Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 20ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 20ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 20ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮಲ್ಲಿ ಇರುವಂತಹ ನಾಯಕತ್ವದ ಗುಣಗಳು ಇತರರಿಗೂ ಅನುಭವಕ್ಕೆ ಬರುವಂಥ ದಿನ ಇದಾಗಿದೆ. ಉದ್ಯೋಗಸ್ಥರಲ್ಲಿ ನೀವು ಕೆಲಸ ಮಾಡುವ ಸ್ಥಳ- ಕಚೇರಿಯಲ್ಲಿ ನಿಮ್ಮ ನಿರ್ಧಾರಗಳು ಮತ್ತು ಸಲಹೆಗಳಿಗೆ ಮನ್ನಣೆ ಸಿಗಲಿದೆ. ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗಲಿದೆ, ಆರ್ಥಿಕವಾಗಿಯೂ ಸದೃಢರಾಗುವಿರಿ. ದೀರ್ಘಕಾಲ ಸಾಲವೊಂದು ತೀರಿಸುವ ಸಾಧ್ಯತೆ ಇದೆ. ಕೌಟುಂಬಿಕ ವಿಚಾರಗಳಲ್ಲಿ ನಡೆಯುವಂಥ ಮಾತುಕತೆಗಳಲ್ಲಿ ನೀವೇ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸಿ. ಇನ್ನು ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ನೆನಪಲ್ಲಿ ಇರಬೇಕಾದದ್ದು ಏನೆಂದರೆ, ನಿಮ್ಮ ಆತ್ಮವಿಶ್ವಾಸ ಕೆಲವೊಮ್ಮೆ ಅಹಂಕಾರದಂತೆ ಅಥವಾ ಇತರರ ಮೇಲಿನ ಅತಿಯಾದ ನಿಯಂತ್ರಣದಂತೆ ಕಾಣಿಸಬಹುದು. ಬೇರೆಯವರ ಅಭಿಪ್ರಾಯಗಳನ್ನು ಸಹ ಮುಕ್ತ ಮನಸ್ಸಿನಿಂದ ಆಲಿಸಿ. ಒಂದು ವಿಚಾರಕ್ಕೆ ಅದು ಆಗಲೇಬೇಕು ಎಂದು ವಿಪರೀತ ಪಟ್ಟು ಹಿಡಿದು ಕೂರುವುದು ಒಳ್ಳೆಯದಲ್ಲ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕ್ರಿಯೇಟಿವ್ ಮತ್ತು ಕಲೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಇಂದು ಉತ್ತಮ ದಿನ. ಭಾವನಾತ್ಮಕ ನಿರ್ಧಾರಗಳಿಂದ ಸಾಧ್ಯವಾದಷ್ಟೂ ದೂರವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ದೊಡ್ಡ ಮೊತ್ತದ ಹೂಡಿಕೆ ಮಾಡುವ ಮುನ್ನ ಯಾವುದೇ ಸಲಹೆ ತೆಗೆದುಕೊಳ್ಳಬೇಕು ಎಂಬುದು ಗಮನದಲ್ಲಿರಲಿ. ನಿಮ್ಮ ಭಾವನೆಗಳಿಗೆ ಸಣ್ಣ ಸಣ್ಣ ಸಂಗತಿಗಳು ಸಹ ಘಾಸಿ ಮಾಡಬಹುದು. ಆದ್ದರಿಂದ ಯಾವುದೇ ವ್ಯಕ್ತಿ ಅಥವಾ ವಿಷಯವನ್ನು ತುಂಬಿಸಿಕೊಳ್ಳಬೇಡಿ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ನೆಮ್ಮದಿ ಸಿಗುತ್ತದೆ. ಸಣ್ಣ ವಿಷಯಗಳನ್ನು ಅತಿಯಾಗಿ ಚಿಂತಿಸುವುದನ್ನು ತಪ್ಪಿಸುವುದಕ್ಕಾಗಿ ನಿಮಗೆ ಬರುವಂಥ ಆಲೋಚನೆಗಳನ್ನು ಬರೆದಿಡುವ ಅಭ್ಯಾಸ ಮಾಡಿ. ಇದನ್ನು ಈ ದಿನದ ಮಟ್ಟಿಗೆ ಮಾಡಿದರೂ ಸಾಕು.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮಲ್ಲಿ ಯಾರ ಶಿಕ್ಷಣ, ಬ್ಯಾಂಕಿಂಗ್ ಅಥವಾ ಕನ್ಸಲ್ಟಿಂಗ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದೀರಿ, ಅಂಥವರಿಗೆ ಯಶಸ್ಸು ಸಿಗಲಿದೆ. ನಿಮ್ಮ ತಿಳಿವಳಿಕೆ- ಅನುಭವ- ಜ್ಞಾನಕ್ಕೆ ಹಾಗೂ ಅದರ ಸರಿಯಾದ ಬಳಕೆಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ. ವ್ಯಾಪಾರದ ವಿಸ್ತರಣೆಯ ವಿಚಾರಕ್ಕೆ ನೀವು ಕೈಗೊಳ್ಳುವ ಪ್ರಯಾಣವು ಲಾಭದಾಯಕ ಆಗಲಿದೆ. ಅಧಿಕ ಖರ್ಚು ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಮುಖ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚುತ್ತದೆ. ಗುರು ಸಮಾನರಾದ ವ್ಯಕ್ತಿಗಳನ್ನು ಈ ದಿನ ಭೇಟಿಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸೌಹಾರ್ದ ವಾತಾವರಣ ಇರುತ್ತದೆ. ನೀವು ಸಾಮಾನ್ಯವಾಗಿ ಇತರರಿಗೆ ಸಲಹೆಗಳನ್ನು ನೀಡಲು ಬಯಸುತ್ತೀರಿ. ಈ ದಿನ ಅವರನ್ನು ಕೇಳಿದಾಗ ಮಾತ್ರ ಸಲಹೆ ನೀಡಿ ಇತರರ ಪರ್ಸನಲ್ ಅವರನ್ನು ಗೌರವಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಭವಿಷ್ಯದ ಬಗ್ಗೆ ಯೋಚಿಸಿ, ಅದರ ಕಡೆಗೆ ನೀವು ಮಾಡಿದ ಕೆಲಸದ ಫಲವಾಗಿ ಈ ಹಿಂದಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ತಾಂತ್ರಿಕ ಕ್ಷೇತ್ರ, ರಾಜಕೀಯ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಕಾರ್ಯ ನಿರ್ವಹಿಸುವವರು ಉತ್ತಮ ಯಶಸ್ಸು ಕಾಣುವಿರಿ. ಆದರೆ ಹಣಕಾಸಿನ ನಿರ್ವಹಣೆಯಲ್ಲಿ ಸ್ಪಷ್ಟವಾಗಿ ಇರಿಸಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ಅನಿರೀಕ್ಷಿತವಾಗಿ ಎದುರಾಗಬಹುದು. ಸರ್ಕಾರದಿಂದ ನೋಟೀಸ್ ನೀಡುವ ಸಾಧ್ಯತೆ ಇದೆ. ಇನ್ನು ನಿಮ್ಮ ಆಪ್ತ ಸಣ್ಣ ಮಟ್ಟದಲ್ಲಾದರೂ ವಿವಾದಗಳು ಉಂಟಾಗಬಹುದು. ಯಾವುದೇ ಕಾರಣಕ್ಕೂ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಏಕೆಂದರೆ ಇದೇ ವಿಚಾರಕ್ಕೆ ನಿಮ್ಮ ಮನಸ್ಸಿನ ಆತಂಕ ಉಂಟಾಗಬಹುದು. ಅನಗತ್ಯವಾದ ಆತಂಕ ಮತ್ತು ಅಸುರಕ್ಷತೆ ಭಾವ ಕಾಡಬಹುದು. ನಿಮ್ಮ ಆಲೋಚನೆಗಳು ವಾಸ್ತವಕ್ಕೆ ಹತ್ತಿರದಲ್ಲಿಯೇ ಅಥವಾ ಕೇವಲ ಊಹೆಯೇ ಎಂದು ವಿಶ್ಲೇಷಿಸಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಎಲ್ಲ ಕೆಲಸಗಳಿಗೆ ವೇಗವನ್ನು ನೀಡಲಾಗುವುದು. ಒಂದೇ ಸಮಯಕ್ಕೆ ಹಲವು ಕೆಲಸಗಳನ್ನು ನಿರ್ವಹಿಸುವುದರಲ್ಲಿ ತೊಡಗಿಸಿಕೊಳ್ಳುತ್ತೀರಿ. ವ್ಯಾಪಾರ- ವ್ಯವಹಾರ ಅಥವಾ ಇನ್ಯಾವುದೇ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಅಥವಾ ಮಾತುಕತೆ ನಡೆಸಲು ಸೂಕ್ತ ಸಮಯ. ನಿಮ್ಮಲ್ಲಿ ಕೆಲವರಿಗೆ ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಲಿದೆ. ಪ್ರಯಾಣದ ಮೂಲಕ ವರಮಾನಕ್ಕೆ ದಾರಿ ಆಗುವ ಸಾಧ್ಯತೆಯಿದೆ. ನಿಮ್ಮ ಮಾತಿನ ಚಾತುರ್ಯದಿಂದ ಯಾವುದೇ ತೊಂದರೆ ನಿವಾರಿಸಿಕೊಳ್ಳಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ ಇರುತ್ತದೆ, ಇದರಿಂದ ಕೆಲವು ಅನುಕೂಲ ಆಗಲಿದೆ. ಈ ದಿನದ ಕೊನೆಯಲ್ಲಿ ಮಾನಸಿಕ ಮತ್ತು ದೈಹಿಕ ದಣಿವು ಹೆಚ್ಚಾಗುತ್ತದೆ. ಮುಖ್ಯವಾದ ಕೆಲಸಗಳು ಯಾವುದಾದರೂ ಒಂದು ಪಟ್ಟಿಯನ್ನು ಮಾಡಿ, ಅದಕ್ಕಾಗಿ ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಧಕ-ಬಾಧಕಗಳನ್ನು ಪರಿಶೀಲಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮಲ್ಲಿ ಯಾರ ಕಲೆ, ಅಲಂಕಾರಿಕ ವಸ್ತುಗಳು, ಮನರಂಜನೆ ಅಥವಾ ಐಷಾರಾಮಿ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತೀರಿ, ಅಂಥವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರಿಗೆ ದೀರ್ಘಾವಧಿಗೆ ದೊಡ್ಡ ಆರ್ಡರ್ ಗಳು ದೊರೆಯಬಹುದು. ಐಟಿ- ಬಿಪಿಒ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಸ್ಪಷ್ಟತೆ ಇರಲಿ. ಪ್ರೀತಿಪಾತ್ರಗಳೊಂದಿಗೆ ಉತ್ತಮ ಬಾಂಧವ್ಯ ಇರಲಿದೆ, ಕಿರು ಪ್ರವಾಸಕ್ಕೆ ತೆರಳುವ ಯೋಗವಿದೆ. ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಮಾರಾಟ ಮಾಡಿ, ಬದಲಿಗೆ ಹೊಸದನ್ನು ಖರೀದಿಸುವ ಬಗ್ಗೆ ಆಲೋಚನೆ ಮಾಡುವಿರಿ. ನೀವು ಸಾಮಾನ್ಯವಾಗಿ ಎಲ್ಲರನ್ನೂ ಖುಷಿಯಾಗಿಡಲು ಪ್ರಯತ್ನಿಸುತ್ತೀರಿ. ಆದರೆ ಈ ದಿನ ನಿಮ್ಮ ಅಗತ್ಯಗಳ ಕಡೆಗೆ ಸಹ ಗಮನ ಹರಿಸುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಇನ್ ಟ್ಯೂಷನ್ ಮೂಲಕ ಬರುವಂಥ ವಿಚಾರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ. ಅದರ ವಿರುದ್ಧವಾಗಿ ನಡೆದುಕೊಳ್ಳುವುದೇ ಉತ್ತಮ. ಸಂಶೋಧನೆ ಕಾರ್ಯ ನಿರ್ವಹಿಸುವವರಿಗೆ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಇರುವವರಿಗೆ ಕೆಲವು ಪ್ರಾಜೆಕ್ಟ್‌ಗಳಲ್ಲಿ ಯಶಸ್ಸು ದೊರೆಯಲಿದೆ. ಎಷ್ಟರಮಟ್ಟಿಗೆ ಇದ್ದ ಹಣಕಾಸಿನ ವಿಚಾರದಲ್ಲಿ ವ್ಯಾಜ್ಯಗಳು ಇತ್ಯರ್ಥ ಆಗಬಹುದು ಅಥವಾ ಅದರ ಬಗ್ಗೆ ಸೂಚನೆ ನಿಮಗೆ ದೊರೆಯಲಿದೆ. ವೃತ್ತಿ ಅಥವಾ ಉದ್ಯೋಗ ಮಾಡುವ ಸ್ಥಳದಲ್ಲಿ ಗೊಂದಲದ ಸ್ಥಿತಿ ಇರಲಿದೆ. ಏಕಾಂತದಲ್ಲಿ ಸಮಯ ಕಳೆಯಲು ಹಾಗೂ ತೀರಾ ಗಂಭೀರವಾದ ವಿಚಾರಗಳ ಅಂತಿಮ ನಿರ್ಧಾರಕ್ಕಾಗಿ ಘನವಾದ ಆಲೋಚನೆಗಳಲ್ಲಿ ತೊಡಗಿಸಿಕೊಳ್ಳಿ. ವಿದೇಶ ಪ್ರಯಾಣಕ್ಕೆ ತೆರಳಲು ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳಲಿದೆ. ಈ ದಿನ ನಿಮ್ಮ ಬಹುಪಾಲು ಸಮಯವನ್ನು ತೆಗೆದುಕೊಳ್ಳುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪೇಪರ್ ವರ್ಕ್, ಬಜೆಟ್ ಮಾಡಿ ಇಷ್ಟು ಸಮಯ ನೀವು ಪಟ್ಟ ಶ್ರಮ ಮತ್ತು ಕಾಯ್ದುಕೊಂಡಿದ್ದಂಥ ತಾಳ್ಮೆಗೆ ಈ ದಿನ ಪ್ರತಿಫಲ ದೊರೆಯಲಿದೆ. ಹೂಡಿಕೆ, ಭೂಮಿ ವ್ಯವಹಾರ ಅಥವಾ ಕಾನೂನು ವಿಷಯಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನೀವು ವಹಿಸಿಕೊಂಡಿರುವ ಹೊಸ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಈ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಲಿ. ಆಮೇಲೆ ಹೇಳಿದರಾಯಿತು ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ. ಮನೆಯಲ್ಲಿನ ಹಿರಿಯರ ಆರೋಗ್ಯದ ಸಮಸ್ಯೆಗಳು ಇದ್ದಲ್ಲಿ ಅದು ಸುಧಾರಿಸಲಿದೆ. ವರ್ಕ್-ಲೈಫ್ ಮಧ್ಯೆ ಸಮತೋಲನ ಕಾಯ್ದುಕೊಳ್ಳಿ. ಕೆಲಸದ ಒತ್ತಡ ಮತ್ತು ಜವಾಬ್ದಾರಿಯ ಭಾರ ಹೆಚ್ಚಾಗಬಹುದು. ನಿಮ್ಮ ಕೆಲಸಗಳನ್ನು ವಿಂಗಡಿಸಿಕೊಂಡು, ಒಂದೊಂದಾಗಿ ನಿಭಾಯಿಸಿ. ಎಲ್ಲವನ್ನೂ ಒಂದೇ ಸಮಯಕ್ಕೆ ಮಾಡುವ ಹಾಗೂ ನಾನೇ ಮಾಡಬೇಕು ಎಂಬ ಧೋರಣೆ ಬೇಡ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನ ನಿಮ್ಮ ಎನರ್ಜಿ ಮತ್ತು ಉತ್ಸಾಹದಿಂದ ಬಹಳ ಚೆನ್ನಾಗಿ ಇರುತ್ತದೆ ಹಾಗೂ ಇದೇ ಕಾರಣದಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳಲ್ಲಿ ತೋರಿದ ನಾಯಕತ್ವ ಗುಣಗಳು ಮೇಲಧಿಕಾರಿಗಳು ಹಾಗೂ ಸಂಬಂಧಪಟ್ಟವರ ಮೆಚ್ಚುಗೆ ಗಳಿಸುತ್ತಾರೆ. ನೀವು ಮಾಡುತ್ತಿರುವ ವ್ಯಾಪಾರ- ವ್ಯವಹಾರದಲ್ಲಿ ಲಾಭ ಇರಲಿದೆ. ಭೂಮಿ ಅಥವಾ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರಿಗೆ ಶುಭ ದಿನ. ನಿಮ್ಮ ರಕ್ತಸಂಬಂಧಿಗಳಿಂದ ಕೆಲವು ತೊಂದರೆಗಳು ಆಗಬಹುದು. ಅವರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನಿಮ್ಮ ಕೋಪ ಮತ್ತು ಆಕ್ರಮಣಕಾರಿ ಧೋರಣೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ವಿವಾದ ಆಗಬಹುದು ಎಂದು ಯಾವುದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವ ಮೊದಲು ಆಲೋಚಿಸಿ, ಮಾತನಾಡಿ. ದೈಹಿಕ ವ್ಯಾಯಾಮದಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *