯರು ಯಾರಿದ್ದಾರೆ ಅವರಿಗೆ ಶೀತ, ಕಫ, ಕೆಮ್ಮು ಇಂಥವುಗಳು ಹೆಚ್ಚಾಗಿ, ವೈದ್ಯರ ಬಳಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗೆ ಸ್ವಲ್ಪ ಕೂಡ ಇಷ್ಟ ಇಲ್ಲದ ವ್ಯಕ್ತಿಯ ಜೊತೆಯಾಗಿ ಅಥವಾ ಕೈ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಲಿದೆ. ಇನ್ನು ನಿಮ್ಮಲ್ಲಿ ಯಾರ ಬಟ್ಟೆ ವ್ಯಾಪಾರ ಮಾಡುತ್ತಾ ಇದ್ದೀರಿ ಅಂಥವರಿಗೆ ಕೊಟ್ಟಿರುವಂಥ ಸಾಲದ ವಸೂಲಾತಿ ಕಷ್ಟ ಎನಿಸುತ್ತದೆ, ನಿಮ್ಮಲ್ಲಿ ಕೆಲವರು ಪೊಲೀಸ್ ಸ್ಟೇಷನ್‌ಗೆ ಈ ಬಗ್ಗೆ ದೂರು ನೀಡುವ ಬಗ್ಗೆ ಆಲೋಚನೆ ಮಾಡಿದ್ದೇನೆ. ಅನಿರೀಕ್ಷಿತ ಪ್ರಯಾಣ ಎಂಬಂತೆ ಆಗಲಿದೆ, ಕೆಲವು ಗೊಂದಲಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮನೆಯಿಂದ ಹೊರಡುವಂತೆ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಮಕ್ಕಳಿಗಾಗಿ ಈ ದಿನ ಒಂದಲ್ಲಾ ಒಂದು ವಸ್ತುಗಳನ್ನು ಖರೀದಿಸುವಂಥ ಯೋಗವಿದೆ. ಅವರು ಕೇಳಿದ್ದ ಗ್ಯಾಜೆಟ್, ಸೈಕಲ್, ಕನಿಷ್ಠ ವಾಟರ್ ಕ್ಯಾನ್ ಹೀಗೆ ಯಾವುದಕ್ಕಾದರೂ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಿದೆ. ಉದ್ಯೋಗಸ್ಥರು ತಮ್ಮ ಬೆಳವಣಿಗೆಯ ಬಗ್ಗೆ ಬೇಸರಪಟ್ಟು, ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಡೆ ವರ್ಗಾವಣೆ ಮಾಡುವಂತೆ ತಮ್ಮ ಮೇಲಧಿಕಾರಿಗಳ ಜೊತೆ ಮಾತುಕಡೆ ನಡೆಸುವ ಸಾಧ್ಯತೆಯಿದೆ. ಸಣ್ಣ ಅಜಾಗರೂಕತೆಯೊಂದು ದೊಡ್ಡ ಬೆಲೆ ತೆರುವಂತೆ ಮಾಡಬಹುದು. ಆದ್ದರಿಂದ ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸಬೇಡಿ. ಹಾಗೂ ಒಂದು ವೇಳೆ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಒಮ್ಮೆ ಕೂಲಂಕಷವಾಗಿ ನೀವು ಪರಿಶೀಲಿಸುವುದು ಕ್ಷೇಮ ಹಾಗೂ ಉತ್ತಮ. ಯುಪಿಐ ಪಾವತಿ ಮಾಡುವವರು ಒಂದಕ್ಕೆ ನಾಲ್ಕು ಬಾರಿ ಪರಿಶೀಲಿಸಿ, ವ್ಯವಹಾರ ಮಾಡುವುದು ಒಳ್ಳೆಯದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ಹಿಂದೆ ನಿಮಗೆ ಯಾರ ಸಮಸ್ಯೆ ಮಾಡಿದ್ದರೋ ಅವರಿಗೆ ಇನ್ನಿಲ್ಲದಂತೆ ಕಾಡುವ ಸ್ಥಿತಿ ನಿಮ್ಮಲ್ಲಿ ಕೆಲವರಿಗೆ ಇರಲಿದೆ. ಹೆಜ್ಜೆಹೆಜ್ಜೆಗೆ ಕಿರಿಕಿರಿ ಮಾಡುತ್ತಾ ಇದ್ದವರ ಕೆಲವು ತಪ್ಪುಗಳು ನಿಮ್ಮ ಕಣ್ಣಿಗೆ ಬಿದ್ದು, ಎಷ್ಟು ಗೋಳು ಬರಿಸಬಹುದೋ ಅಷ್ಟು ಕಿರುಕುಳ ನೀಡುವುದಕ್ಕೆ ಮುಂದಾಗಿದೆ. ನಿಮಗೆ ನೆನಪಿರಬೇಕಾದ ಸಂಗತಿ ಏನೆಂದರೆ, ಇದು ಇಲ್ಲಿಗೇ ಮುಗಿಯುವುದಿಲ್ಲ. ಅನುಭವದ ಆಧಾರದಲ್ಲಿ ನೀವು ತೆಗೆದುಕೊಂಡಿರುವ ತೀರ್ಮಾನಗಳು ಒಳ್ಳೆ ಫಲ ನೀಡಲಿದೆ. ಅದರ ಫಲಿತಾಂಶ ಎಂಬಂತೆ ನಿಮಗೆ ದೊಡ್ಡ ಜವಾಬ್ದಾರಿ ವಹಿಸಬಹುದು ಹಾಗೂ ಆ ಮೂಲಕ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಮಾತ್ರೆ- ಔಷಧಿಗಳನ್ನು ತೆಗೆದುಕೊಳ್ಳುವಾಗ ಅಥವಾ ಖರೀದಿ ಮಾಡುವಾಗ ಎಕ್ಸ್ ಪೈರಿ ದಿನಾಂಕ ಗಮನಿಸಿ. ಒಂದು ವೇಳೆ ಸೇವಿಸಿದ ತಕ್ಷಣ ಅನಾರೋಗ್ಯ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ತೆರಳಿ.

ಇದನ್ನೂ ಓದಿ: ವಿಭೂತಿ ನಾಮಗಳ ಧಾರಣೆಯ ಆಧ್ಯಾತ್ಮಿಕ ರಹಸ್ಯವೇನು ಗೊತ್ತಾ?

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನನಗೊಂದು ನ್ಯಾಯ- ಯಾರಿಗೊಂದು ನ್ಯಾಯ ಯಾಕೆ ಎಂದು ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ಈ ದಿನ ನೀವು ಇರುತ್ತೀರಿ. ವಿದ್ಯಾರ್ಥಿಗಳೇ ಇರಬಹುದು, ಉದ್ಯೋಗಿಗಳು ಇರಬಹುದು ಅಥವಾ ವೃತ್ತಿಪರರು ಇರಬಹುದು. ನಿಮ್ಮ ಜೊತೆಗೆ ಚೆನ್ನಾಗಿ ನಡೆದುಕೊಂಡ ರೀತಿಗೆ ಸಿಟ್ಟಿಗೆ ತುತ್ತಾಗುತ್ತೀರಿ. ನಿಮ್ಮಲ್ಲಿ ಯಾರಿಗೆ ನಲವತ್ತು ವರ್ಷದ ಮೇಲೆ ವಯಸ್ಸಾಗಲಿದೆ ಅಂತಹವರು ನಿಮಗೆ ಕಾಡುತ್ತಿರುವ ನೋವು ಅಥವಾ ಅನಾರೋಗ್ಯದ ಸಮಸ್ಯೆಯ ಬಗ್ಗೆ ಸೂಕ್ತೋಪಚಾರ ಮಾಡುವವರಿಗೆ ಲಕ್ಷ್ಯವೈದ್ಯರಾಗಿದ್ದಾರೆ. ಸುಲಭವಾಗಿ ಆಗಬೇಕಾದ ಕೆಲಸ- ಕಾರ್ಯಗಳಿಗೆ ವಿಪರೀತ ಚಾಲನೆ ಆಗುತ್ತಿದೆ ಎಂಬ ಕಾರಣಕ್ಕೆ ಆಸಕ್ತಿಯನ್ನು ಕಳೆದುಕೊಳ್ಳಬೇಡಿ. ಸ್ನೇಹಿತರ ಸಂಬಂಧಿಗಳೋ ಸಹಾಯ ಮಾಡುವುದಾಗಿ ತಾವಾಗಿಯೇ ಮುಂದೆ ಬಂದಲ್ಲಿ ಅವರಿಗೆ ನೆರವು ನೀಡುವುದು, ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ತಂದೆ- ತಾಯಿಯ ಸಲುವಾಗಿ ನೀವು ಅಂದುಕೊಂಡ ಹಣ ಸಹಾಯ, ಔಷಧ ಮೊದಲಾದವುಗಳ ಖರೀದಿ ಇಂತಹವುಗಳಿಗೆ ನಿಮ್ಮ ಸೋದರ- ಸೋದರಿಯರು ಸಹ ಕೈ ಜೋಡಿಸುವ ಸಾಧ್ಯತೆಯಿದೆ. ದೀರ್ಘ ಕಾಲದಿಂದ ನೀವು ಹೋಗಬೇಕು ಎಂದುಕೊಂಡಿರುವ ಸ್ಥಳವೊಂದಕ್ಕೆ ಹೋಗಲು ಬೇಕಾದ ಎಲ್ಲ ಸಿದ್ಧತೆಗಳು ಪ್ರಾರಂಭವಾಗುತ್ತವೆ. ನಿಮ್ಮಲ್ಲಿ ಯಾರು ಚೀಟಿ ಕಟ್ಟಿದ್ದಾರೆ, ಅದು ಹಣವೇ ಆಗಿರಬಹುದು ಅಥವಾ ಚಿನ್ನದ್ದೇ ಆಗಿರಬಹುದು; ಅದರ ಬಗ್ಗೆ ಒಂದು ಗುಮಾನಿ ನಿಮ್ಮನ್ನು ಈ ದಿನ ಕಾಡಲಿದೆ. ಆದ್ದರಿಂದ ವಾಪಸ್ ಪಡೆದುಕೊಳ್ಳಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಪಿಆರ್ಒ ಆಗಿ ಸಂಘ-ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಮೇಲಧಿಕಾರಿಗಳು- ಸಂಬಂಧ ಪಟ್ಟ ವ್ಯಕ್ತಿಗಳು ನಿಮ್ಮ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹೇಗೆ ಹೊಂದಿಕೊಂಡು ಹೋಗೋಣ ಎಂದು ಯಾವ ವಿಷಯ ಅಥವಾ ವಿಚಾರ/ವ್ಯಕ್ತಿ ಬಗ್ಗೆ ಆಲೋಚನೆ ಮಾಡಿದ್ದರೋ ಅದರ ಕಡೆಗೆ ನಿಮಗೆ ವೈರತ್ವ ಮೂಡುವಂತೆ ಆಗಲಿದೆ. ಏಕಕಾಲಕ್ಕೆ ಎರಡು ಕಡೆ ಕೆಲಸವನ್ನು ಒಪ್ಪಿಕೊಂಡು, ಯಶಸ್ವಿಯಾಗಿ ಮಾಡಿ ಮುಗಿಸಿದೆ. ಸ್ವಂತ ವ್ಯವಹಾರ- ವ್ಯಾಪಾರ ಆರಂಭಿಸಲು ಬೇಕಾದ ಹಣಕಾಸಿನ ಸಂಪನ್ಮೂಲಕ್ಕೆ ಪ್ರಯತ್ನ ಪಡುತ್ತಾ ಇರುತ್ತೀರೋ ಅದು ಸಾಧ್ಯವಾಗಲಿದೆ. ಪ್ರಭಾವಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ಸ್ನೇಹಿತರು ಯಾರೋ ತಮ್ಮ ಕಾಂಟ್ಯಾಕ್ಟ್ ನಲ್ಲಿ ಇರುವವರನ್ನು ನಿಮಗೆ ಪರಿಚಯಿಸಲಿದ್ದಾರೆ, ಅದರಿಂದ ಕೂಡ ಹಲವು ಅನುಕೂಲ ನಿಮಗೆ ಒದಗಿ ಬರಲಿದೆ. ಕಟ್ಟಡ ನಿರ್ಮಾಣ, ಇಂಟೀರಿಯರ್ ಡೆಕೊರೇಷನ್ ಇಂಥವುಗಳಲ್ಲಿ ತೊಡಗಿಸಿಕೊಂಡವರಿಗೆ ದೊಡ್ಡ ಕಾಂಟ್ರಾಕ್ಟ್ ಹುಡುಕಿಕೊಂಡು ಬರಲಿದೆ. ಆ ಕೆಲಸಗಳಿಗೆ ಅಡ್ವಾನ್ಸ್ ಕೂಡ ಪಡೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂಬಷ್ಟು ರೇಜಿಗೆ ಈ ದಿನ ನಿಮಗೆ ಆಗಲಿದೆ. ಒಬ್ಬೊಬ್ಬರು ಒಂದು ರೀತಿ ಹೇಳುತ್ತಾ, ಒಂದು ಕೆಲಸವನ್ನು ನಾಲ್ಕೈದು ಬಾರಿ, ನಾಲ್ಕೈದು ರೀತಿಯಲ್ಲಿ ಮಾಡುವಂತೆ ಆಗಲಿದೆ. ಎಲ್ಲರಿಗೂ ಒಳ್ಳೆಯವರು ಎಂಬ ಆಲೋಚನೆಯನ್ನು ಬಿಟ್ಟು, ಹೊರಗೆ ಬನ್ನಿ. ನೀವು ಹೇಳಬೇಕು ಅಂದುಕೊಂಡ ವಿಚಾರವನ್ನು ನೇರವಾಗಿ ಹೇಳಲು ಪ್ರಯತ್ನಿಸಿ. ಹಣಕಾಸಿನ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರ ಆಕ್ಷೇಪಕ್ಕೆ ಹಾಗೂ ನಿಂದನೆಗೆ ಗುರಿಯಾಗಲಿದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಇಂಥವುಗಳಿಗೆ ಹೂಡಿಕೆ ಮಾಡಬೇಕು ಎಂದಿರುವವರು ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ. ಅತಿಯಾದ ಆತ್ಮವಿಶ್ವಾಸದಿಂದ ನೀವು ಮಾಡಿದ ಕೆಲಸಗಳಿಂದ ನಷ್ಟವನ್ನು ಅನುಭವಿಸುವಂತೆ ಆಗಲಿದೆ, ಎಚ್ಚರಿಕೆ ವಹಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಬೆಳವಣಿಗೆ ಕಂಡು ಮತ್ಸರ ಪಡುವವರು ಯಾರು ಎಂಬುದು ಈ ದಿನ ನಿಮ್ಮ ಗಮನಕ್ಕೆ ಬರಲಿದೆ. ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿರುವವರು, ದೊಡ್ಡ ಗುಂಪನ್ನು ಮುನ್ನಡೆಸುವ ನಾಯಕತ್ವ ಸ್ಥಾನದಲ್ಲಿ ಇರುವವರು ನಿಮ್ಮ ಗಮನಕ್ಕೆ ಬಂದ ಸಂಗತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ತಲೆಕೂದಲು- ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಇವೆ ಎಂದಾದರೆ ಅದು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಈ ರಾಜಕಾರಣದಲ್ಲಿ ಇರುವಂಥವರು ಯಾರ ಜೊತೆಗೆ ಗುರುತಿಸಿಕೊಂಡಿದ್ದಾರೆ ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಕ್ಷೇಮ. ಎಲ್ಲರಿಗೂ ಅನ್ವಯಿಸುವ ಮಾತು ಏನೆಂದರೆ, ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂಥ ಸಾಧ್ಯತೆ ಇರುತ್ತದೆ, ಸಂಪೂರ್ಣ ವಿಷಯಗಳ ಬಗ್ಗೆ ಮಾತನಾಡಲು ಯಾವುದೇ ಮಾಹಿತಿ ಇಲ್ಲ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ಗುಟ್ಟು ಬಿಟ್ಟುಕೊಡದೆ ಮಾಡಿದ ಕೆಲಸಗಳು ಸಕಾರಾತ್ಮಕ ಫಲಗಳನ್ನು ಕಾಣುವುದಕ್ಕೆ ಶುರುವಾಗುತ್ತದೆ. ಅನಿರೀಕ್ಷಿತವಾಗಿ ನಿಮ್ಮಲ್ಲಿ ಕೆಲವರ ಆದಾಯದಲ್ಲಿ ಕಾಣಿಸಿಕೊಳ್ಳುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಇರುವ ವಿರಸ- ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಬಹಳ ಕಾಲದಿಂದ ಬಾಕಿ ಉಳಿದುಹೋಗಿದ್ದ ಮನೆ, ಸೈಟು ಅಥವಾ ಜಮೀನಿನ ಕಾಗದ- ಪತ್ರ, ದಾಖಲೆಗಳ ಸಮಸ್ಯೆ ಬಗೆಹರಿಸಲು ನಿಮ್ಮ ಸ್ನೇಹಿತರ ನೆರವು ನೀಡಲಿದ್ದಾರೆ. ಸೋದರ ಸಂಬಂಧಿಗಳ ಕಷ್ಟಕ್ಕೆ ನೀವು ಸಹಾಯ ಮಾಡಿದ್ದೀರಿ. ನಿಮ್ಮ ಮನೆಯಲ್ಲಿ ಇರುವಂಥ ಮಂಚ, ಸೋಫಾ, ದೀವಾನ ಇಂಥ ಹಳೆಗಳ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಲೇವಾದೇವಿ ವ್ಯವಹಾರ ಮಾಡುತ್ತಾ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕೆಲವು ವ್ಯಕ್ತಿಗಳಿಂದ ತತ್ ಕ್ಷಣವೇ ವಸೂಲಿ ಮಾಡುವುದರಿಂದ ಅಪಾಯ ಕಡಿಮೆಯಾಗುವುದನ್ನು ಗಮನಿಸಬೇಕು.

ಲೇಖನ- ಎನ್.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *